ಹೈದರಾಬಾದ್ (ತೆಲಂಗಾಣ): 2022-23ರ ಕೇಂದ್ರ ಬಜೆಟ್ ವಿಚಾರವಾಗಿ ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರ ಹೇಳಿಕೆ ವಿರುದ್ಧ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷೆ ಡಿ ಕೆ ಅರುಣಾ ವಾಗ್ದಾಳಿ ನಡೆಸಿದ್ದಾರೆ. ಕೆಸಿಆರ್ ಸರ್ಕಾರವು ಬಿಜೆಪಿಯ ಬೆಳವಣಿಗೆಯ ಕಂಡು ಆತಂಕ್ಕೊಳಗಾಗಿದ್ದಾರೆ ಎಂದು ಟೀಕಿಸಿದ್ದಾರೆ.
ಮಂಗಳವಾರದಂದು ಸಿಎಂ ಕೆಸಿಆರ್ ಅವರು ಕೇಂದ್ರ ಬಜೆಟ್ 2022ರ ಬಗ್ಗೆ ನಿರಾಶೆ ವ್ಯಕ್ತಪಡಿಸಿದ್ದರು. ಬಿಜೆಪಿ ನೇತೃತ್ವದ ಕೇಂದ್ರವನ್ನು ತೆಗೆದು ಬಂಗಾಳ ಕೊಲ್ಲಿಯಲ್ಲಿ ಎಸೆಯುವ ಅಗತ್ಯವಿದೆ, ಆಗ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂಬ ಹೇಳಿಕೆ ನೀಡಿದ್ದರು. ದೇಶದ ಜನರ ನಿರೀಕ್ಷೆ ಪೂರೈಸಲು ಹಾಗೂ ಬದಲಾವಣೆ ತರಲು ಹೊಸ ಸಂವಿಧಾನ ಬರೆಯುವ ಅಗತ್ಯವಿದೆ ಎಂದು ಕೆಸಿಆರ್ ನೀಡಿದ್ದ ಹೇಳಿಕೆ ಈಗ ವಿವಾದದ ರೂಪ ಪಡೆದಿದೆ.