ಕರ್ನಾಟಕ

karnataka

ETV Bharat / bharat

ಜೆಇಇ ಮುಖ್ಯ ಪರೀಕ್ಷೆ ಸೆಷನ್ 1ರ ಫಲಿತಾಂಶ ಪ್ರಕಟ - ಜೆಇಇ ಮುಖ್ಯ ಸೆಷನ್ 2ಕ್ಕೆ ನೋಂದಣಿ ಪ್ರಕ್ರಿಯೆ

ಜೆಇಇ ಮುಖ್ಯ ಪರೀಕ್ಷೆಯ ಸೆಷನ್ 1 ಫಲಿತಾಂಶ ಇಂದು ಪ್ರಕಟವಾಗಿದೆ. ಇದರ ಜೊತೆಗೆ, ಸೆಷನ್ 2ಗೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ಜೆಇಇ
JEE

By

Published : Jul 11, 2022, 9:12 AM IST

ನವದೆಹಲಿ: 2022ನೇ ಸಾಲಿನ ಜೆಇಇ (JEE) ಮುಖ್ಯ ಪರೀಕ್ಷೆಯ ಸೆಷನ್ 1ರ ಫಲಿತಾಂಶ ಇಂದು ಬಿಡುಗಡೆಯಾಗಿದೆ. ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA)ಯು ಫಲಿತಾಂಶವನ್ನು ಅಧಿಕೃತ ವೆಬ್‌ಸೈಟ್ jeemain.nta.nic.inನಲ್ಲಿ ಬಿಡುಗಡೆಗೊಳಿಸಿದೆ.

ಜೂನ್ 20ರಿಂದ ಜೂನ್ 29ರ ವರೆಗೆ ಪರೀಕ್ಷೆ ನಡೆಸಲಾಗಿತ್ತು. ಅಂತಿಮ ಕೀ ಉತ್ತರವನ್ನು ಜುಲೈ 6ರಂದು ಬಿಡುಗಡೆ ಮಾಡಲಾಗಿದೆ. ಸೆಷನ್ 1ರಲ್ಲಿ ಅಗತ್ಯವಿರುವ ಅಂಕಗಳನ್ನು ಗಳಿಸಿದ ಅಭ್ಯರ್ಥಿಗಳು ಮುಖ್ಯ ಪರೀಕ್ಷೆ ಸೆಷನ್ 2ಗೆ ಹಾಜರಾಗಲು ಅರ್ಹರಾಗಿರುತ್ತಾರೆ. ಸೆಷನ್ 2 ರ ಮುಕ್ತಾಯದ ನಂತರ ಅಂತಿಮ ಕಟ್ ಆಫ್ ಅನ್ನು NTA ಘೋಷಿಸುತ್ತದೆ.

ಈ ನಡುವೆ ಜೆಇಇ ಮುಖ್ಯ ಸೆಷನ್ 2ಕ್ಕೆ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ jeemain.nta.nic.inನಲ್ಲಿ ಇಂದಿನಿಂದಲೇ ಅರ್ಜಿ ಸಲ್ಲಿಸಬಹುದು.

ಇದನ್ನೂ ಓದಿ:ಅಣ್ಣ ಶೇ100, ತಮ್ಮ ಶೇ99.9: ಆದ್ರೂ ಅವಳಿ ಸಹೋದರರಲ್ಲೊಬ್ಬ ಮತ್ತೊಮ್ಮೆ ಪರೀಕ್ಷೆ ಬರೆಯುಲು ಸಿದ್ಧ!

ABOUT THE AUTHOR

...view details