ಹೈದರಾಬಾದ್:ನಟ, ರಾಜಕಾರಣಿ ಕಮಲ್ ಹಾಸನ್ ನಟನೆಯ ಚಿತ್ರ ವಿಕ್ರಮ್ಗೋಸ್ಕರ ಅವರು ಭರದ ಪ್ರಚಾರ ಕಾರ್ಯ ನಡೆಸುತ್ತಿದ್ದು, ಇಂದು ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿದರು. ಈ ವೇಳೆ ಬಾಲಿವುಡ್ ವರ್ಸಸ್ ಸೌತ್ ಚರ್ಚೆ ವಿಚಾರವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಪಡೋಸನ್ ಒಂದು ಪ್ಯಾನ್ ಇಂಡಿಯಾ ಚಿತ್ರ, ಮೊಘಲ್ ಎ ಅಜಮ್ ಕೂಡ ನನಗೆ ಪ್ಯಾನ್ ಇಂಡಿಯಾ ಚಿತ್ರವಾಗಿದೆ. ನಮ್ಮ ದೇಶ ವೈಶಿಷ್ಟ್ಯತೆಯಿಂದ ಕೂಡಿದ್ದು, ಅಮೆರಿಕಗಿಂತಲೂ ಭಿನ್ನವಾಗಿದೆ. ನಾವು ತುಂಬಾ ವಿಭಿನ್ನರು. ಬೇರೆ ಬೇರೆ ಭಾಷೆ ಮಾತನಾಡುತ್ತೇವೆ ಆದರೆ ಒಗ್ಗಟ್ಟಾಗಿದ್ದೇವೆ ಅದು ಈ ದೇಶದ ಸೌಂದರ್ಯ ಎಂದು ಹೇಳಿರುವ ನಟ ಕಮಲ್ ಹಾಸನ್ ನಾನೋರ್ವ ಭಾರತೀಯ ಎಂದು ಹೇಳಿಕೊಂಡಿದ್ದಾರೆ.
ಪತ್ರಕರ್ತನೋರ್ವ ಬಾಲಿವುಡ್ ವರ್ಸಸ್ ಸೌತ್ ವಿಚಾರವಾಗಿ ಪ್ರಶ್ನೆ ಕೇಳಿದ್ದು, ಈ ವೇಳೆ ಪ್ರತಿಕ್ರಿಯೆ ನೀಡಿರುವ ಕಮಲ್ ಹಾಸನ್, ಪ್ಯಾನ್ ಇಂಡಿಯಾ ಚಿತ್ರ ಈ ಹಿಂದಿನಿಂದಲೂ ಬರುತ್ತಿವೆ. ಈ ಹಿಂದೆ ಶಾಂತಾರಾಮ್ ಜಿ ಅನೇಕ ಪ್ಯಾನ್ ಇಂಡಿಯಾ ಚಿತ್ರ ಮಾಡಿದ್ದಾರೆ.
ಅವರ ಪಡೋಸನ್, ಮೊಘಲ್ ಎ ಅಜಮ್ ಕೂಡ ಆ ಸಾಲಿಗೆ ಸೇರಿಕೊಳ್ಳುತ್ತವೆ. ಪ್ಯಾನ್ ಇಂಡಿಯಾ ಚಿತ್ರ ಎಂಬುದು ಹೊಸದೇನೂ ಅಲ್ಲ. ಯಾವಾಗಲೂ ಇಂತಹ ಚಿತ್ರಗಳು ತಯಾರುಗೊಳ್ಳುತ್ತಿರುತ್ತವೆ ಎಂದರು. ಇದೀಗ ನಾವು ತಯಾರು ಮಾಡಿರುವ ವಿಕ್ರಮ್ ಕೂಡ ಒಂದು ಪ್ಯಾನ್ ಇಂಡಿಯಾ ಚಿತ್ರವಾಗಿದೆ ಎಂದು ಹೇಳಿಕೊಂಡರು.