ಕರ್ನಾಟಕ

karnataka

ETV Bharat / bharat

ದಟ್ಟ ಮಂಜಿನಿಂದ ರೈಲು ಸಚಾರದಲ್ಲಿ ಅಡಚಣೆ: "ಫಾಗ್​ ಪಾಸ್" GPS ಆಧಾರಿತ​ ಸಾಧನ ಪರಿಚಯಿಸಿದ ಇಲಾಖೆ - ಫಾಗ್​ ಪಾಸ್

ರೈಲ್ವೆ ಇಲಾಖೆಯು 19,742 ಫಾಗ್​ ಪಾಸ್​ ಸಾಧನಗಳನ್ನು ಪರಿಚಯಿಸಿದ್ದು, ಉತ್ತರ ಭಾರತದಲ್ಲಿ ಸಂಚರಿಸುವ ರೈಲುಗಳಿಗೆ ಈ ಸಾಧನಗಳನ್ನು ಅಳವಡಿಸಿದೆ.

indian-railways-introduced-fog-pass-devices-for-foggy-weather
"ಫಾಗ್​ ಪಾಸ್" GPS ಆಧಾರಿತ​ ಸಾಧನ ಪರಿಚಯಿಸಿದ ಇಲಾಖೆ

By ETV Bharat Karnataka Team

Published : Jan 16, 2024, 7:59 PM IST

ನವದೆಹಲಿ: ಈ ಚಳಿಗಾಲದಲ್ಲಿ ದಟ್ಟವಾದ ಮಂಜಿನಿಂದಾಗಿ ರೈಲುಗಳ ಓಡಾಟದಲ್ಲಿ ಆಗುತ್ತಿರುವ ವಿಳಂಬ ಹಾಗೂ ಅಡಚಣೆ ತಪ್ಪಿಸಲು ಭಾರತೀಯ ರೈಲ್ವೆ ಇಲಾಖೆಯು, GPS ಆಧಾರಿತ 'ಫಾಗ್​ ಪಾಸ್​' ಎಂಬ ಹೊಸ ಸಾಧನ ಪರಿಚಯಿಸಿದೆ.

ಚಳಿಗಾಲದ ಮಂಜು ವಿಶೇಷವಾಗಿ ದೇಶದ ಉತ್ತರ ಭಾಗಗಳಲ್ಲಿ ರೈಲುಗಳ ಮೇಲೆ ಪರಿಣಾಮ ಬೀರುತ್ತವೆ. ಕೆಲವೊಂದು ಸಂದರ್ಭಗಳಲ್ಲಿ ರೈಲುಗಳು 18- 19 ಗಂಟೆಗಳು ವಿಳಂಬವಾಗಿ, ಜನರ ಕೋಪಕ್ಕೆ ತುತ್ತಾಗಿರುವ ಉದಾಹರಣೆಗಳೂ ಇವೆ. ಇದಕ್ಕೆ ಪರಿಹಾರವನ್ನು ಕಂಡು ಕೊಂಡಿರುವ ರೈಲ್ವೆ ಇಲಾಖೆಯು 19,742 ಫಾಗ್​ ಪಾಸ್​ ಸಾಧನಗಳನ್ನು ರೈಲುಗಳಲ್ಲಿ ಅಳವಡಿಸಿದೆ. ಈ ಸಾಧನಗಳನ್ನು ಹೆಚ್ಚಾಗಿ ಉತ್ತರ ಭಾರತದಲ್ಲಿ ಕಾರ್ಯನಿರ್ವಹಿಸುವ ರೈಲುಗಳಿಗೆ ಅಳವಡಿಸಲಾಗಿದೆ.

ಈ ಉಪಕ್ರಮವು ವಿಳಂಬ ಹಾಗೂ ಅಡಚಣೆಯನ್ನು ಕಡಿಮೆ ಮಾಡುವ ಮೂಲಕ ರೈಲು ಸೇವೆಗಳ ವಿಶ್ವಾಸಾರ್ಹತೆ ಸುಧಾರಿಸುವಲ್ಲಿ, ಮತ್ತು ಒಟ್ಟಾರೆ ಪ್ರಯಾಣಿಕರ ಸುರಕ್ಷತೆ ಹೆಚ್ಚಿಸುವಲ್ಲಿ ನಿರ್ಣಾಯಕ ಹೆಜ್ಜೆಯಾಗಿದೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.

