ಕರ್ನಾಟಕ

karnataka

ETV Bharat / bharat

ಹೆರಿಗೆ ನೋವಿನಿಂದ ಗರ್ಭಿಣಿ ನರಳಾಟ, ವಾಹನ ಸೌಲಭ್ಯವಿಲ್ಲದೆ ಜೆಸಿಬಿ ಮೂಲಕವೇ ಆಸ್ಪತ್ರೆಗೆ ಸಾಗಿಸಿದ ಕುಟುಂಬ

ಹೆರಿಗೆ ನೋವು ಕಾಣಿಸಿಕೊಂಡು ನರಳಾಡುತ್ತಿದ್ದ ಗರ್ಭಿಣಿಯನ್ನು ರಸ್ತೆ ಕಾಮಗಾರಿಯಲ್ಲಿ ತೊಡಗಿದ್ದ ಜೆಸಿಬಿ ನೆರವಿನಿಂದ ಆಸ್ಪತ್ರೆಗೆ ಸಾಗಿಸಲಾಗಿದೆ.

J&K: A pregnant woman was rushed to hospital in a state of emergency with the help of JCB
J&K: A pregnant woman was rushed to hospital in a state of emergency with the help of JCB

By

Published : Jan 7, 2022, 3:55 AM IST

ಅನಂತ್​ನಾಗ್​(ಜಮ್ಮುಮತ್ತು ಕಾಶ್ಮೀರ): ಹೆರಿಗೆ ನೋವು ಕಾಣಿಸಿಕೊಂಡು ನರಳಾಡುತ್ತಿದ್ದ ಗರ್ಭಿಣಿಯನ್ನು ತೀವ್ರ ಹಿಮಪಾತದ ನಡುವೆಯೂ ಜೆಸಿಬಿ ವಾಹನದಲ್ಲಿ ಆಸ್ಪತ್ರೆಗೆ ಸಾಗಿಸಿದ ಘಟನೆ ಜಮ್ಮು ಮತ್ತು ಕಾಶ್ಮೀರದ ಅನಂತ್​ನಾಗ್​ ಜಿಲ್ಲೆಯ ಕರ್ಪಾನ್​ ವೆರಿನಾಗ್​ ಪ್ರಾಂತ್ಯದಲ್ಲಿ ನಡೆದಿದೆ.

ಗುರುವಾರ ಮಧ್ಯರಾತ್ರಿ ಮಹಿಳೆಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಪರ್ವತ ಪ್ರದೇಶವಾಗಿದ್ದರಿಂದ ಹಿಮಪಾತ ಉಂಟಾಗಿತ್ತು. ಈ ವೇಳೆ ಕುಟುಂಬಸ್ಥರಿಗೆ ಮಹಿಳೆಯನ್ನು ಆಸ್ಪತ್ರೆಗೆ ಸಾಗಿಸುವುದು ತುಂಬಾ ಕಷ್ಟದ ಕೆಲಸವಾಗಿತ್ತು. ಈ ಸಂದರ್ಭದಲ್ಲಿ ಮಹಿಳೆಯ ಕುಟುಂಬಸ್ಥರು ಗ್ರಾಮದ ಸರಪಂಚ್​ ನೆರವಿನಿಂದ ಹತ್ತಿರದಲ್ಲಿ ರಸ್ತೆ ಕಾಮಗಾರಿಯಲ್ಲಿ ಕೆಲಸ ಮಾಡುತ್ತಿದ್ದ ಪ್ರಧಾನಮಂತ್ರಿ ಗ್ರಾಮ ರಸ್ತೆ ಯೋಜನೆ(PMGSY) ಅಧಿಕಾರಿಗಳನ್ನು ಮತ್ತು ಕಾಂಟ್ರ್ಯಾಕ್ಟರ್​ಗೆ ಕರೆ ಮಾಡಿ ಆಸ್ಪತ್ರೆಗೆ ಹೋಗುವುದಕ್ಕೆ ವಾಹನದ ನೆರವು ಕೋರಿದ್ದಾರೆ.

ಜೆಸಿಬಿ ಮೂಲಕ ಗರ್ಭಿಣಿಯನ್ನು ಜೆಸಿಬಿ ಮೂಲಕ ಸಾಗಿಸಿದ ಕುಟುಂಬ

ದುರಾದೃಷ್ಟವಶಾತ್​ ಆ ಅಧಿಕಾರಿಗಳ ಬಳಿ ಜೆಸಿಬಿ ವಾಹನ ಮಾತ್ರವಿತ್ತು. ಮೊದಲು ಹಿಂದೇಡು ಹಾಕಿದರಾದರೂ ಹೆರಿಗೆ ನೋವು ಹೆಚ್ಚಾಗಿ ಮಹಿಳೆಯ ಆರೋಗ್ಯ ಪರಿಸ್ಥಿತಿ ಹದಗೆಡುತ್ತಿದ್ದರಿಂದ ಅನಿವಾರ್ಯವಾಗಿ ಜೆಸಿಬಿಯಲ್ಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವುದಕ್ಕೆ ತೀರ್ಮಾಸಿದ್ದಾರೆ.

ತಕ್ಷಣ ಕಾಂಟ್ರ್ಯಾಕ್ಟರ್​ ಜಾವೇದ್​ ಅಹ್ಮದ್ ಜೆಸಿಬಿ ಚಾಲಕನೊಂದಿಗೆ ಗ್ರಾಮಕ್ಕೆ ಬಂದು ಹಿಮಪಾತದ ನಡುವೆಯೂ ಗರ್ಭಿಣಿಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಅಲ್ಲಿನ ವೈದ್ಯರ ಸಲಹೆಯಂತೆ ಅನಂತ್​ನಾಗ್​ನ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಸ್ತುತ ಆಸ್ಪತ್ರೆ ಮ್ಯಾನೇಜ್​ಮೆಂಟ್​ ಮಾಹಿತಿಯಂತೆ ಆ ಮಹಿಳೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ್ದು, ತಾಯಿ ಮಗು ಇಬ್ಬರು ಆರೋಗ್ಯದಿಂದಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:'ಇನ್ನೂ ಮಕ್ಕಳಾಗಿಲ್ವೇ...?' ನೆರೆಹೊರೆಯವರ ಮಾತಿನಿಂದ ನೊಂದ ಮಹಿಳೆ ಮಾಡಿದ್ದೇನು ಗೊತ್ತಾ?

ABOUT THE AUTHOR

...view details