ಕರ್ನಾಟಕ

karnataka

ETV Bharat / bharat

ತಮಿಳುನಾಡಿನ ಊಟಿ ಬಳಿ ಭೀಕರ ದುರಂತ; ಸಿಡಿಎಸ್‌ ಬಿಪಿನ್ ರಾವತ್‌ ಸೇರಿ ಹಲವರಿದ್ದ ಹೆಲಿಕಾಪ್ಟರ್‌ ಪತನ - army helicopter crashes in Coonoor

ಸಿಡಿಎಸ್‌ ಬಿಪಿನ್ ರಾವತ್‌, ಇತರೆ ಸೇನಾ ಅಧಿಕಾರಿಗಳು ಹಾಗು ಕೆಲವು ಕುಟುಂಬಸ್ಥರು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತಮಿಳುನಾಡಿನ ಊಟಿಯ ಕೂನೂರ್‌ ಬಳಿ ಪತನವಾಗಿದೆ.

Indian army helicopter with senior defence official crashes in Coonoor of TamilNadu
ತಮಿಳುನಾಡಿನ ಕೂನೂರ್‌ ಬಳಿ ಸಿಡಿಎಸ್‌ ಬಿಪಿನ್‌ ರಾವತ್‌ ಪ್ರಯಾಣಿಸುತ್ತಿದ್ದ ಹೆಲಿಕ್ಟಾಪರ್‌ ಪತನ

By

Published : Dec 8, 2021, 1:41 PM IST

Updated : Dec 8, 2021, 2:17 PM IST

ಊಟಿ(ತಮಿಳುನಾಡು):ಸಿಡಿಎಸ್‌ ಬಿಪಿನ್‌ ರಾವತ್‌ ಹಾಗು ಅವರ ಕುಟುಂಬದ ಕೆಲವು ಸದಸ್ಯರು ಹಾಗು ಇತರೆ ಹಿರಿಯ ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್‌ ತಮಿಳುನಾಡಿನ ಊಟಿಯ ಕೂನೂರ್‌ ಬಳಿ ಪತನವಾಗಿದೆ.


ಘಟನಾ ಸ್ಥಳದಲ್ಲಿ ಸದ್ಯ 4 ಮಂದಿಯ ಮೃತದೇಹಗಳು ಪತ್ತೆಯಾಗಿವೆ. ತುರ್ತು ರಕ್ಷಣಾ ಪಡೆ ಸ್ಥಳಕ್ಕೆ ದೌಡಾಯಿಸಿದ್ದು, ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ಸಾಗುತ್ತಿದೆ.

ವೆಲ್ಲಿಂಗ್ಟನ್‌ ಸೇನಾ ಕೇಂದ್ರಕ್ಕೆ ಹೋಗುತ್ತಿದ್ದಾಗ ಎಂಐ-17ವಿ5 ಸೇನಾ ಹೆಲಿಕಾಪ್ಟರ್‌ ಪತನವಾಗಿದೆ ಎಂದು ತಿಳಿದುಬಂದಿದೆ.

ಸಂಪೂರ್ಣ ಸುಟ್ಟು ಕರಕಲಾದ ಸೇನಾ ಹೆಲಿಕಾಪ್ಟರ್‌

ನತದೃಷ್ಟ ಹೆಲಿಕಾಪ್ಟರ್‌ನಲ್ಲಿ ಒಟ್ಟು 14 ಮಂದಿ ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಘಟನೆಯ ಬಗ್ಗೆ ತನಿಖೆಗೆ ಆದೇಶಿಸಿರುವುದಾಗಿ ವಾಯುಸೇನೆ ತಿಳಿಸಿದೆ.


ಪ್ರಧಾನಿಗೆ ರಕ್ಷಣಾ ಸಚಿವರಿಂದ ಮಾಹಿತಿ:

ಬಿಪಿನ್‌ ರಾವತ್‌, ಮತ್ತವರ ಪತ್ನಿ ಹಾಗೂ ಸಿಬ್ಬಂದಿಯಿದ್ದ ಹೆಲಿಕಾಪ್ಟರ್‌ ಪತನವಾಗಿರುವ ಬಗ್ಗೆ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮಾಹಿತಿ ನೀಡಿದ್ದಾರೆ.

Last Updated : Dec 8, 2021, 2:17 PM IST

ABOUT THE AUTHOR

...view details