ಚಮೋಲಿ:ಉತ್ತರಾಖಂಡ ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಚಮೋಲಿ ಜಿಲ್ಲೆಯಲ್ಲಿ ಭೂಕುಸಿತ ಸಂಭವಿಸಿದ್ದು, ಮೂರು ದಿನಗಳಿಂದ ಸಂಚಾರ ಅಸ್ತವ್ಯಸ್ತಗೊಂಡಿದೆ. ಇದೀಗ ಜೋಶಿಮಠ-ನೀತಿ ಕಣಿವೆ ಗಡಿ ಕೂಡ ಬಂದ್ ಆಗಿದ್ದು, ಅನೇಕ ಗ್ರಾಮಗಳು ಸಂಪರ್ಕ ಕಳೆದುಕೊಂಡಿವೆ.
ಜೋಶಿಮಠ-ನೀತಿ ಕಣಿವೆ ಗಡಿ ಭಾಗದಲ್ಲಿ ನಿರಂತರವಾಗಿ ಭೂಕುಸಿತವಾಗುತ್ತಿದ್ದು, ಬೆಟ್ಟದಿಂದ ಹೆಬ್ಬಂಡೆಗಳು ಧರೆಗುರುಳುತ್ತಿವೆ. ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಕೂಡ ಇಲ್ಲದೇ ಜನರು ಭಯದಿಂದಲೇ ರಾತ್ರಿಗಳನ್ನು ಕಳೆಯುವ ಪರಿಸ್ಥಿತಿ ಒದಗಿಬಂದಿದೆ. ಮನೆಯಿಂದ ಹೊರಹೋಗಲಾದ ಕಾರಣ ಅಗತ್ಯ ವಸ್ತುಗಳನ್ನು ಪೂರೈಸುವಂತೆ ಗ್ರಾಮಸ್ಥರು ಸರ್ಕಾರದ ಬಳಿ ಮನವಿ ಮಾಡಿದ್ದಾರೆ. ಇನ್ನು ಅನೇಕ ವಾಹನಗಳು ಮಾರ್ಗಮಧ್ಯೆದಲ್ಲೇ ಸಿಲುಕಿಕೊಂಡಿವೆ.