ಭಾಗಲ್ಪುರ್(ಬಿಹಾರ): ಚಲಿಸುತ್ತಿರುವ ರೈಲಿನ ಬೋಗಿಗಳು ಇಂಜಿನ್ನಿಂದ ವಿಭಜನೆ ಆಗಿರುವ ಘಟನೆ ಬಿಹಾರದ ಭಾಗಲ್ಪುರ್ - ಕಿಯುಲ್ ರೈಲು ಮಾರ್ಗದಲ್ಲಿ ನಡೆದಿದೆ. ರೈಲು ನಿಲ್ದಾಣದಿಂದ ಹೊರಟ ಮಾಲ್ಡಾ-ಕಿಯುಲ್ ಇಂಟರ್ಸಿಟಿ ಎಕ್ಸ್ಪ್ರೆಸ್ ರೈಲು ಸುಮಾರು ಎರಡು ಕಿಲೋಮೀಟರ್ ಚಲಿಸುವಷ್ಟರಲ್ಲೆ ರೈಲಿನ ಹಿಂದಿನ 4 ಬೋಗಿಗಳು ಇಂಜಿನ್ನಿಂದ ಬೇರ್ಪಟ್ಟಿದ್ದು. ಪ್ರಯಾಣಿಕರಲ್ಲಿ ಗೊಂದಲ ಉಂಟು ಮಾಡಿದೆ
15 ಬೋಗಿಗಳನ್ನು ಹೊಂದಿದ್ದ ರೈಲು ಭಾಗಲ್ಪುರ್ನಿಂದ ಕಿಯುಲ್ಗೆ ಪ್ರಯಾಣಿಸುತಿತ್ತು, ಮಾರ್ಗ ಮಧ್ಯೆದಲ್ಲಿ ರೈಲಿನ ಕೊನೆಯ ಬೋಗಿಗಳು ಇಂಜಿನ್ನಿಂದ ಬೇರ್ಪಟ್ಟಿದ್ದನ್ನು ತಿಳಿದ ಲೋಕೋ ಪೈಲಟ್, ರೈಲನ್ನು ನಿಲ್ಲಿಸಿದರು. ಆ ಬಳಿಕ ತಾಂತ್ರಿಕ ಸಿಬ್ಬಂದಿಗೆ ಕರೆ ಮಾಡಿ ವಿಷಯ ತಿಳಿಸಿ, ಬೋಗಿಗಳನ್ನು ಮರು ಬೋಗಿಗಳನ್ನು ಜೋಡಿಸುವ ಕಾರ್ಯ ಮಾಡಲಾಯಿತು.