ಶ್ರೀಹರಿಕೋಟಾ(ಆಂಧ್ರ ಪ್ರದೇಶ):ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ಇದೇ ಮೊದಲ ಬಾರಿಗೆ ಅತೀ ಚಿಕ್ಕ ರಾಕೆಟ್ ಅನ್ನು ಯಶಸ್ವಿಯಾಗಿ ಕಕ್ಷೆಗೆ ತಲುಪಿಸಿತು. ಇಲ್ಲಿನ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸ್ಮಾಲ್ ಸ್ಯಾಟಲೈಟ್ ಲಾಂಚಿಂಗ್ ವೆಹಿಕಲ್(ಎಸ್‌ಎಸ್‌ಎಲ್‌ವಿ) ಮೂಲಕ 750 ಕ್ಕೂ ಹೆಚ್ಚು ಶಾಲಾ ವಿದ್ಯಾರ್ಥಿನಿಯರೇ ತಯಾರಿಸಿದ ಆಜಾದಿ ಸ್ಯಾಟ್ ಮತ್ತು ಇಸ್ರೋದ ಭೂ ವೀಕ್ಷಣಾ ಉಪಗ್ರಹಗಳು ಗುರಿ ತಲುಪಿದವು.
ಇಸ್ರೋದಿಂದ ಅತೀ ಚಿಕ್ಕ ರಾಕೆಟ್ ಉಡ್ಡಯನ ಯಶಸ್ವಿ ಪೂರ್ವ ನಿಗದಿಯಂತೆ ಇಂದು ಬೆಳಗ್ಗೆ ನಿಗದಿತ 9 ಗಂಟೆ 18 ನಿಮಿಷಕ್ಕೆ ಸರಿಯಾಗಿ ರಾಕೆಟ್ ಉಡಾವಣೆಯಾಯಿತು. ವೀಕ್ಷಣಾ ಗ್ಯಾಲರಿಯಿಂದ ಸಾರ್ವಜನಿಕರು ಈ ಅದ್ಭುತ ದೃಶ್ಯವನ್ನು ಕಣ್ತುಂಬಿಕೊಂಡರು. ಉಡಾವಣೆಯ ವೇಳೆ ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್ ಸೇರಿದಂತೆ ವಿಜ್ಞಾನಿಗಳು, ತಂತ್ರಜ್ಞರು ಉಪಸ್ಥಿತರಿದ್ದರು.
'ಅಂತಿಮ ಹಂತದಲ್ಲಿ ದತ್ತಾಂಶ ನಷ್ಟ': "ಎಸ್‌ಎಸ್‌ಎಲ್‌ವಿ-ಡಿ1 ಎಲ್ಲಾ ಹಂತಗಳಲ್ಲಿ ನಿರೀಕ್ಷೆಯಂತೆ ಕಕ್ಷೆ ಸೇರಿದೆ. ಆದರೆ, ಗುರಿ ಸೇರುವ ಹಂತದಲ್ಲಿ ಕೆಲವು ದತ್ತಾಂಶ ನಷ್ಟವಾಗಿದೆ. ಉಪಗ್ರಹ ಸ್ಥಿರವಾದ ಕಕ್ಷೆ ಸೇರಿದ ಬಗ್ಗೆ ಅಂತಿಮ ಫಲಿತಾಂಶಗಳನ್ನು ವಿಶ್ಲೇಷಿಸಲಾಗುತ್ತಿದೆ" ಎಂದು ಇಸ್ರೋ ಅಧ್ಯಕ್ಷ ಎಸ್.ಸೋಮನಾಥ್ ತಿಳಿಸಿದರು.
169 ಕೋಟಿ ರೂ ವೆಚ್ಚದ ಯೋಜನೆ: ಉಪಗ್ರಹ ಉಡಾವಣೆಗೆ ಈ ಚಿಕ್ಕ ರಾಕೆಟ್ ಅಭಿವೃದ್ಧಿಯು ಕೋವಿಡ್ ಕಾರಣದಿಂದ ವಿಳಂಬವಾಗಿತ್ತು. ಯೋಜನೆಯ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ 169 ಕೋಟಿ ರೂಪಾಯಿ ನೀಡಿದೆ. SSLV-D1, SSLV-D2 ಮತ್ತು SSLV-D3 ಎಂಬ ಮೂರು ಮಾದರಿಯ ಯೋಜನೆಯನ್ನು ಇದು ಒಳಗೊಂಡಿದೆ. ಇದರಲ್ಲಿ ಮೊದಲನೆಯ SSLV-D1 ಇಂದು ಕಕ್ಷೆ ಸೇರಿತು.
ಇದನ್ನೂ ಓದಿ:ಇಸ್ರೋದ ಹೊಸ ಶಕೆಗೆ ಕ್ಷಣಗಣನೆ; ಮೊದಲ ಸಲ ಅತಿ ಚಿಕ್ಕ ರಾಕೆಟ್ ಉಡಾವಣೆ