ಕರ್ನಾಟಕ

karnataka

ETV Bharat / bharat

ತೆಲಂಗಾಣ, ಆಂಧ್ರಪ್ರದೇಶದ ವಿವಿಧ ಕಡೆಗಳಲ್ಲಿ ಐಟಿ ದಾಳಿ - ಈಟಿವಿ ಭಾರತ ಕನ್ನಡ

ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ನಡೆದ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.

it-raids-in-telangana-and-andhra-pradesh
ತೆಲಂಗಾಣ ಮತ್ತು ಆಂಧ್ರಪ್ರದೇಶದ ವಿವಿಧ ಕಡೆಗಳಲ್ಲಿ ಐಟಿ ದಾಳಿ

By

Published : Dec 6, 2022, 12:40 PM IST

ತೆಲಂಗಾಣ/ಆಂಧ್ರ ಪ್ರದೇಶ: 20 ಕ್ಕೂ ಹೆಚ್ಚು ಐಟಿ ತಂಡಗಳು ಎರಡು ರಾಜ್ಯಗಳ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿ, ಶೋಧ ಕಾರ್ಯಾಚರಣೆ ನಡೆಸುತ್ತಿವೆ. ಹೈದರಾಬಾದ್‌ನ ಬಂಜಾರಾ ಹಿಲ್ಸ್‌ನಲ್ಲಿ ನಡೆದ ಭೂ ವ್ಯವಹಾರಕ್ಕೆ ಸಂಬಂಧಿಸಿದಂತೆ ಐಟಿ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.

ವಿಜಯವಾಡದಲ್ಲಿರುವ ಗನ್ನವರಂ ಶಾಸಕ ಸೇರಿ ಹಲವರ ಮನೆಗಳಿಗೆ ಐಟಿ ಅಧಿಕಾರಿಗಳು ದಾಳಿ ಮಾಡಿ ತಪಾಸಣೆ ನಡೆಸುತ್ತಿದ್ದಾರೆ ಎಂದು ವರದಿಯಾಗಿದೆ. ಬೆಳಗ್ಗೆ 6.30ರಿಂದ ಅವಿನಾಶ್ ಮನೆಯಲ್ಲಿ ಶೋಧ ಕಾರ್ಯ ನಡೆಯುತ್ತಿದೆ.

ಮತ್ತೊಂದೆಡೆ, ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನಲ್ಲಿರುವ ರಿಯಲ್ ಎಸ್ಟೇಟ್ ಡೀಲರ್‌ನ ಮನೆಯಲ್ಲೂ ಐಟಿ ಅಧಿಕಾರಿಗಳು ಶೋಧ ನಡೆಸಿದ್ದಾರೆ. ವಂಶೀರಾಂ ಬಿಲ್ಡರ್ಸ್ ಎಂಡಿ ಮನೆ ಮತ್ತು ಕಚೇರಿಯನ್ನು ಪರಿಶೀಲಿಸಲಾಗಿದೆ. ಹೈದರಾಬಾದ್ ಜೊತೆಗೆ ಆಂಧ್ರಪ್ರದೇಶದ ನೆಲ್ಲೂರು ಮತ್ತು ವಿಜಯವಾಡದಲ್ಲಿರುವ ನಿರ್ದೇಶಕರು, ಸಿಇಒ, ಹೂಡಿಕೆದಾರರ ಕಚೇರಿಗಳು ಮತ್ತು ಮನೆಗಳ ಮೇಲೆ ಐಟಿ ದಾಳಿ ನಡೆಸುತ್ತಿದೆ.

ಇದನ್ನೂ ಓದಿ:ಮೊದಲ ಹಂತದ ಮತದಾನ ಬಳಿಕ ಚುರುಕುಗೊಂಡ ಐಟಿ ಇಲಾಖೆ

ABOUT THE AUTHOR

...view details