ಏನಿದು ಫಾಗ್​ ಪಾಸ್?​: ಫಾಗ್​ ಪಾಸ್​ ಎಂಬುದು ಜಿಪಿಎಸ್​ ಆಧಾರಿತ ನ್ಯಾವಿಗೇಷನ್​ ಸಾಧನವಾಗಿದ್ದು, ಲೋಕೋ ಪೈಲಟ್​ಗೆ ದಟ್ಟವಾದ ಮಂಜಿನ ಪರಿಸ್ಥಿತಿಯಲ್ಲಿ ಲ್ಯಾಂಡ್​ಮಾರ್ಕ್​ಗಳ ಕುರಿತು ನೈಜ ಸಮಯದ ಮಾಹಿತಿಯನ್ನು ಒದಗಿಸುವ ಮೂಲಕ ನ್ಯಾವಿಗೇಟ್​ ಮಾಡಲು ಸಹಾಯ ಮಾಡುತ್ತದೆ. ಈ ಸಾಧನ ಸಿಗ್ನಲ್​ಗಳು, ಲೆವೆಲ್​ ಕ್ರಾಸಿಂಗ್​ ಗೇಟ್​ಗಳು (ಮಾನವಸಹಿತ ಮತ್ತು ಮಾನವ ರಹಿತ), ಶಾಶ್ವತ ವೇಗದ ನಿರ್ಬಂಧಗಳು, ತಟಸ್ಥ ವಿಭಾಗಗಳು ಮುಂತಾದ ಲ್ಯಾಂಡ್​ಮಾರ್ಕ್​ಗಳ ಬಗ್ಗೆ ಲೋಕೋ ಪೈಲಟ್​ಗಳಿಗೆ ನೈಜ - ಸಮಯದ ಮಾಹಿತಿ ಪ್ರದರ್ಶನ ಹಾಗೂ ಧ್ವನಿ ಮಾರ್ಗದರ್ಶನದ ಮೂಲಕ ಒದಗಿಸುತ್ತದೆ. ಈ ಸಾಧನವು ಮುಂದೆ ಬರುವಂತಹ ಮೂರು ಲ್ಯಾಂಡ್​ಮಾರ್ಕ್​ಗಳನ್ನು, ಅವುಗಳು 500 ಮೀಟರ್ ದೂರದಲ್ಲಿರುವಾಗಲೇ ಭೌಗೋಳಿಕ ಕ್ರಮದಲ್ಲಿ ಧ್ವನಿ ಸಂದೇಶದ ಮೂಲಕ ಪ್ರದರ್ಶಿಸುತ್ತದೆ.

ಉತ್ತರ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, "ಈ ಸಾಧನವೂ ಮಂಜಿನಿಂದಾಗಿ ಸ್ವಲ್ಪವೂ ಕಾಣದಂತಹ ಪರಿಸ್ಥಿತಿಯಲ್ಲೂ ಲ್ಯಾಂಡ್​ಮಾರ್ಕ್​ಗಳ ನಿಖರವಾದ ದೂರವನ್ನು ಇದು ತೋರಿಸುತ್ತದೆ. ಕಡಿಮೆ ಗೋಚರತೆಯ ಸಮಯದಲ್ಲಿ ಮುಂಬರುವ ಸಿಗ್ನಲ್​ ಹಾಗೂ ದೂರದ ಮೀಟರ್​ ಅನ್ನು ಧ್ವನಿ ಸಂದೇಶದ ಮೂಲಕ ತಿಳಿಸುತ್ತದೆ. ಫಾಗ್​ ಪಾಸ್​ನ ಕಾರ್ಯ ಸರಳವಾಗಿದ್ದರೂ ಪರಿಣಾಮಕಾರಿ ಆಗಿರುತ್ತದೆ. ರೈಲು ಹೊರಡುವ ಮೊದಲು ಈ ಸಾಧನವನ್ನು ಲೋಕೋ ಪೈಲಟ್​ಗೆ ಒದಗಿಸಲಾಗುತ್ತದೆ. ಈ ಸಾಧನ ಆ್ಯಂಟೆನಾ ಹೊಂದಿದ್ದು, ಸಿಗ್ನಲ್​ಗಳನ್ನು ಸೆರೆಹಿಡಿಯುತ್ತದೆ. ಜೊತೆಗೆ ಇದು ಸ್ವಯಂಚಾಲಿತ ಹಾಗೂ ಮಾನ್ಯುವಲ್​ ಎರಡು ವಿಧಾನಗಳಲ್ಲಿ ಕಾರ್ಯ ನಿರ್ವಹಿಸುತ್ತದೆ. ಸಿಗ್ನಲ್​ ರೈಲು ಸಾಗುತ್ತಿರುವ ಮಾರ್ಗವನ್ನು ತೋರಿಸುತ್ತದೆ. ಒಂದು ವೇಳೆ, ಅದು ಕಾರ್ಯ ನಿರ್ವಹಿಸದಿದ್ದರೆ, ಅದನ್ನು ಮಾನ್ಯುವಲ್​ ಮೋಡ್​ಗೆ ಬದಲಾಯಿಸಬಹುದು." ಎಂದು ತಿಳಿಸಿದರು.

