ಕರ್ನಾಟಕ

karnataka

ETV Bharat / bharat

ಪಂಡಿತ್‌ ನೆಹರು ಪುಣ್ಯತಿಥಿ: ಸೋನಿಯಾ ಗಾಂಧಿ ಸೇರಿ ಕಾಂಗ್ರೆಸ್ ನಾಯಕರಿಂದ ಪುಷ್ಪನಮನ - ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು

ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಪುಣ್ಯತಿಥಿಯ ಅಂಗವಾಗಿ ದೆಹಲಿಯಲ್ಲಿರುವ ಅವರ ಸಮಾಧಿ ಸ್ಥಳ ಶಾಂತಿ ವನದಲ್ಲಿ ಕಾಂಗ್ರೆಸ್ ನಾಯಕರು ಪುಷ್ಪ ನಮನ ಸಲ್ಲಿಸಿದರು.

ನೆಹರು ಪುಣ್ಯತಿಥಿ
ನೆಹರು ಪುಣ್ಯತಿಥಿ

By

Published : May 27, 2022, 10:06 AM IST

ನವದೆಹಲಿ: ಭಾರತದ ಪ್ರಥಮ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಪುಣ್ಯತಿಥಿ ಅಂಗವಾಗಿ ದೆಹಲಿಯಲ್ಲಿರುವ ಅವರ ಸ್ಮಾರಕ ಶಾಂತಿ ವನದಲ್ಲಿ ಸೋನಿಯಾ ಗಾಂಧಿ ಸೇರಿದಂತೆ ಕಾಂಗ್ರೆಸ್ ನಾಯಕರು ಪುಷ್ಪ ನಮನ ಅರ್ಪಿಸಿದರು.


1947ರಲ್ಲಿ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಬಳಿಕ ಮೊದಲ ಪ್ರಧಾನಿಯಾಗಿ ಅಧಿಕಾರ ಸ್ವೀಕಾರ ಮಾಡಿದ್ದ ನೆಹರು, 1964 ರವರೆಗೆ ಹುದ್ದೆಯಲ್ಲಿದ್ದರು. ಭಾರತದಲ್ಲಿ ಅನೇಕ ಅಭಿವೃದ್ಧಿ ಯೋಜನೆಗಳನ್ನು ಜಾರಿಗೆ ತಂದಿದ್ದರು. ಜೊತೆಗೆ, ದೇಶದಲ್ಲಿ ಕಾಂಗ್ರೆಸ್​ ಪ್ರಬಲವಾಗಿ ಬೇರೂರುವಲ್ಲಿಯೂ ಮುಂದಾಳತ್ವ ವಹಿಸಿದ್ದರು. 1964ರ ಮೇ 27 ರಂದು ನೆಹರು ಇಹಲೋಕ ತ್ಯಜಿಸಿದ್ದಾರೆ.

ರಾಹುಲ್ ಗಾಂಧಿ ಟ್ವೀಟ್‌:ಪಂಡಿತ್‌ ಜವಾಹರಲಾಲ್‌ನೆಹರು ನಿಧನರಾಗಿ 58 ವರ್ಷಗಳು ಕಳೆದರೂ ಅವರ ಆದರ್ಶ, ರಾಜಕೀಯ ಮತ್ತು ದೇಶದ ಬಗೆಗಿನ ದೂರದೃಷ್ಟಿ ಇಂದಿಗೂ ಪ್ರಸ್ತುತ ಎಂದು ಸ್ಮರಿಸಿದ್ದಾರೆ.

ಇದನ್ನೂ ಓದಿ:'ಅಗೌರವದ ಸಚಿವ ಸ್ಥಾನದಿಂದ ನನ್ನ ಮುಕ್ತಗೊಳಿಸಿ': ರಾಜಸ್ಥಾನ ಕ್ರೀಡಾ ಸಚಿವರ ಬಹಿರಂಗ ಅಸಮಾಧಾನ

ABOUT THE AUTHOR

...view details