ಕರ್ನಾಟಕ

karnataka

ETV Bharat / bharat

ಲಡಾಖ್​​​ನಲ್ಲಿ ಭೂಕಂಪನ: 4.8ರಷ್ಟು ತೀವ್ರತೆ ದಾಖಲು

ಜಮ್ಮು ಕಾಶ್ಮೀರದ ಹಲವೆಡೆ ಭೂಕಂಪನ ಸಂಭವಿಸಿದೆ ಎಂದು ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

J-K: 4.8- magnitude earthquake hits Srinagar
ಲಡಾಖ್​​​ನಲ್ಲಿ ಭೂಕಂಪನ: 4.8ರಷ್ಟು ತೀವ್ರತೆ ದಾಖಲು

By

Published : Dec 28, 2021, 6:01 AM IST

ಶ್ರೀನಗರ, ಜಮ್ಮು ಮತ್ತು ಕಾಶ್ಮೀರ:ಕೇಂದ್ರಾಡಳಿತ ಪ್ರದೇಶವಾದ ಲಡಾಖ್​ನಲ್ಲಿ ಭೂಕಂಪನ ಸಂಭವಿಸಿದ್ದು, ಈ ಭೂಕಂಪನ ಪ್ರದೇಶ ಜಮ್ಮು ಕಾಶ್ಮೀರದ ರಾಜಧಾನಿ ಶ್ರೀನಗರದಿಂದ ಸುಮಾರು 130 ಕಿಲೋಮೀಟರ್ ದೂರವಿದೆ ಎಂದು ನ್ಯಾಷನಲ್ ಸೆಂಟರ್ ಫಾರ್ ಸಿಸ್ಮೋಲಜಿ (National Center for Seismology) ಮಾಹಿತಿ ನೀಡಿದೆ.

ರಿಕ್ಟರ್ ಮಾಪಕದಲ್ಲಿ 4.8ರಷ್ಟು ತೀವ್ರತೆ ದಾಖಲಾಗಿದೆ. ಭಾನುವಾರ ಸಂಜೆ 7 ಗಂಟೆ 7 ನಿಮಿಷ 29 ಸೆಕೆಂಡ್​ಗೆ ಭೂಕಂಪನ ಸಂಭವಿಸಿದೆ ಎಂದು ಎನ್​​ಸಿಎಸ್​ ಹೇಳಿದೆ.

ಭೂಕಂಪವನ್ನು ದೃಢಪಡಿಸಿದ ವಿಪತ್ತು ನಿರ್ವಹಣಾ ಇಲಾಖೆಯ ಅಧಿಕಾರಿಯೊಬ್ಬರು, ರಿಕ್ಟರ್ ಮಾಪಕದಲ್ಲಿ 5.3ರ ತೀವ್ರತೆ ದಾಖಲಾಗಿದೆ. ಜಮ್ಮು ಕಾಶ್ಮೀರದ ವಿವಿಧ ಭಾಗಗಳಲ್ಲಿ ಭೂಕಂಪದ ಅನುಭವವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಪ್ರಾಥಮಿಕ ವರದಿಗಳ ಪ್ರಕಾರ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಇದನ್ನೂ ಓದಿ:ಧರ್ಮ ಸಂಸದ್ ವಿರುದ್ಧ ಅಸಮಾಧಾನ: ದೆಹಲಿಯಲ್ಲಿ ಎಡಪಂಥೀಯ ಪಕ್ಷಗಳ ಪ್ರತಿಭಟನೆ

ABOUT THE AUTHOR

...view details