ಮುಂಬೈ:ಗಾಸಿಪ್ಗಳ ನಡುವೆ ವೈವಾಹಿಕ ಕಾಲಿಡುತ್ತಿರುವ ಬಾಲಿವುಡ್ ನಟಿ ಕತ್ರಿನಾ ಕೈಫ್ ಮತ್ತು ನಟ ವಿಕ್ಕಿ ಕೌಶಲ್ ಮದುವೆಯ ವಿಶೇಷ ವಿಡಿಯೋಗಾಗಿ OTT ಸಂಸ್ಥೆಯೊಂದು ಬರೋಬ್ಬರಿ 100 ಕೋಟಿ ರೂ. ಬೇಡಿಕೆ ಇಟ್ಟಿದೆ ಎಂಬ ಮಾಹಿತಿ ದೊರೆತಿದೆ.
ಕತ್ರಿನಾ-ವಿಕ್ಕಿ ಮದುವೆಯ ವಿಶೇಷ ವಿಡಿಯೋಗೆ 100 ಕೋಟಿ ರೂ ಆಫರ್? - katrina kaif vicky kaushal wedding video
ಬಾಲಿವುಡ್ ಸ್ಟಾರ್ ಜೋಡಿ ಕತ್ರಿನಾ ಮತ್ತು ವಿಕ್ಕಿ ಕೌಶಲ್ ಅವರ ಮದುವೆಯ ವಿಡಿಯೋಗೆ ಸಂಸ್ಥೆಯೊಂದು 100 ಕೋಟಿ ರೂ. ಮೊತ್ತದ ದೊಡ್ಡ ಆಫರ್ ನೀಡಿದೆ ಎಂಬ ಸುದ್ದಿ ಹರಿದಾಡುತ್ತಿದೆ.
ಕತ್ರಿನಾ ವಿಕ್ಕಿ ಮದುವೆ
2018ರಲ್ಲಿ ವಿವಾಹವಾದ ಬಾಲಿವುಡ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಅವರಿಗೂ OTT ಪ್ಲಾಟ್‌ಫಾರ್ಮ್‌ನಿಂದ ಇದೇ ರೀತಿಯ ಬೇಡಿಕೆ ಬಂದಿತ್ತು. ಆದರೆ ಅವರು ಈ ಪ್ರಸ್ತಾಪವನ್ನು ನಿರಾಕರಿಸಿದ್ದರು.
ಸದ್ಯ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ವಿವಾಹದ ಚರ್ಚೆ ದೇಶದ ವಿವಿಧ ಭಾಗಗಳಲ್ಲಿ ನಡೆಯುತ್ತಿದೆ. ತಾರಾಜೋಡಿಯು ಡಿಸೆಂಬರ್ 9ರಂದು ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯಲ್ಲಿ ಅದ್ಧೂರಿಯಾಗಿ ಮದುವೆಯಾಗಲಿದ್ದು, ಎಲ್ಲಾ ಸಿದ್ಧತೆಗಳೂ ನಡೆದಿವೆ.