ಕರ್ನಾಟಕ

karnataka

ETV Bharat / bharat

ಮುಂದಿನ ವರ್ಷಗಳಲ್ಲಿ ಶೇ. 7ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧ್ಯ: ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್ - ಆರ್ಥಿಕತೆ

ಮುಂಬರುವ ಹಣಕಾಸು ವರ್ಷದಲ್ಲಿ ಶೇಕಡಾ 6.5 ರಷ್ಟು ಆರ್ಥಿಕಾಭಿವೃದ್ಧಿ ಸಾಧ್ಯ ಮತ್ತು ಆ ನಂತರದ ವರ್ಷಗಳಲ್ಲಿ ಶೇ 7ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧ್ಯವಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ ಕೃಷ್ಣಮೂರ್ತಿ ಸುಬ್ರಮಣಿಯನ್ ಆಶಾಭಾವನೆ ವ್ಯಕ್ತಪಡಿಸಿದ್ದಾರೆ.

indices open flat amid mixed global cues
ಬರುವ ವರ್ಷಗಳಲ್ಲಿ ಶೇ. 7 ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧ್ಯ - ಮುಖ್ಯ ಆರ್ಥಿಕ ಸಲಹೆಗಾರ ಸುಬ್ರಮಣಿಯನ್

By

Published : Jun 29, 2021, 12:26 PM IST

ಹೈದರಾಬಾದ್‌: ಕೋವಿಡ್-19 ಮೊದಲ ಹಂತದ ಬಳಿಕ ದೇಶದ ಆರ್ಥಿಕತೆ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ ಅನಿರೀಕ್ಷಿತವಾಗಿ ಭುಗಿಲೆದ್ದ ಎರಡನೇ ಅಲೆ ಕೆಲವು ಗಂಭೀರ ಸವಾಲುಗಳನ್ನು ಎದುರಿಸುವಂತೆ ಮಾಡಿದೆ ಎಂದು ಕೇಂದ್ರ ಸರ್ಕಾರದ ಮುಖ್ಯ ಆರ್ಥಿಕ ಸಲಹೆಗಾರ (ಸಿಇಒ) ಡಾ.ಕೆ.ವಿ ಸುಬ್ರಮಣಿಯನ್ ಹೇಳಿದ್ದಾರೆ.

ಆದರೆ ಮೊದಲ ಅಲೆಗೆ ಹೋಲಿಸಿದರೆ ಆರ್ಥಿಕತೆಯ ಮೇಲೆ 2ನೇ ಅಲೆಯ ಬೆದರಿಕೆಯ ಪರಿಣಾಮವು ಕಡಿಮೆ ಇದೆ. ಇದರಿಂದ ದೇಶ ಶೀಘ್ರವಾಗಿ ಆರ್ಥಿಕತೆಯಲ್ಲಿ ಚೇತರಿಕೆಯೊಂದಿಗೆ ಮತ್ತೆ ಆಕರ್ಷಕ ಬೆಳವಣಿಗೆಯ ಹಾದಿಯಲ್ಲಿ ಸಾಗಲಿದೆ ಎಂದರು.

ಮುಂಬರುವ ಹಣಕಾಸು ವರ್ಷದಲ್ಲಿ ಶೇಕಡಾ 6.5 ರಷ್ಟು ಬೆಳವಣಿಗೆ ಸಾಧ್ಯವಿದೆ. ನಂತರದ ವರ್ಷಗಳಲ್ಲಿ ಶೇ 7 ಕ್ಕಿಂತ ಹೆಚ್ಚಿನ ಬೆಳವಣಿಗೆ ಸಾಧಿಸಲಿದೆ ಎಂಬ ಆಶಾಭಾವನೆ ವ್ಯಕ್ತಪಡಿಸಿದರು. 'ಭಾರತೀಯ ಆರ್ಥಿಕತೆ - ಬೆಳವಣಿಗೆಯ ಹಾದಿ, ಭವಿಷ್ಯ' ಕುರಿತು ನಿನ್ನೆ ಎಫ್‌ಟಿಸಿಸಿಐ (ತೆಲಂಗಾಣ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ) ಆಯೋಜಿಸಿದ್ದ ಓಂ ಪ್ರಕಾಶ್ ಟಿಬ್ರುವಲಾ ಸ್ಮಾರಕ ಉಪನ್ಯಾಸದಲ್ಲಿ ಸುಬ್ರಮಣಿಯನ್‌ ಮುಖ್ಯ ಭಾಷಣಕಾರರಾಗಿ ಭಾಗವಹಿಸಿದ್ದರು.

