ನವದೆಹಲಿ:ದೇಶದಅನೇಕ ರಾಜ್ಯಗಳು ಲಸಿಕೆ, ಆಮ್ಲಜನಕದ ಕೊರತೆ ಎದುರಿಸುತ್ತಿದ್ದು, ವೈದ್ಯಕೀಯ ಕ್ಷೇತ್ರಕ್ಕೆ ಮತ್ತಷ್ಟು ಸವಾಲು ಎಂಬಂತೆ ದಾಖಲೆಯ ಸಂಖ್ಯೆಯಲ್ಲಿ ದೇಶದಲ್ಲಿ ಕೊರೊನಾ ಸಾವು-ನೋವು ವರದಿಯಾಗುತ್ತಿದೆ.
ಕಳೆದ 24 ಗಂಟೆಗಳಲ್ಲಿ 2,73,810 ಸೋಂಕಿತರು ಪತ್ತೆಯಾಗಿದ್ದು, 1,619 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.
ದೇಶದಲ್ಲೀಗ ಒಂದೂವರೆ ಕೋಟಿ ಸೋಂಕಿತರು
ಇದೀಗ ದೇಶದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 1,50,61,919 ಹಾಗೂ ಮೃತರ ಸಂಖ್ಯೆ 1,78,769ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳು ಒಂದು ಲಕ್ಷಕ್ಕೆ ಇಳಿಕೆಯಾಗಿದ್ದ ಆ್ಯಕ್ಟಿವ್ ಕೇಸ್ಗಳು ಒಂದೇ ಸಮನೆ 19,29,329ಕ್ಕೆ ಹೆಚ್ಚಳವಾಗಿದೆ.