ಕರ್ನಾಟಕ

karnataka

ETV Bharat / bharat

ಸಿಂಗಾಪುರದ 7 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಇಸ್ರೋ ಸನ್ನದ್ಧ: ನಾಳೆ ಶ್ರೀಹರಿಕೋಟಾದಿಂದ ಪಿಎಸ್‌ಎಲ್‌ವಿ ರಾಕೆಟ್ ಉಡಾವಣೆ.. - ಉಪಗ್ರಹ ಅಭಿವೃದ್ಧಿ

ಇಸ್ರೋ ರಾಕೆಟ್ ಪಿಎಸ್ಎಲ್​ವಿ ಮೂರನೇ ವಾಣಿಜ್ಯ ಮಿಷನ್ ಅಡಿ ಜುಲೈ 30 ರಂದು ಸಿಂಗಾಪುರದ ಏಳು ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. ಇಸ್ರೋ ಸಿಂಗಾಪುರದ 360 ಕೆಜಿ ಡಿಎಸ್​ಎಸ್ಎಆರ್ ಉಪಗ್ರಹ ಮತ್ತು ಆರು ಚಿಕ್ಕ ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. 2023ರಲ್ಲಿ ಇಸ್ರೋ ಎರಡು ವಾಣಿಜ್ಯ ಉಡಾವಣೆ ಯಶಸ್ವಿಗೊಳಿಸಿತ್ತು. ಈ ಕುರಿತು ಸಂಪೂರ್ಣ ವರದಿ ಇಲ್ಲಿದೆ ಓದಿ...

ISRO Singapore satellites
ಸಿಂಗಾಪುರದ 7 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲು ಇಸ್ರೋದಿಂದ ಕ್ಷಣಗಣನೆ ಆರಂಭ

By

Published : Jul 29, 2023, 5:07 PM IST

ಚೆನ್ನೈ (ತಮಿಳುನಾಡು):ಭಾರತೀಯ ರಾಕೆಟ್ ಪಿಎಸ್‌ಎಲ್‌ವಿಯಿಂದ ಇಸ್ರೋ ಸಂಸ್ಥೆಯು ಭಾನುವಾರ, ಸಿಂಗಪುರದ ಏಳು ಉಪಗ್ರಹಗಳ ಉಡಾವಣೆ ಮಾಡಲು ಈಗಾಗಲೇ ಕ್ಷಣಗಣನೆ ಆರಂಭವಾಗಿದೆ. ಶನಿವಾರ ಬೆಳಗ್ಗೆ ಶ್ರೀಹರಿಕೋಟಾದ ರಾಕೆಟ್ ಉಡಾವಣಾ ಕೇಂಂದ್ರದಲ್ಲಿ ಸಿದ್ಧತೆ ಜೋರಾಗಿಯೇ ಆರಂಭವಾಗಿದೆ.

ಈ ಕುರಿತು ಮಾಹಿತಿ ನೀಡಿದ ಅಧಿಕಾರಿಗಳು, ''ಭಾನುವಾರದ ರಾಕೆಟಿಂಗ್ ಮಿಷನ್ 2023ರಲ್ಲಿ ಇಸ್ರೋದ ಮೂರನೇ ವಾಣಿಜ್ಯ ಮಿಷನ್ ಆಗಿದೆ. ಶನಿವಾರ ಬೆಳಿಗ್ಗೆ 5.01ಕ್ಕೆ ಕೌಂಟ್‌ಡೌನ್ ಪ್ರಾರಂಭವಾಯಿತು ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಹಿರಿಯ ಅಧಿಕಾರಿಯೊಬ್ಬರು ಮಾಧ್ಯಮವೊಂದಕ್ಕೆ ತಿಳಿಸಿದ್ದಾರೆ.

