ಲಖನೌ(ಉತ್ತರ ಪ್ರದೇಶ):ಉತ್ತರ ಪ್ರದೇಶದಲ್ಲಿ ಇಂದು ನಡೆಯುತ್ತಿರುವ ಚುನಾವಣೆಯ ಮತ ಎಣಿಕೆಯ ನಡುವೆಯೇ ಗುಪ್ತಚರ ದಳ (ಐಬಿ) ಉತ್ತರ ಪ್ರದೇಶ ಗೃಹ ಇಲಾಖೆಗೆ ವರದಿಯೊಂದನ್ನು ಸಲ್ಲಿಸಿದೆ. ಉತ್ತರ ಪ್ರದೇಶದ 17 ಜಿಲ್ಲೆಗಳಲ್ಲಿ ಹಿಂಸಾಚಾರದ ಸಾಧ್ಯತೆಯನ್ನು ವರದಿ ಎಚ್ಚರಿಕೆ ನೀಡಿದೆ. ಗುಪ್ತಚರ ದಳವು, ಕಾನ್ಪುರ, ಮೊರಾದಾಬಾದ್, ಸಹರಾನ್‌ಪುರ್, ಸಂಭಾಲ್, ಮೀರತ್, ಬಿಜ್ನೋರ್, ಜೌನ್‌ಪುರ್ ಮತ್ತು ಅಜಂಗಢ್ ಸೇರಿದಂತೆ 17 ಜಿಲ್ಲೆಗಳಲ್ಲಿ ಹಿಂಸಾಚಾರ ಮತ್ತು ಗೊಂದಲದ ಸಾಧ್ಯತೆ ಇದೆ ಎಂದಿದೆ.
ಐಬಿ ವರದಿಯ ಪ್ರಕಾರ, ಸೋತ ಅಭ್ಯರ್ಥಿಗಳು ಕಾರ್ಯಕರ್ತರಲ್ಲಿ ಘರ್ಷಣೆಗೆ ಪ್ರಚೋದಿಸಬಹುದು ಎಂದು ಹೇಳಿದೆ. ವರದಿಯ ನಂತರ ಯುಪಿ ಗೃಹ ಇಲಾಖೆ ಮತ್ತು ಯುಪಿ ಪೊಲೀಸರು ಅಲರ್ಟ್ ಆಗಿದ್ದು, ಭದ್ರತೆ ಹೆಚ್ಚಿಸಿದ್ದಾರೆ.