ನವದೆಹಲಿ: ಲಸಿಕೆ ವಿತರಣೆ ನಡೆವೆಯೂ ದೇಶಾದ್ಯಂತ ಮಹಾಮಾರಿ ಕೊರೊನಾ ತನ್ನ ಕಬಂಧಬಾಹುಗಳನ್ನು ಚಾಚುತ್ತಲೇ ಇದೆ. ಶನಿವಾರ ಒಂದೇ ದಿನ 1,501 ಸೋಂಕಿತರು ಪ್ರಾಣ ಕಳೆದುಕೊಂಡಿದ್ದಾರೆ. ಹೊಸ ಕೇಸ್ಗಳ ಸಂಖ್ಯೆಯಂತೂ ಹೆಚ್ಚುತ್ತಲೇ ಇದ್ದು, ಕಳೆದ 24 ಗಂಟೆಗಳಲ್ಲಿ 2,61,500 ಸೋಂಕಿತರು ಪತ್ತೆಯಾಗಿದ್ದಾರೆ.
18 ಲಕ್ಷಕ್ಕೆ ಹೆಚ್ಚಳವಾದ ಸಕ್ರಿಯ ಪ್ರಕರಣಗಳು
ದೇಶದಲ್ಲೀಗ ಸೋಂಕಿತರ ಸಂಖ್ಯೆ 1,47,88,109ಕ್ಕೆ ಏರಿಕೆಯಾಗಿದ್ದರೆ, ಮೃತರ ಸಂಖ್ಯೆ 1,77,150ಕ್ಕೆ ಹಾಗೂ ಸಕ್ರಿಯ ಪ್ರಕರಣಗಳ ಸಂಖ್ಯೆ 18,01,316 ಲಕ್ಷಕ್ಕೆ ಹೆಚ್ಚಳವಾಗಿದೆ. ನಿನ್ನೆ ಅತಿಹೆಚ್ಚು ಅಂದರೆ 1,38,423 ಮಂದಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಇಲ್ಲಿಯವರೆಗೆ 1,28,09,643 ಸೋಂಕಿತರು ಗುಣಮುಖರಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.
12.26 ಕೋಟಿ ಮಂದಿಗೆ ಲಸಿಕೆ
ಇತ್ತ ದೇಶಾದ್ಯಂತ ಕೊರೊನಾ ವ್ಯಾಕ್ಸಿನೇಷನ್ ಅಭಿಯಾನ ಕೂಡ ನಡೆಯುತ್ತಿದ್ದು, ಜನವರಿ 16ರಿಂದ ಈವರೆಗೆ ಒಟ್ಟು 12,26,22,590 ಮಂದಿಗೆ ಲಸಿಕೆ ನೀಡಲಾಗಿದೆ. ವ್ಯಾಕ್ಸಿನ್ ಪಡೆದ ಮೇಲೂ ಕೊರೊನಾ ನಿಯಮಗಳನ್ನು ಪಾಲಿಸಿ, ಎಚ್ಚರದಿಂದಿರಿ ಎಂದು ಆರೋಗ್ಯ ಇಲಾಖೆ ಹೇಳಿದೆ.
26.65 ಕೋಟಿ ಜನರಿಗೆ ಕೋವಿಡ್ ಟೆಸ್ಟ್
ಏಪ್ರಿಲ್ 18ರ ವರೆಗೆ 26,65,38,416 ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗಿದ್ದು, ನಿನ್ನೆ ಒಂದೇ ದಿನ 15,66,394 ಸ್ಯಾಂಪಲ್ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ಮಾಹಿತಿ ನೀಡಿದೆ.