ಕರ್ನಾಟಕ

karnataka

ETV Bharat / bharat

COVID update: ದೇಶಾದ್ಯಂತ ಕೊರೊನಾ ಗುಣಮುಖರ ಪ್ರಮಾಣ ಶೇ. 90.80ಕ್ಕೆ ಏರಿಕೆ

ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,617 ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದು, 1,73,921 ಕೇಸ್​​ಗಳು ಪತ್ತೆಯಾಗಿವೆ.

Total number of corona cases, deaths, Vaccination in India
ಕೋವಿಡ್​ ಗುಣಮುಖರ ಪ್ರಮಾಣ ಶೇ. 90.80ಕ್ಕೆ ಏರಿಕೆ

By

Published : May 29, 2021, 10:07 AM IST

ನವದೆಹಲಿ: ದೇಶದಲ್ಲಿ ಪತ್ತೆಯಾದ ಹೊಸ ಕೋವಿಡ್​ ಸೋಂಕಿತರಿಗಿಂತಲೂ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿ ಹೊರಬಂದವರೇ ಹೆಚ್ಚಿದ್ದಾರೆ. ಶುಕ್ರವಾರ 1.73 ಲಕ್ಷ ಕೇಸ್​ಗಳು ವರದಿಯಾಗಿದ್ದು, 2,84,601 ಮಂದಿ ಗುಣಮುಖರಾಗಿದ್ದಾರೆ.

ಮಾರಣಾಂತಿಕ ವೈರಸ್​ನಿಂದ ಈವರೆಗೆ ಒಟ್ಟು 2,51,78,011 ಮಂದಿ ಚೇತರಿಸಿಕೊಂಡಿದ್ದು, ದೇಶದ ಗುಣಮುಖರ ಪ್ರಮಾಣ ಶೇ. 90.80ಕ್ಕೆ ಏರಿಕೆಯಾಗಿದೆ. ಸಕ್ರಿಯ ಪ್ರಕರಣಗಳು ಸಹ ಕಡಿಮೆಯಾಗುತ್ತಿದ್ದು, ಸದ್ಯ 22,28,724 ಕೇಸ್​ಗಳು ಆ್ಯಕ್ಟಿವ್​ ಆಗಿವೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಕಳೆದ 24 ಗಂಟೆಗಳಲ್ಲಿ 3,617 ಮಂದಿ ಸೋಂಕಿಗೆ ಬಲಿಯಾಗಿದ್ದು, 1,73,921 ಸೋಂಕಿತರು ಪತ್ತೆಯಾಗಿದ್ದಾರೆ. ಈ ಮೂಲಕ ಭಾರತದಲ್ಲಿ ಮೃತರ ಸಂಖ್ಯೆ 3,22,512ಕ್ಕೆ ಹಾಗೂ ಸೋಂಕಿತರ ಸಂಖ್ಯೆ 2,77,29,247ಕ್ಕೆ ಹೆಚ್ಚಳವಾಗಿದೆ.

20.89 ಕೋಟಿ ಮಂದಿಗೆ ಲಸಿಕೆ

ಪ್ರಸ್ತುತ ದೇಶದಲ್ಲಿ ಲಸಿಕೆ ಕೊರತೆಯಿಂದಾಗಿ ನಿಧಾನಗತಿಯಲ್ಲಿ ವ್ಯಾಕ್ಸಿನೇಷನ್​ ಡ್ರೈವ್​ ನಡೆಯುತ್ತಿದ್ದು, ಜನವರಿ 16ರಿಂದ ಇಲ್ಲಿಯವರೆಗೆ ಒಟ್ಟು 20,89,02,445 ಮಂದಿಗೆ ಲಸಿಕೆ ನೀಡಲಾಗಿದೆ.

ABOUT THE AUTHOR

...view details