ಕರ್ನಾಟಕ

karnataka

ETV Bharat / bharat

10 ತಿಂಗಳ ನಂತರ ಸಂಚಾರಕ್ಕೆ ಇಂಡೋ-ನೇಪಾಳ ಗಡಿ ಮುಕ್ತ - ಕೊರೊನಾ ಸಾಂಕ್ರಾಮಿಕ ರೋಗ

ಇದರಲ್ಲಿ ನೇಪಾಳದ ಬಂಕೆ ಜಿಲ್ಲೆಯ ಜಮುನ್ಹಾ, ಕೈಲಾಲಿ ಜಿಲ್ಲೆಯ ಗೌರಿಫಂತ, ಕಾಂಚನಪುರ ಜಿಲ್ಲೆಯ ಗಡ್ಡಚೌಕಿ, ಬೈತ್ರಿ ಜಿಲ್ಲೆಯ ಜುಲಾಘಾಟ್ ಮತ್ತು ಧಾರ್ಚುಲಾ ಸೇರಿವೆ..

indo-nepal-border-opens-after-10-months-for-indians
10 ತಿಂಗಳ ನಂತರ ಸಂಚಾರಕ್ಕೆ ಇಂಡೋ-ನೇಪಾಳ ಗಡಿ ಮುಕ್ತ

By

Published : Jan 30, 2021, 4:48 PM IST

ಬಹ್ರೇಚ್: ಭಾರತೀಯ ಪ್ರಜೆಗಳಿಗೆ ಸೂಕ್ತ ದಾಖಲೆಗಳೊಂದಿಗೆ ಬಹ್ರೇಚ್​​ ಸಮೀಪವಿರುವ ಇಂಡೋ-ನೇಪಾಳ ಗಡಿ ಮುಕ್ತಗೊಳಿಸಲಾಗಿದೆ. ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ನೇಪಾಳ ಮಾರ್ಚ್ 23ರಂದು ಗಡಿಗಳನ್ನು ಮುಚ್ಚಿತ್ತು.

ಕಳೆದ 10 ತಿಂಗಳಿಂದ ಉಭಯ ದೇಶಗಳ ನಡುವಿನ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು. ನೇಪಾಳದ ಗೃಹ ಸಚಿವಾಲಯದ ಮಾಹಿತಿಯ ಪ್ರಕಾರ, ಭಾರತದ ಗಡಿಯುದ್ದಕ್ಕೂ ಎಲ್ಲಾ 26 ಮಾರ್ಗಗಳನ್ನು ತೆರೆಯಲಾಗಿದೆ.

ಇದರಲ್ಲಿ ನೇಪಾಳದ ಬಂಕೆ ಜಿಲ್ಲೆಯ ಜಮುನ್ಹಾ, ಕೈಲಾಲಿ ಜಿಲ್ಲೆಯ ಗೌರಿಫಂತ, ಕಾಂಚನಪುರ ಜಿಲ್ಲೆಯ ಗಡ್ಡಚೌಕಿ, ಬೈತ್ರಿ ಜಿಲ್ಲೆಯ ಜುಲಾಘಾಟ್ ಮತ್ತು ಧಾರ್ಚುಲಾ ಸೇರಿವೆ.

ಕೊರೊನಾ ನಿಯಮದ ಜೊತೆಗೆ ಪ್ರೋಟೋಕಾಲ್​ಗಳನ್ನು ಗಮನದಲ್ಲಿಟ್ಟುಕೊಂಡು ಉಭಯ ದೇಶಗಳ ನಡುವಿನ ಸಂಚಾರವನ್ನು ಮೊದಲಿನಂತೆ ಆರಂಭಿಸಲಾಗಿದೆ.

For All Latest Updates

ABOUT THE AUTHOR

...view details