2023ರಲ್ಲಿ ಎರಡು ಯಶಸ್ವಿ ವಾಣಿಜ್ಯ ಉಡಾವಣೆ:ಇಸ್ರೋ ಜುಲೈ 30ರಂದು ಬೆಳಗ್ಗೆ 6.30ಕ್ಕೆ ತನ್ನ ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್ (ಪಿಎಸ್‌ಎಲ್‌ವಿ) ಬಳಸಿಕೊಂಡು ಸಿಂಗಾಪುರದ ಏಳು ಉಪಗ್ರಹಗಳನ್ನು ಉಡಾವಣೆ ಮಾಡಲಿದೆ. 1999 ರಿಂದ ಇಸ್ರೋ 36 ದೇಶಗಳ 431 ವಿದೇಶಿ ಉಪಗ್ರಹಗಳನ್ನು ಉಡಾವಣೆ ಮಾಡಲಾಗಿದೆ. ಇಸ್ರೋ ಈ ವರ್ಷ ಎರಡು ಯಶಸ್ವಿ ವಾಣಿಜ್ಯ ಉಡಾವಣೆ ಮಾಡಿದೆ. ಮಾರ್ಚ್‌ನಲ್ಲಿ ಯುಕೆ ಮೂಲದ ಒನ್‌ವೆಬ್‌ಗೆ ಸೇರಿದ 36 ಉಪಗ್ರಹಗಳ ಮೊದಲ ಉಡಾವಣೆ ಮತ್ತು ಏಪ್ರಿಲ್‌ನಲ್ಲಿ ಪಿಎಸ್‌ಎಲ್‌ವಿ ರಾಕೆಟ್‌ನೊಂದಿಗೆ ಸಿಂಗಾಪುರದ ಎರಡು ಉಪಗ್ರಹಗಳ ಉಡಾವಣೆ ಮಾಡಲಾಗಿದೆ. ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (ಎನ್​ಎಸ್​ಐಎಲ್​), ಬಾಹ್ಯಾಕಾಶ ಇಲಾಖೆಯ ವಾಣಿಜ್ಯ ವಿಭಾಗ, ಸಿಂಗಾಪುರದ ಉಪಗ್ರಹಗಳನ್ನು ಉಡಾವಣೆ ಮಾಡಲು ಪಿಎಸ್​ಎಲ್​ವಿ-ಸಿ 56 ರಾಕೆಟ್ ಅನ್ನು ತೆಗೆದುಕೊಂಡಿದೆ. ಭಾನುವಾರ, PSLV-C56 ರಾಕೆಟ್ ಸುಮಾರು 360 ಕೆಜಿ ತೂಕದ ಸಿಂಗಾಪುರದ ಉಪಗ್ರಹವನ್ನು ಬಾಹ್ಯಾಕಾಶಕ್ಕೆ ಕೊಂಡೊಯ್ಯಲಿದೆ.

ಎಲ್ಲಾ ಹವಾಮಾನ ಹಗಲು ಮತ್ತು ರಾತ್ರಿ ಕವರೇಜ್:ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್(IAI) ಅಭಿವೃದ್ಧಿಪಡಿಸಿದ DS-SAR ಸಿಂಥೆಟಿಕ್ ಅಪರ್ಚರ್ ರಾಡಾರ್ ಎಸ್​ಎಆರ್​ ಪೇಲೋಡ್ ಅನ್ನು ಒಯ್ಯುತ್ತದೆ. ಇದು ಡಿಎಸ್​-ಎಸ್​ಎಆರ್​ ಎಲ್ಲ ಹವಾಮಾನದಲ್ಲಿ ಹಗಲು ಮತ್ತು ರಾತ್ರಿಯ ಕವರೇಜ್ ಒದಗಿಸಲು ಅನುಮತಿಸುತ್ತದೆ. ಪೂರ್ಣ ಧ್ರುವೀಯತೆಯಲ್ಲಿ ಒಂದು ಮೀಟರ್ ರೆಸಲ್ಯೂಶನ್‌ನಲ್ಲಿ ಚಿತ್ರಿಸುವ ಸಾಮರ್ಥ್ಯವನ್ನು ಈ ಉಪಗ್ರಹ ಹೊಂದಿದೆ. ಒಮ್ಮೆ ನಿಯೋಜಿಸಿ ಮತ್ತು ಕಾರ್ಯಾಚರಣೆ ಆರಂಭವಾದರೆ, ಸಿಂಗಾಪುರ್ ಸರ್ಕಾರದ ವಿವಿಧ ಏಜೆನ್ಸಿಗಳು ಇದನ್ನು ಬಳಸುತ್ತವೆ. ಏಜೆನ್ಸಿಗಳ ಉಪಗ್ರಹ ಚಿತ್ರಣ ಅಗತ್ಯತೆಗಳನ್ನು ಬೆಂಬಲಿಸಲು. ಎಸ್​ಟಿ ಇಂಜಿನಿಯರಿಂಗ್ ತನ್ನ ವಾಣಿಜ್ಯ ಗ್ರಾಹಕರಿಗೆ ಬಹು ಮಾದರಿ ಮತ್ತು ಹೆಚ್ಚಿನ ರೆಸ್ಪಾನ್ಸಿವಿಟಿ ಚಿತ್ರಣ ಮತ್ತು ಜಿಯೋಸ್ಪೇಷಿಯಲ್ ಸೇವೆಗಳಿಗಾಗಿ ಇದನ್ನು ಬಳಸುತ್ತದೆ.

