ಕರ್ನಾಟಕ

karnataka

ETV Bharat / bharat

ಇದು 1962 ಅಲ್ಲ.. ಚೀನಾಗೆ ಅರುಣಾಚಲಪ್ರದೇಶ ಸಿಎಂ ಪೆಮಾ ಖಂಡು ಖಡಕ್​ ವಾರ್ನಿಂಗ್​

ಗಡಿಯಲ್ಲಿ ಚೀನಿ ಸೈನಿಕರ ಅತಿಕ್ರಮಣ ಮತ್ತು ದಾಳಿಯನ್ನು ಅರುಣಾಚಲಪ್ರದೇಶ ಸಿಎಂ ಪೆಮಾ ಖಂಡು ಖಂಡಿಸಿದ್ದಾರೆ. ಇದು 1962ರ ಸನ್ನಿವೇಶವಲ್ಲ ಎಂದು ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

arunachal-cm-dares-china
ಅರುಣಾಚಲಪ್ರದೇಶ ಸಿಎಂ ಪೆಮಾ ಖಂಡು

By

Published : Dec 14, 2022, 7:43 AM IST

ನವದೆಹಲಿ:ಅರುಣಾಚಲಪ್ರದೇಶದ ತವಾಂಗ್​ ಪ್ರದೇಶದಲ್ಲಿ ಚೀನಾ ಸೈನಿಕರ ಅತಿಕ್ರಮಣವನ್ನು ಭಾರತ ಹಿಮ್ಮೆಟ್ಟಿಸಿದೆ. ಚೀನಾ ಅತಿಕ್ರಮಣಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಅರುಣಾಚಲಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು ಡ್ರ್ಯಾಗನ್​ ರಾಷ್ಟ್ರದ ಕಿಡಿಗೇಡಿತನವನ್ನು ಟೀಕಿಸಿದ್ದಾರೆ. ಇದು 1962 ರ ಸನ್ನಿವೇಶವಲ್ಲ. ಭಾರತ ಯಾವುದೇ ದೇಶವನ್ನು ದಿಟ್ಟವಾಗಿ ಎದುರಿಸಲಿದೆ ಎಂದು ಖಡಕ್​ ಎಚ್ಚರಿಕೆ ರವಾನಿಸಿದ್ದಾರೆ.

ಚೀನಾ ಗಡಿ ತಂಟೆ ಮಾಡಿದ ಯಾಂಗ್ಟನ್​ ನನ್ನ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿದೆ. ಪ್ರತಿ ವರ್ಷ ನಾನು ಮತ್ತು ಜವಾನರು ಆ ಪ್ರದೇಶದ ಗ್ರಾಮಸ್ಥರನ್ನು ಭೇಟಿಯಾಗುತ್ತೇವೆ. ಗಡಿಯನ್ನು ಅಕ್ರಮವಾಗಿ ವಶಪಡಿಸಿಕೊಳ್ಳುವ ಯಾವುದೇ ಯತ್ನವನ್ನು ನಮ್ಮ ಸೇನೆ ಯಶಸ್ವಿಯಾಗಿ ಹಿಮ್ಮೆಟ್ಟಿಸಲಿದೆ. ತಕ್ಕ ಉತ್ತರ ನೀಡಲಿದ್ದೇವೆ ಎಂದು ಖಂಡು ಗುಡುಗಿದ್ದಾರೆ.

ಕೇಂದ್ರ ರಕ್ಷಣಾ ಸಚಿವ ರಾಜನಾಥ್​ ಸಿಂಗ್​ ಅವರ ಹೇಳಿಕೆಯನ್ನು ಟ್ವೀಟ್​ ಮಾಡಿರುವ ಪೆಮಾ ಖಂಡು, ಇದು 1962 ಅಲ್ಲ. ಯಾರಾದರೂ ಗಡಿ ನಿಯಮ ಉಲ್ಲಂಘಿಸಲು ಪ್ರಯತ್ನಿಸಿದರೆ, ನಮ್ಮ ವೀರ ಸೈನಿಕರು ತಕ್ಕ ಉತ್ತರ ನೀಡುತ್ತಾರೆ. ದೇಶದ ಜಾಗವನ್ನು ಅತಿಕ್ರಮಿಸಿಕೊಳ್ಳುವ ಯಾವುದೇ ಪ್ರಯತ್ನವನ್ನು ವಿಫಲಗೊಳಿಸಲು ನಾವು ಸಿದ್ಧ ಎಂದು ಸ್ಪಷ್ಟ ಸಂದೇಶ ನೀಡಿದ್ದಾರೆ.

ಗಡಿ ತಂಟೆ ಬಗ್ಗೆ ಪ್ರತಿಕ್ರಿಯಿಸದ ಚೀನಾ:ತಮ್ಮ ಸೈನಿಕರು ಗಡಿಯಲ್ಲಿ ಉದ್ವಿಗ್ನತೆ ಸೃಷ್ಟಿಸಿದ ಬಗ್ಗೆ ಚೀನಾ ಸರ್ಕಾರ ಈವರೆಗೂ ಯಾವುದೇ ಹೇಳಿಕೆ ನೀಡಿಲ್ಲ. ವಿದೇಶಾಂಗ ಸಚಿವಾಲಯದ ವಕ್ತಾರ ವಾಂಗ್ ವೆನ್‌ಬಿನ್ ಮಾತ್ರ, ಭಾರತದ ಗಡಿಯಲ್ಲಿ ಪರಿಸ್ಥಿತಿ ಸ್ಥಿರವಾಗಿದೆ. ಎರಡೂ ಕಡೆಯಿಂದ ಮಾತುಕತೆ ನಡೆಯುತ್ತಿದೆ ಎಂದು ಹೇಳಿದ್ದಾರೆ.

ಓದಿ:ಗಡಿಯಲ್ಲಿ ಅಹಿತಕರ ಘಟನೆ ನಡೆದಿಲ್ಲ, ಶಾಂತಿ ಸ್ಥಾಪಿಸಲಾಗಿದೆ: ಸಂಸತ್ತಿಗೆ ರಾಜನಾಥ್​ ಸಿಂಗ್​ ಸ್ಷಷ್ಟನೆ

ABOUT THE AUTHOR

...view details