ಕರ್ನಾಟಕ

karnataka

ETV Bharat / bharat

ಒಂದೊಳ್ಳೆ ಸುದ್ದಿ! ಒಂದೇ ದಿನ 3 ಲಕ್ಷ ದಾಟಿದ ಕೊರೊನಾ ಗುಣಮುಖರ ಸಂಖ್ಯೆ - ಭಾರತ ಕೊರೊನಾ

ಮೊದಲ ಬಾರಿಗೆ ಒಂದೇ ದಿನದಲ್ಲಿ 3,07,865 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದು, ಇದುವರೆಗೆ 1,59,92,271 ಜನ ಗುಣಮುಖರಾಗಿದ್ದಾರೆ.

Corona
ಕೊರೊನಾ

By

Published : May 2, 2021, 9:36 AM IST

ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 3,92,488 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 3,689 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 1,95,57,457 ಕ್ಕೆ ಹಾಗೂ ಮೃತರ ಸಂಖ್ಯೆ 2,15,542 ಕ್ಕೆ ಏರಿಕೆಯಾಗಿದೆ.

ಇದೇ ಮೊದಲ ಬಾರಿಗೆ ಒಂದೇ ದಿನದಲ್ಲಿ 3,07,865 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದು, ಇದುವರೆಗೆ 1,59,92,271 ಜನ ಗುಣಮುಖರಾಗಿದ್ದಾರೆ. ಉಳಿದಂತೆ 33,49,644 ಕೇಸ್​​ಗಳು ಸಕ್ರಿಯವಾಗಿವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ಇನ್ನು ಈಗಾಗಲೇ 15.68.16.031 ಮಂದಿಗೆ ವಾಕ್ಸಿನೇಷನ್​ ಮಾಡಲಾಗಿದೆ ಎಂದು ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

ABOUT THE AUTHOR

...view details