ಅಂತಾರಾಷ್ಟ್ರೀಯ ಸಹಯೋಗದಲ್ಲಿ ಉಪಗ್ರಹ ಅಭಿವೃದ್ಧಿ:ಗಲಾಸಿಯಾ 2, 3U ಕಡಿಮೆ ಭೂಮಿಯ ಕಕ್ಷೆಯ ನ್ಯಾನೊಸಾಟಲೈಟ್ ಮತ್ತು ಒಆರ್​ಬಿ-12 ಸ್ಟ್ರೈಡರ್ ಉಪಗ್ರಹವನ್ನು ಅಂತಾರಾಷ್ಟ್ರೀಯ ಸಹಯೋಗದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಇಸ್ರೊ ತಿಳಿಸಿದೆ. ಮತ್ತೊಂದೆಡೆ, VELOX-AM, 23 ಕೆಜಿ ತಂತ್ರಜ್ಞಾನ ಪ್ರದರ್ಶನ ಮೈಕ್ರೋಸ್ಯಾಟಲೈಟ್, ARCADE ಅಟ್ಮಾಸ್ಫಿಯರಿಕ್ ಕಪ್ಲಿಂಗ್ ಮತ್ತು ಡೈನಾಮಿಕ್ಸ್ ಎಕ್ಸ್‌ಪ್ಲೋರರ್ (ARCADE) ಒಂದು ಪ್ರಾಯೋಗಿಕ ಉಪಗ್ರಹವಾಗಿದೆ. SCOOB-II, 3U ನ್ಯಾನೋ ಉಪಗ್ರಹ, ತಂತ್ರಜ್ಞಾನ ಪ್ರದರ್ಶಕ ಪೇಲೋಡ್ ಅನ್ನು ಗಗನಕ್ಕೆ ಹಾರಿಸಲಾಗುತ್ತಿದೆ. NuSpace ನಿಂದ NULLION, ಸುಧಾರಿತ 3U ನ್ಯಾನೋ ಉಪಗ್ರಹ, ಇದು ನಗರ ಮತ್ತು ದೂರದ ಸ್ಥಳಗಳಲ್ಲಿ ತಡೆರಹಿತ ಐಒಟಿ ಸಂಪರ್ಕವನ್ನು ಶಕ್ತಗೊಳಿಸುತ್ತದೆ.

ಇದನ್ನೂ ಓದಿ:ಜಾಗತಿಕ ತಾಪಮಾನ ಏರಿಕೆಯಿಂದ ಹೆಚ್ಚಲಿದೆ La Nina ಪರಿಣಾಮ: ಸಂಶೋಧನೆಯಲ್ಲಿ ಬಹಿರಂಗ

ABOUT THE AUTHOR

...view details