ಕರ್ನಾಟಕ

karnataka

ETV Bharat / bharat

ಭಾರತಕ್ಕೆ ಬರುವ ವಿದೇಶಿಯರಿಗೆ ಅ.15 ರಿಂದ ಹೊಸ ಪ್ರವಾಸಿ ವೀಸಾ ನೀಡಲು ನಿರ್ಧಾರ - ಚಾರ್ಟರ್ಡ್ ವಿಮಾನ

ಕೋವಿಡ್-19 ಕಾರಣದಿಂದಾಗಿ ಸ್ಥಗಿತಗೊಳಿದ್ದ ಪ್ರವಾಸಿ ವೀಸಾವನ್ನು ಅಕ್ಟೋಬರ್ 15 ರಿಂದ ಮತ್ತೆ ನೀಡಲು ನಿರ್ಧರಿಸಿರುವುದಾಗಿ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಪ್ರವಾಸಿ ವೀಸಾ
ಪ್ರವಾಸಿ ವೀಸಾ

By

Published : Oct 8, 2021, 11:25 AM IST

ನವದೆಹಲಿ: ದೇಶದಲ್ಲಿ ಕೋವಿಡ್​ ಪ್ರಕರಣಗಳಲ್ಲಿ ಸ್ವಲ್ಪ ಇಳಿಕೆ ಕಂಡುಬಂದ ಹಿನ್ನೆಲೆಯಲ್ಲಿ ಪ್ರವಾಸೋದ್ಯಮ ಕ್ಷೇತ್ರದ ಅರ್ಥಿಕ ಅಭಿವೃದ್ಧಿಗಾಗಿ ವಿದೇಶಿ ಪ್ರವಾಸಿಗರು ಭಾರತಕ್ಕೆ ಬರಲು ಅವಕಾಶ ನೀಡಿರುವುದಾಗಿ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

ಅಕ್ಟೋಬರ್ 15 ರಿಂದ ಚಾರ್ಟರ್ಡ್ ವಿಮಾನಗಳ ಮೂಲಕ ಭಾರತಕ್ಕೆ ಬರುವ ವಿದೇಶಿಯರಿಗೆ ಹೊಸ ಪ್ರವಾಸಿ ವೀಸಾಗಳನ್ನು ನೀಡಲಾಗುವುದು ಜೊತೆಗೆ ಚಾರ್ಟರ್ಡ್ ವಿಮಾನ ಹೊರತುಪಡಿಸಿ, ಇತರೆ ವಿಮಾನಗಳಲ್ಲಿ ಆಗಮಿಸುವವರಿಗೆ ನವೆಂಬರ್ 15 ರಿಂದ ವೀಸಾ ನೀಡಲಾಗುತ್ತದೆ ಎಂದು ಸಚಿವಾಲಯ ತಿಳಿಸಿದೆ.

ಕೋವಿಡ್-19 ಕಾರಣದಿಂದಾಗಿ ಸ್ಥಗಿತಗೊಳಿಸಿದ್ದ ಪ್ರವಾಸಿ ವೀಸಾವನ್ನು ಮತ್ತೆ ನೀಡಲು ಸರ್ಕಾರ ನಿರ್ಧರಿಸಿದ್ದು, ಇದರಿಂದಾಗಿ ಅಂತಾರಾಷ್ಟ್ರೀಯ ಪ್ರವಾಸಿಗರಿಗೆ ದೇಶಿಯ ಪ್ರವಾಸಿ ತಾಣಗಳು ಹಂತ ಹಂತವಾಗಿ ಮುಕ್ತಗೊಳ್ಳಲಿದೆ. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಕಾಲಕಾಲಕ್ಕೆ ಸೂಚಿಸಿದಂತೆ ಕೋವಿಡ್ -19 ಗೆ ಸಂಬಂಧಿಸಿದ ಎಲ್ಲಾ ಮಾರ್ಗಸೂಚಿ ಮತ್ತು ನಿಯಮಾವಳಿಗಳನ್ನು ವಿದೇಶಿ ಪ್ರವಾಸಿಗರು ಹಾಗೂ ಅವರನ್ನು ಭಾರತಕ್ಕೆ ಕರೆತರುವ ವಿಮಾನ ಸಿಬ್ಬಂದಿ ಪಾಲಿಸಬೇಕಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ, ವಿದೇಶಾಂಗ ವ್ಯವಹಾರಗಳು, ನಾಗರಿಕ ವಿಮಾನಯಾನ ಸಚಿವಾಲಯ, ಪ್ರವಾಸೋದ್ಯಮ ಇಲಾಖೆ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಸಮಾಲೋಚಿಸಿ ಕೇಂದ್ರ ಈ ನಿರ್ಧಾರ ತೆಗೆದುಕೊಂಡಿದೆ.

ABOUT THE AUTHOR

...view details