"ಪ್ರತಿ ವರ್ಷ ದಟ್ಟ ಮಂಜಿನಿಂದಾಗಿ ಹಲವಾರು ರೈಲುಗಳು ನಿಗದಿತ ಸಮಯಕ್ಕಿಂತ ತಡುವಾಗಿ ಸಂಚರಿಸುವುದು ಅಥವಾ ರದ್ದುಗೊಳ್ಳುತ್ತವೆ. ಅಂತಹ ಸಂದರ್ಭದಲ್ಲಿ ಫಾಗ್​ ಪಾಸ್​ ಸಾಧನ ರೈಲು ಕಾರ್ಯಾಚರಣೆ ಸುಧಾರಿಸಲು ಸಹಾಯ ಮಾಡುತ್ತದೆ. ಆದರೆ ದಟ್ಟವಾದ ಮಂಜಿನ ಪರಿಸ್ಥಿತಿಯನ್ನು ನಿಭಾಯಿಸಲು ಇದು ಸಂಪೂರ್ಣ ಪರಿಹಾರವಲ್ಲ. ಯಾಕೆಂದರೆ ಈ ಸಾಧನ ಲೋಕೋ ಪೈಲಟ್​ಗೆ ಯಾವುದೇ ಹೆಚ್ಚುವರಿ ಚಿತ್ರಣವನ್ನು ನೀಡುವುದಿಲ್ಲ." ಎಂದು ಅವರು ತಿಳಿಸಿದರು.

ಒಟ್ಟು 19742 ಫಾಗ್​ ಪಾಸ್​ ಸಾಧನಗಳನ್ನು ರೈಲ್ವೆ ಇಲಾಖೆ ಪರಿಚಯಿಸಿದೆ. ಅವುಗಳಲ್ಲಿ ಅಂಕಿ - ಅಂಶಗಳ ಪ್ರಕಾರ, ಕೇಂದ್ರ ರೈಲ್ವೆ- 560, ಪೂರ್ವ ರೈಲ್ವೆ-1103, ಪೂರ್ವ ಕರಾವಳಿ ರೈಲ್ವೆ- 375, ಉತ್ತರ ರೈಲ್ವೆ-4491, ಉತ್ತರ ಮಧ್ಯ ರೈಲ್ವೆ-1289, ಈಶಾನ್ಯ ರೈಲ್ವೆ- 1762, ಈಶಾನ್ಯ ಗಡಿ ರೈಲ್ವೆ-1101, ವಾಯವ್ಯ ರೈಲ್ವೆ- 992, ದಕ್ಷಿಣ ಮಧ್ಯ ರೈಲ್ವೆ-1120, ಆಗ್ನೇಯ ರೈಲ್ವೆ-2955, ಆಗ್ನೇಯ ಮಧ್ಯ ರೈಲ್ವೆ- 997, ನೈರುತ್ಯ ರೈಲ್ವೆ-60 ಮತ್ತು ಮಶ್ಚಿಮ ಮಧ್ಯೆ ರೈಲ್ವೆಗೆ -1046 ಸಾಧನಗಳನ್ನು ಒದಗಿಸಲಾಗಿದೆ ಎಂದು ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.

ಇದನ್ನೂ ಓದಿ:ಮೋದಿ ಸರ್ಕಾರ ಬಂದ ಮೇಲೆ ರೈಲ್ವೆ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಸಚಿವ ಅಶ್ವಿನಿ ವೈಷ್ಣವ್

ABOUT THE AUTHOR

...view details