ಕರ್ನಾಟಕ

karnataka

ETV Bharat / bharat

ಕಾಲೇಜ್​ಗೆ ಟಾಪರ್ ಆದ್ರೂ ಸ್ಕೂಲ್​ ಬಸ್​ ಓಡಿಸುತ್ತಿರುವ ಸಾಧಕಿ

ಜಾರ್ಖಂಡ್​ನ ಹಜಾರಿಬಾಗ್ ಮೂಲದ ನಂದಿನಿ ಚಕ್ರವರ್ತಿ ಎಂಬುವರು ಕಾಲೇಜ್​ಗೆ ಟಾಪರ್ ಆಗಿದ್ದಾರೆ. ಇದೀಗ ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಬಸ್ ಚಾಲಕಿಯಾಗಿ ಸಹ ಕೆಲಸ ಮಾಡುತ್ತಾ ಎಲ್ಲರಿಗೂ ಮಾದರಿಯಾಗಿದ್ದಾರೆ.

ನಂದಿನಿ ಚಕ್ರವರ್ತಿ
ನಂದಿನಿ ಚಕ್ರವರ್ತಿ

By

Published : Mar 8, 2021, 7:04 AM IST

ಜಾರ್ಖಂಡ್: ಪ್ರತಿಯೊಬ್ಬರಿಗೂ ದೊಡ್ಡ-ದೊಡ್ಡ ಕನಸುಗಳಿರುತ್ತವೆ. ಕನಸಿನ ಹಾದಿಯಲ್ಲಿ ಸಾಗುತ್ತಾ ಮುಂದೆಹೋದ್ರೆ ಕೆಲವೊಮ್ಮೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗುತ್ತದೆ. ಈ ಎಲ್ಲ ಸಮಸ್ಯೆಗಳನ್ನು ಮೆಟ್ಟಿನಿಂತು ಇಲ್ಲೋರ್ವ ಮಹಿಳೆ ಎಲ್ಲರಿಗೂ ಮಾದರಿಯಾಗಿದ್ದಾರೆ.

ಜಾರ್ಖಂಡ್​ನ ಹಜಾರಿಬಾಗ್ ಮೂಲದ ನಂದಿನಿ ಚಕ್ರವರ್ತಿ ಎಂಬುವರು ಕಾಲೇಜ್​ಗೆ ಟಾಪರ್ ಆಗಿ, ಇದೀಗ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುವ ಜೊತೆಗೆ ಬಸ್ ಚಾಲಕಿಯಾಗಿ ಸಹ ಕೆಲಸ ಮಾಡುತ್ತಿದ್ದಾರೆ.

ಬಸ್​ ಚಾಲಕಿಯಾಗಿಯೂ ಕೆಲಸ ಮಾಡುತ್ತಿರುವ ಶಿಕ್ಷಕಿ

ಸಂಸ್ಕೃತದಲ್ಲಿ ಎಂಎ ಪದವಿ ಪಡೆದಿರುವ ಚಕ್ರವರ್ತಿ 1998ರಲ್ಲಿ ಖಾಸಗಿ ಶಾಲೆಯಲ್ಲಿ ಶಿಕ್ಷಕರಾಗಿ ಸೇರಿದ್ದರು. ಈ ಸಂಬಳದಿಂದ ಕುಟುಂಬ ನಿರ್ವಾಹಣೆ ಹಾಗೂ ತನ್ನ ಇಬ್ಬರು ಮಕ್ಕಳಿಗೆ ಸರಿಯಾದ ಶಿಕ್ಷಣ ನೀಡುವುದು ಕಷ್ಟ ಎಂದು ಅರಿತು, ಪರ್ಯಾಯ ಮಾರ್ಗವನ್ನು ಹೊಡುಕಿಕೊಂಡು 2004 ರಿಂದ ಶಾಲಾ ಬಸ್​​ ಚಾಲನೆ ಮಾಡುತ್ತಿದ್ದಾರೆ. ಬಸ್​ ಚಾಲನೆ ಮಾಡುವುದರ ಜೊತೆಗೆ ಬಡ ಮತ್ತು ವಂಚಿತ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ಶಾಲಾ ಉಡುಪುಗಳು ಮತ್ತು ಶಿಕ್ಷಣಕ್ಕೆ ಅಗತ್ಯವಾದ ಮೂಲ ಸಾಧನಗಳನ್ನು ಒದಗಿಸಿ, ಮಾದರಿ ಶಿಕ್ಷಕಿಯಾಗಿದ್ದಾರೆ.

ಈ ಕುರಿತು ಈಟಿವಿ ಭಾರತದೊಂದಿಗೆ ತಮ್ಮ ಅಭಿಪ್ರಾಯ ಹಂಚಿಕೊಂಡ ನಂದಿನಿ, ನಾನು ವಿನೋಬಾ ಭಾವೆ ವಿಶ್ವವಿದ್ಯಾಲಯದಲ್ಲಿ ಸಂಸ್ಕೃತದಲ್ಲಿ ಸ್ನಾತಕೋತ್ತರ ಪದವಿ ಪಡೆದುಕೊಂಡಿದ್ದೇನೆ. ಶಿಕ್ಷಕಿಯಾಗಿ ಖಾಸಗಿ ಶಾಲೆ ಸೇರಿಕೊಂಡೆ. ರೇಡಿಯೋ ಕೇಂದ್ರದಲ್ಲಿ ಅನೌನ್ಸರ್ ಆಗಿ ನನ್ನ ಪತಿ ಕೆಲಸ ಮಾಡುತ್ತಿದ್ದಾರೆ. ನಾನು ಶಾಲಾ ಬಸ್​ ಓಡಿಸುವುದಕ್ಕೆ ನನ್ನ ಗಂಡ ಹೆಚ್ಚು ಪ್ರೋತ್ಸಾಹ ನೀಡಿದರು. ನನ್ನ ಆಭರಣಗಳನ್ನು ಮಾರಿ 2004 ರಲ್ಲಿ ವ್ಯಾನ್ ಖರೀದಿಸಿ, ಅಂದಿನಿಂದ ಶಾಲಾ ಬಸ್​ ಓಡಿಸುತ್ತಿದ್ದೇನೆ ಎಂದು ಹೇಳಿದರು.

ABOUT THE AUTHOR

...view details