ಹೈದರಾಬಾದ್: ಬಾಲಿವುಡ್ ನಟ ಕಾರ್ತಿಕ್ ಆರ್ಯನ್ ಅವರಿಗೆ ಕೊರೊನಾ ದೃಢಪಟ್ಟಿದೆ. ಈ ಬಗ್ಗೆ ಅವರೇ ತಮ್ಮ ಇನ್ಸ್ಟಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಕಾರ್ತಿಕ್ ಆರ್ಯನ್ಗೆ ಕೊರೊನಾ ದೃಢ:'ದುವಾ ಕರೋ'ಎಂದ ನಟ - Bollywood actor Kartik Aaryan on Monday shared that he has COVID-19 positive
ಕಾರ್ತಿಕ್ ಆರ್ಯನ್ಗೆ ಕೊರೊನಾ ದೃಢಪಟ್ಟಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಅವರು, ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುವಂತೆ ಅಭಿಮಾನಿಗಳನ್ನು ಕೇಳಿ ಕೊಂಡಿದ್ದಾರೆ.
ಕಾರ್ತಿಕ್ ಆರ್ಯನ್ಗೆ ಕೊರೊನಾ ದೃಢ
ಭೂಲ್ ಭೂಲೈಯಾ 2 ಚಿತ್ರದ ಚಿತ್ರೀಕರಣದಲ್ಲಿದ್ದ ಕಾರ್ತಿಕ್ ಅವರು ದಿಢೀರನೇ ಈಗ ತಮ್ಮ ಸಾಮಾಜಿಕ ಮಾಧ್ಯಮದ ಮೂಲಕ ಅಭಿಮಾನಿಗಳಿಗೆ ಕೊರೊನಾ ದೃಢವಾಗಿರುವುದನ್ನು ತಿಳಿಸಿದ್ದಾರೆ. "ಪಾಸಿಟಿವ್ ಧನಾತ್ಮಕ ಹೋ ಗಯಾ. ದುವಾ ಕರೋ" ಎಂದು ಬರೆದುಕೊಂಡಿದ್ದಾರೆ.
ಭಾನುವಾರ, ಮುಂಬೈನಲ್ಲಿ 3,779 ಹೊಸ ಕೊರೊನಾ ಪ್ರಕರಣಗಳು ವರದಿಯಾಗಿವೆ. ಒಟ್ಟಾರೆ 3,62,675 ಪ್ರಕರಣಗಳಾಗಿದ್ದು, ಸಾವಿನ ಸಂಖ್ಯೆ 11,586 ಕ್ಕೆ ಏರಿದೆ.