ನವದೆಹಲಿ: ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ ಹೊಸದಾಗಿ 43,509 ಜನರಿಗೆ ಕೋವಿಡ್ ಪ್ರಕರಣಗಳು ದೃಢಪಟ್ಟಿದ್ದು, 4,03,840 ಕೊರೊನಾ ಕೇಸ್ಗಳು ಸಕ್ರಿಯವಾಗಿವೆ. ಈವರೆಗೆ 3,07,01,612 ಮಂದಿ ಕೊರೊನಾದಿಂದ ಗುಣಮುಖರಾಗಿದ್ದು, ಚೇತರಿಕೆ ಪ್ರಮಾಣ ಶೇಕಡಾ 97.38 ರಷ್ಟಿದೆ.
ದೇಶದಲ್ಲಿ ಹತೋಟಿಗೆ ಬಾರದ ಕೋವಿಡ್.. 24 ಗಂಟೆಗಳಲ್ಲಿ 43 ಸಾವಿರ ಜನರಿಗೆ ವೈರಸ್! - Coronavirus
ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇ ದಿನೆ ಹೆಚ್ಚುತ್ತಿದ್ದು, 3ನೇ ಅಲೆ ಶುರುವಾಯ್ತಾ ಅನ್ನೋ ಆತಂಕ ಕಾಡ್ತಿದೆ.
ಕೋವಿಡ್
ದೇಶದಲ್ಲಿ ಜುಲೈ 28 ರಂದು 17,28,795 ಜನರಿಗೆ ಕೋವಿಡ್ ತಪಾಸಣೆ ಮಾಡಲಾಗಿದ್ದು, ಈವರೆಗೆ 46,26,29,773 ಮಂದಿಗೆ ಟೆಸ್ಟ್ ಮಾಡಲಾಗಿದೆ. ಕೋವಿಡ್ ಮೂರನೇ ಅಲೆ ತಡೆಗಟ್ಟುವ ನಿಟ್ಟಿನಲ್ಲಿ ವ್ಯಾಕ್ಸಿನೇಷನ್ ಬಿರುಸಿನಿಂದ ಸಾಗುತ್ತಿದ್ದು, ಈವರೆಗೆ 45.07 ಕೋಟಿ ಜನರಿಗೆ ಲಸಿಕೆ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.