ಕರ್ನಾಟಕ

karnataka

ETV Bharat / bharat

ಭಾರತದ ಸಮಗ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆ ಸಹಿಸಲ್ಲ - ರಕ್ಷಣಾ ಸಚಿವ ರಾಜನಾಥ್‌ ಸಿಂಗ್

ಅಸ್ಸೋಂ-ಅರುಣಾಚಲ ಪ್ರದೇಶದ ಗಡಿ ಪ್ರದೇಶ ಕಿಮಿನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 20 ಕಿ.ಮೀ ಉದ್ದದ ಕಿಮಿನ್ - ಪೊಟಿನ್ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಇಂದು ಲೋಕಾರ್ಪಣೆಗೊಳಿಸಿದರು. ಈ ವೇಳೆ ಮಾತನಾಡಿದ ಅವರು, ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಯಾವುದೇ ಧಕ್ಕೆಯನ್ನು ಸಹಿಸುವುದಿಲ್ಲ ಎಂದು ನೆರೆಯ ಶತ್ರು ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದಾರೆ.

India will not tolerate any misadventures towards its sovereignty: Rajnath Singh
ಭಾರತದ ಸಮಗ್ರತೆ, ಸಾರ್ವಭೌಮತ್ವಕ್ಕೆ ಧಕ್ಕೆಯನ್ನು ಸಹಿಸಲ್ಲ - ರಕ್ಷಣಾ ಸಚಿವ ರಾಜನಾಥ್‌ ಸಿಂಗ್

By

Published : Jun 17, 2021, 10:58 PM IST

ಕಿಮಿನ್‌(ಅರುಣಾಚಲ ಪ್ರದೇಶ): ನೆರೆಯ ಯಾವುದೇ ದೇಶದೊಂದಿಗೆ ಭಾರತವು ಉದ್ದೇಶಪೂರಕವಾಗಿ ಆಕ್ರಮಣಕಾರಿಯನ್ನು ತೋರಿಸಲ್ಲ. ಆದರೆ, ಇತರರಿಂದ ಭಾರತದ ಸಮಗ್ರತೆ ಮತ್ತು ಸಾರ್ವಭೌಮತ್ವಕ್ಕೆ ಯಾವುದೇ ಧಕ್ಕೆಯನ್ನು ಸಹಿಸುವುದಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಬಲವಾಗಿ ಪ್ರತಿಪಾದಿಸಿದ್ದಾರೆ.

ಅಸ್ಸೋಂ-ಅರುಣಾಚಲ ಪ್ರದೇಶದ ಗಡಿಯಲ್ಲಿ ಕಿಮಿನ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 20 ಕಿ.ಮೀ ಉದ್ದದ ಕಿಮಿನ್ - ಪೊಟಿನ್ ರಸ್ತೆಯನ್ನು ರಾಜನಾಥ್‌ ಸಿಂಗ್‌ ಇಂದು ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಪ್ರಧಾನಿ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ರಕ್ಷಣಾ ಕ್ಷೇತ್ರದಲ್ಲಿ ಸಾಕಷ್ಟು ಸುಧಾರಣೆಗಳನ್ನು ತರಲಾಗಿದೆ ಮತ್ತು ಎಲ್ಲಾ ಮೂರು ರಕ್ಷಣಾ ಪಡೆಗಳನ್ನು ಏಕೀಕೃತ ರಚನೆಯಡಿ ಸಿಡಿಎಸ್‌ಅನ್ನು ರಚಿಸಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: ವಿವಾದಿತ ಗಡಿಯಲ್ಲಿ ಚೀನಾ, ಪಾಕ್‌ ಬೆದರಿಕೆ: ಹಿರಿಯ ಸೇನಾಧಿಕಾರಿಗಳ ಮಹತ್ವದ ಸಭೆ

ಅರುಣಾಚಲ ಪ್ರದೇಶದಲ್ಲಿ ನಿರ್ಮಿಸಲಾದ ಇತರ 9 ರಸ್ತೆಗಳು ಮತ್ತು ಲಡಾಖ್ ಮತ್ತು ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶಗಳಲ್ಲಿ ತಲಾ ಒಂದು ರಸ್ತೆಯನ್ನು ಸಚಿವರು ಉದ್ಘಾಟಿಸಿದರು. ಈ ರಸ್ತೆಗಳನ್ನು ಗಡಿ ರಸ್ತೆ ಸಂಸ್ಥೆ (ಬಿಆರ್‌ಒ) ನಿರ್ಮಿಸಿದೆ. ಅರುಣಾಚಲ ಪ್ರದೇಶದ ರಸ್ತೆಗಳನ್ನು ವರ್ಟಕ್, ಅರುಣಂಕ್, ಬ್ರಹ್ಮಂಕ್ ಮತ್ತು ಉದಯಕ್ ಯೋಜನೆಗಳ ಅಡಿ ನಿರ್ಮಿಸಲಾಗಿದೆ.

ಅಸ್ಸೋಂ ಮುಖ್ಯಮಂತ್ರಿ ಡಾ.ಹಿಮಂತ ಬಿಸ್ವಾ ಶರ್ಮಾ, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೆಮಾ ಖಂಡು, ಕೇಂದ್ರ ಕ್ರೀಡಾ ಮತ್ತು ಯುವ ವ್ಯವಹಾರಗಳ ಸಚಿವ ಕಿರಣ್‌ ರಿಜಿಜು ಈ ವೇಳೆ ಉಪಸ್ಥಿತರಿದ್ದರು.

ABOUT THE AUTHOR

...view details