ನಾಗ್ಪುರ (ಮಹಾರಾಷ್ಟ್ರ): ತಾಂತ್ರಿಕ ದೋಷ ಕಾರಣದಿಂದ ಇಂಡಿಗೋ ವಿಮಾನವು ಮಹಾರಾಷ್ಟ್ರದ ನಾಗ್ಪುರ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ ಮಾಡಿದೆ. ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಇಂಡಿಗೋ ವಿಮಾನಯಾನ ಸಂಸ್ಥೆ ಹೇಳಿದೆ.
ನಾಗ್ಪುರದಿಂದ ಉತ್ತರ ಪ್ರದೇಶದ ಲಖನೌಗೆ ವಿಮಾನ ಟೇಕ್ ಆಫ್ ಆಗಿತ್ತು. ಆದರೆ, ತಾಂತ್ರಿಕ ಸಮಸ್ಯೆ ಕಾರಣ ಮರಳಿ ನಾಗ್ಪುರಕ್ಕೆ ಬಂದು ತುರ್ತು ಭೂಸ್ಪರ್ಶ ಮಾಡಲಾಗಿದೆ. ಪೈಲಟ್‌ಗಳು ಮುನ್ನೆಚ್ಚರಿಕೆಯ ಕಾರ್ಯ ವಿಧಾನ ಅನುಸರಿಸಿದ ಕಾರಣ ವಿಮಾನವು ಸುರಕ್ಷಿತವಾಗಿ ಮರಳಿದೆ ಎಂದೂ ವಿಮಾನಯಾನ ಸಂಸ್ಥೆ ತಿಳಿಸಿದೆ.