ಶ್ರೀನಗರ( ಜಮ್ಮು ಮತ್ತು ಕಾಶ್ಮೀರ):ಯುರೋಪ್ನಿಂದ ಸಂಘಟಿತವಾಗಿರುವ ಭಯೋತ್ಪಾದಕ ಘಟಕವನ್ನು ಭೇದಿಸಿರುವುದು ಮತ್ತು ಜಮ್ಮುವಿನಲ್ಲಿ ಪಾಕಿಸ್ತಾನದ ಕಡೆಯಿಂದ ಬಂದ ಡ್ರೋನ್ಗಳ ಮೂಲಕ ಶಸ್ತ್ರಾಸ್ತ್ರಗಳು ಮತ್ತು ಸ್ಫೋಟಕಗಳನ್ನು ಸಾಗಿಸುವಲ್ಲಿ ತೊಡಗಿದ್ದ ಇಬ್ಬರನ್ನು ಬಂಧಿಸಿರುವುದಾಗಿ ಜಮ್ಮು & ಕಾಶ್ಮೀರ ಪೊಲೀಸರು ಭಾನುವಾರ ತಿಳಿಸಿದ್ದಾರೆ.
ಆರ್ಎಸ್ ಪುರದ ಅಂತಾರಾಷ್ಟ್ರೀಯ ಗಡಿಯ ಬಸ್ಪುರ್ ಬಾಂಗ್ಲಾ ಪ್ರದೇಶದಲ್ಲಿ ಡ್ರೋನ್ಗಳ ಮೂಲಕ ಶಸ್ತ್ರಾಸ್ತ್ರಗಳನ್ನು ಸಾಗಿಸುವಲ್ಲಿ ತೊಡಗಿದ್ದ ದೋಡಾದ ಚಂದರ್ ಬೋಸ್ ಮತ್ತು ಜಮ್ಮುವಿನ ಕ್ಯಾಂಪ್ ಗೋಲ್ ಗುಜ್ರಾಲ್ನ ಶಂಶೇರ್ ಸಿಂಗ್ರನ್ನು ಪೊಲೀಸರು ಬಂಧಿಸಿ, ಅವರ ಬಳಿ ಇದ್ದ ನಾಲ್ಕು ಪಿಸ್ತೂಲ್ಗಳು, ಎಂಟು ಮ್ಯಾಗಜೀನ್ಗಳು ಮತ್ತು 47 ಜೀವಂತ ಗುಂಡುಗಳನ್ನು ವಶಪಡಿಸಿಕೊಂಡಿದ್ದಾರೆ.