ನವದೆಹಲಿ:ದೇಶದಲ್ಲಿ ನಿರಂತರವಾಗಿ ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆಯಾಗುತ್ತಿದ್ದು, ಕೇಂದ್ರ ಸರ್ಕಾರ ಇದರ ಮೇಲಿನ ತೆರಿಗೆ ಏರಿಕೆ ಮಾಡುತ್ತಿದೆ. ಇದೇ ವಿಚಾರವನ್ನಿಟ್ಟುಕೊಂಡು ರಾಹುಲ್ ಗಾಂಧಿ ಟ್ವಿಟರ್ ಮೂಲಕ ಮೋದಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇಂಧನ ಹೆಚ್ಚಳದ ಬಗ್ಗೆ ಟ್ವಿಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ರಾಹುಲ್ ಗಾಂಧಿ, ತೈಲಗಳ ಮೇಲೆ ಕೇಂದ್ರ ಸರ್ಕಾರ ಹೆಚ್ಚಿನ ತೆರಿಗೆ ವಿಧಿಸುತ್ತಿದ್ದು, ಇದನ್ನ ನೋಡಿದರೆ 'ಇದೇನು ಸರ್ಕಾರವೋ ಅಥವಾ ಹಳೆ ಹಿಂದಿ ಚಿತ್ರಗಳಲ್ಲಿನ ದುರಾಸೆಯ ಲೇವಾದೇವಿಗಾರನೋ' ಎಂದು ಪ್ರಶ್ನೆ ಮಾಡಿದೆ. ಕಳೆದ ಹಣಕಾಸು ವರ್ಷದಲ್ಲಿ ಕೇಂದ್ರ ಸರ್ಕಾರ ಪೆಟ್ರೋಲ್ ಮತ್ತು ಡಿಸೇಲ್ ಮೇಲಿನ ತೆರಿಗೆ ಸಂಗ್ರಹದಲ್ಲಿ ಶೇ. 88ರಷ್ಟು ಏರಿಕೆ ಮಾಡಿದೆ. ಇದರಿಂದ 3.35 ಲಕ್ಷ ಕೋಟಿ ರೂ ಆದಾಯ ಪಡೆದುಕೊಂಡಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಮೋದಿ ಬಂದ ಬಳಿಕ ಇದು ಆಗಿದ್ದಲ್ಲ, ಕಾಂಗ್ರೆಸ್ ಕೂಡಾ ಫೋನ್ ಕದ್ದಾಲಿಕೆ ಮಾಡಿದೆ: ಹೆಚ್ಡಿಕೆ
ಮಾಧ್ಯಮದ ವರದಿವೊಂದನ್ನು ತಮ್ಮ ಟ್ವಿಟರ್ನಲ್ಲಿ ಟ್ಯಾಗ್ ಮಾಡಿರುವ ರಾಹುಲ್ ಗಾಂಧಿ, ಕೇಂದ್ರ ಸರ್ಕಾರ ಜನರಿಗೆ ಸಾಲ ತೆಗೆದುಕೊಳ್ಳುವಂತೆ ಪ್ರಚೋದನೆ ನೀಡುತ್ತಿದೆ. ಮತ್ತೊಂದೆಡೆ ಅವರಿಗೆ ಹೆಚ್ಚಿನ ತೆರಿಗೆ ಹಣ ಸುಲಿಗೆ ಮಾಡುತ್ತಿದೆ. ಇದು ಹಳೆಯ ಹಿಂದಿ ಚಿತ್ರಗಳಲ್ಲಿನ ದುರಾಸೆಯ ಲೇವಾದೇವಿಗಾರನಂತೆ ವರ್ತಿಸುತ್ತಿದೆ ಎಂದಿದ್ದಾರೆ. ಕಳೆದ ವರ್ಷಕ್ಕೆ ಹೋಲಿಕೆ ಮಾಡಿದಾಗ ಪೆಟ್ರೋಲ್ ಪ್ರತಿ ಲೀಟರ್ಗೆ 19.98 ರೂನಿಂದ 32.9 ರೂಗೆ ಏರಿಕೆಯಾಗಿದೆ ಎಂದು ತಿಳಿಸಿದ್ದಾರೆ.
ಲೋಕಸಭೆಯಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಖಾತೆ ರಾಜ್ಯ ಸಚಿವರಾಗಿರುವ ರಾಮೇರ್ಶವರ್ ತೆಲಿ ತಿಳಿಸಿರುವ ಪ್ರಕಾರ, ಡೀಸೆಲ್ ಮೇಲಿನ ಸುಂಕವನ್ನ ಲೀಟರ್ಗೆ 15.83 ರೂ.ಗಳಿಂದ 31.8 ರೂ.ಗೆ ಏರಿಸಲಾಗಿದೆ ಎಂದಿದ್ದಾರೆ. ಇದರಿಂದ ಕೇಂದ್ರಕ್ಕೆ 1.78 ಲಕ್ಷ ಕೋಟಿಯ ಬದಲಿಗೆ 3.35 ಲಕ್ಷ ಕೋಟಿ ರೂ. ಆದಾಯ ಲಭ್ಯವಾಗುತ್ತಿದೆ ಎಂದರು.