ಕರ್ನಾಟಕ

karnataka

ETV Bharat / bharat

ಮತ್ತೆ ಕೋವಿಡ್​ ಏರಿಕೆ: ದೇಶದಲ್ಲಿ 39,097 ಹೊಸ ಕೊರೊನಾ ಪ್ರಕರಣ - India corona report

ದೇಶದಲ್ಲಿ ಹೊಸದಾಗಿ 39,097 ಜನರಿಗೆ ಕೊರೊನಾ ಪಾಸಿಟಿವ್​ ಬಂದಿದ್ದು, ಕಳೆದ 24 ಗಂಟೆಯಲ್ಲಿ 546 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ.

India reports 39,097 new  corona cases
ಕೋವಿಡ್​ ಏರಿಕೆ

By

Published : Jul 24, 2021, 10:37 AM IST

Updated : Jul 24, 2021, 11:08 AM IST

ನವದೆಹಲಿ:ಭಾರತದಲ್ಲಿ ಹೊಸ ಕೋವಿಡ್​ ಪ್ರಕರಣಗಳು ಮತ್ತೆ ಏರಿಕೆ ಕಂಡಿದ್ದು, ದೇಶದಲ್ಲಿ 39,097 ಮಂದಿಗೆ ಹೊಸದಾಗಿ ಕೊರೊನಾ ದೃಢಪಟ್ಟಿದೆ. ಕಳೆದ 24 ಗಂಟೆಯಲ್ಲಿ 546 ಮಂದಿ ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಭಾರತದಲ್ಲಿ ಇದುವರೆಗೆ ಒಟ್ಟು 3,13,32,159 ಕೊರೊನಾ ಪ್ರಕರಣಗಳು ದಾಖಲಾಗಿವೆ. ಈವರೆಗೆ 3,05,03,166 ಸೋಂಕಿತರು ಗುಣಮುಖರಾಗಿದ್ದಾರೆ. ದೇಶದಲ್ಲಿ ಒಟ್ಟು 4,08,977 ಸಕ್ರಿಯ ಪ್ರಕರಣಗಳಿವೆ. ಇಲ್ಲಿವರೆಗೆ 4,20,016 ಜನ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ.

ನಿನ್ನೆ ಒಂದೇ ದಿನ 16,31,266 ಮಂದಿಗೆ ಕೊರೊನಾ ಪರೀಕ್ಷೆ ನಡೆಸಲಾಗಿದೆ.ಇಲ್ಲಿವರೆಗೂ ಒಟ್ಟು 45,45,70,811 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದೆ. ದೇಶದಲ್ಲಿ ಇಲ್ಲಿಯ ತನಕ ಸುಮಾರು 42,78,82,261 ಜನರಿಗೆ ಕೊರೊನಾ ವ್ಯಾಕ್ಸಿನ್​ ನೀಡಲಾಗಿದೆ.

Last Updated : Jul 24, 2021, 11:08 AM IST

ABOUT THE AUTHOR

...view details