'ಸುಧಾರಣೆಗಳು ಉತ್ತಮ ಫಲಿತಾಂಶ ನೀಡುತ್ತಿವೆ'

ವಿವಿಧ ಕ್ಷೇತ್ರಗಳಲ್ಲಿ ಕೇಂದ್ರ ಸರ್ಕಾರವು ದೊಡ್ಡ ಪ್ರಮಾಣದಲ್ಲಿ ಕೈಗೊಂಡ ಸುಧಾರಣೆಗಳ ಫಲಿತಾಂಶಗಳು ಈಗಾಗಲೇ ಗೋಚರಿಸುತ್ತಿದ್ದು, ಇದು ಆರ್ಥಿಕ ಬೆಳವಣಿಗೆಯನ್ನು ಗಮನಾರ್ಹವಾಗಿ ಸುಧಾರಿಸುತ್ತದೆ ಎಂದು ಅವರು ವಿಶ್ಲೇಷಿಸಿದರು. ಕಾರ್ಮಿಕ ಸುಧಾರಣೆಗಳು, ಖಾಸಗಿ ಹೂಡಿಕೆಯ ಸಜ್ಜುಗೊಳಿಸುವಿಕೆ, ಉತ್ಪಾದನಾ ಕ್ಷೇತ್ರದ ಉತ್ತೇಜನ, 13 ಕ್ಷೇತ್ರಗಳಿಗೆ ಅನ್ವಯವಾಗುವ ಪಿಎಲ್ಐ ಯೋಜನೆ ನಾವೀನ್ಯತೆ, ಕೃಷಿಗೆ ಆದ್ಯತೆ, ವಿದ್ಯುತ್, ರಸ್ತೆಗಳು ಇತ್ಯಾದಿಗಳನ್ನು ಅವರು ಪ್ರಸ್ತಾಪಿಸಿದರು.

ಹೆಚ್ಚಿನ ಆದಾಯವು ಹೆಚ್ಚುತ್ತಿರುವ ಬಳಕೆಯ ಸಂಕೇತವಾಗಿದೆ ಎಂದು ಜಿಎಸ್‌ಟಿ ಬಗ್ಗೆ ವಿವರಿಸಿದ ಮುಖ್ಯ ಆರ್ಥಿಕ ಸಲಹೆಗಾರ ಡಾ.ಕೆ.ವಿ.ಎಸ್, ಜಿಎಫ್‌ಸಿಎಫ್ (ಒಟ್ಟು ಸ್ಥಿರ ಬಂಡವಾಳ ರಚನೆ) ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಜಿಡಿಪಿ ಬೆಳವಣಿಗೆಯ ಶೇಕಡಾ 34.3 ರಷ್ಟು ದಾಖಲಾಗಿದೆ, ಇದು ಆರು ವರ್ಷಗಳಲ್ಲಿ ಗರಿಷ್ಠವಾಗಿದೆ ಎಂದರು.

ಇದನ್ನೂ ಓದಿ: 3ನೇ ಹಂತದ ಅನ್‌ಲಾಕ್‌ಗೆ ಸರ್ಕಾರ ಚಿಂತನೆ: ದೇವಸ್ಥಾನ, ಮಾಲ್‌ಗಳಿಗೆ ವಿನಾಯಿತಿ ನೀಡುವ ಸಾಧ್ಯತೆ

1.75 ಲಕ್ಷ ಕೋಟಿ ಸುಗಮ ವಾಪಸಾತಿ ಪ್ರಕ್ರಿಯೆ

ಪ್ರಸಕ್ತ ಹಣಕಾಸು ವರ್ಷದಲ್ಲಿ ವಿದೇಶಿ ಹೂಡಿಕೆ ಮೂಲಕ 1.75 ಲಕ್ಷ ಕೋಟಿ ರೂ.ಗಳನ್ನು ಸಂಗ್ರಹಿಸುವ ಗುರಿಯತ್ತ ಕೇಂದ್ರ ಸರ್ಕಾರ ಸಾಗುತ್ತಿದೆ. ಎಲ್‌ಐಸಿ, ಬಿಪಿಸಿಎಲ್, ಐಒಬಿ, ಐಡಿಬಿಐ ಬ್ಯಾಂಕ್, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಸಾರ್ವಜನಿಕ ವಲಯದ ಷೇರುಗಳ ಮಾರಾಟ ಮಾಡಲು ಸರ್ಕಾರ ಸಿದ್ಧತೆ ನಡೆಸುತ್ತಿದೆ. ಸರ್ಕಾರಿ ಸ್ವಾಮ್ಯದ ಉದ್ಯಮಗಳ ಖಾಸಗೀಕರಣಕ್ಕೆ ಈ ವರ್ಷ ಬಹಳ ಮಹತ್ವದ ವರ್ಷವಾಗಿ ಉಳಿಯಲಿದೆ ಎಂದಿರುವ ಅವರು, ಇದಕ್ಕೆ ಸಂಬಂಧಿಸಿದ ಕಾರ್ಯಗಳು ಸಕ್ರಿಯವಾಗಿ ನಡೆಯುತ್ತಿವೆ ಎಂದು ಹೇಳಿದರು. ಏರ್ ಇಂಡಿಯಾ ಕೂಡ ಖಾಸಗೀಕರಣದತ್ತ ಹೆಜ್ಜೆ ಹಾಕುತ್ತಿದೆ ಎಂದು ಇದೇ ವೇಳೆ ಮಾಹಿತಿ ನೀಡಿದರು.

ABOUT THE AUTHOR

...view details