ನವದೆಹಲಿ: ಉಕ್ರೇನ್‌ನ ಮೇಲೆ ರಷ್ಯಾ ತನ್ನ ಆಕ್ರಮಣವನ್ನು ನಿಲ್ಲಿಸುವಂತೆ ಒತ್ತಾಯಿಸುವ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಮೇಲೆ ಮತದಾನದಿಂದ ದೂರವಿರಲು ಭಾರತದ ನಿರ್ಧಾರವು ರಷ್ಯಾಗೆ ಬೆಂಬಲ ಎಂದರ್ಥವಲ್ಲ. ಆದರೆ, ರಷ್ಯಾ ವಿರುದ್ಧ ವೋಟ್ ಮಾಡಿದರೆ ಅದು ಇಂಧನ, ಶಸ್ತ್ರಾಸ್ತ್ರಗಳ ಪೂರೈಕೆ ಮೇಲೆ ಪರಿಣಾಮ ಬೀರುತ್ತದೆ ಎಂದು ತಜ್ಞರು ಹೇಳುತ್ತಾರೆ.
ಏಳು ದಶಕಗಳಿಂದ ವ್ಯಾಪಿಸಿರುವ ರಷ್ಯಾದೊಂದಿಗಿನ ತನ್ನ ಸಂಬಂಧವನ್ನು ಬದಲಾಯಿಸುವ ನಿರ್ಣಯದ ಮೇಲೆ ಅಮೆರಿಕದೊಂದಿಗೆ ಮತದಾನದಿಂದ ದೂರವಿತ್ತು. "ರಷ್ಯಾ ಮಾಡಿದ್ದನ್ನು ನಾವು ಬೆಂಬಲಿಸಿಲ್ಲ. ಆದರೆ, ನಾವು ದೂರ ಉಳಿದಿದ್ದೇವೆ. ಇದು ಈಗಿನ ಪರಿಸ್ಥಿತಿಯಲ್ಲಿ ಸರಿಯಾದ ಕ್ರಮವಾಗಿದೆ," ಎಂದು ನಿವೃತ್ತ ಭಾರತೀಯ ರಾಜತಾಂತ್ರಿಕ ಜಿ. ಪಾರ್ಥಸಾರಥಿ ಹೇಳಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗಿನ ದೂರವಾಣಿ ಸಂಭಾಷಣೆಯಲ್ಲಿ "ತಕ್ಷಣದ ಹಿಂಸಾಚಾರವನ್ನು ನಿಲ್ಲಿಸಬೇಕು" ಎಂದು ಮನವಿ ಮಾಡಿದ್ದರು, ರಾಜತಾಂತ್ರಿಕ ಮಾತುಕತೆ ಮೂಲಕ ಶಾಂತಿ ಕಾಪಾಡಬೇಕು ಎಂದು ಮೋದಿ ಕರೆ ನೀಡಿದರು. "ರಷ್ಯಾ ಮತ್ತು ನ್ಯಾಟೋ ಗುಂಪಿನ ನಡುವಿನ ಭಿನ್ನಾಭಿಪ್ರಾಯಗಳನ್ನು ಪ್ರಾಮಾಣಿಕ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಬಹುದು ಎಂದು ಪುಟಿನ್ ಅವರಿಗೆ ಮನವಿ ಮಾಡಿಕೊಂಡಿದ್ದರು.