ನವದೆಹಲಿ: ಕೋವಿಡ್ ಕುರಿತಂತೆ ದಕ್ಷಿಣ ಏಷ್ಯಾ ರಾಷ್ಟ್ರಗಳ ಪ್ರಾದೇಶಿಕ ಸಹಕಾರ ಸಂಘಟನೆ(ಸಾರ್ಕ್) ಸಭೆ ಗುರುವಾರ ನಡೆಯುವ ಸಾಧ್ಯತೆಯಿದ್ದು, ಈ ಸಭೆಗೆ ಪಾಕಿಸ್ತಾನವನ್ನು ಭಾರತ ಆಹ್ವಾನಿಸಿದೆ.
ಆರೋಗ್ಯ ಕಾರ್ಯದರ್ಶಿಗಳ ಮಟ್ಟದಲ್ಲಿ ಈ ಸಾರ್ಕ್ ಸಭೆ ನಡೆಯಲಿದ್ದು, ಕೋವಿಡ್ ಅನ್ನು ನಿರ್ವಹಿಸುವ ಮತ್ತು ನಿಯಂತ್ರಿಸುವ ಬಗ್ಗ ಚರ್ಚೆ ನಡೆಯಲಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಈ ಸಭೆ ನಡೆಯಲಿದೆ.
ಈಗ ಸದ್ಯಕ್ಕೆ 8 ಸಾರ್ಕ್ ಸದಸ್ಯ ರಾಷ್ಟ್ರಗಳಿವೆ. ಭಾರತ, ಆಫ್ಘಾನಿಸ್ತಾನ, ಬಾಂಗ್ಲಾದೇಶ, ನೇಪಾಳ, ಮಾಲ್ಡೀವ್ಸ್, ಪಾಕಿಸ್ತಾನ, ಶ್ರೀಲಂಕಾ ಸದಸ್ಯ ರಾಷ್ಟ್ರಗಳಾಗಿದ್ದು, ಸಾರ್ಕ್ ಸಭೆಯಲ್ಲ ಪಾಲ್ಗೊಳ್ಳಲಿವೆ.
ಇದನ್ನೂ ಓದಿ :ಅಪ್ರಾಪ್ತೆ ಮೇಲೆ ರೇಪ್ ಪ್ರಕರಣ: ಶಿಕ್ಷಕನಿಗೆ 10 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್
2020ರ ಮಾರ್ಚ್ನಲ್ಲಿ ಪ್ರಧಾನಿ ಮೋದಿ ನೇತೃತ್ವದಲ್ಲಿ ಕೋವಿಡ್ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಾರ್ಕ್ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ಪಾಕಿಸ್ತಾನ ಹೊರತುಪಡಿಸಿ, ಉಳಿದ ದೇಶಗಳ ಮುಖ್ಯಸ್ಥರು ಆಗಮಿಸಿದ್ದರು.
ಈ ಸಭೆಯಲ್ಲಿ ಸಾರ್ಕ್ ತುರ್ತುನಿಧಿಯನ್ನು ಘೋಷಣೆ ಮಾಡಲಾಯಿತು. ಸಾರ್ಕ್ನ ಸದಸ್ಯ ರಾಷ್ಟ್ರಗಳು ಈ ನಿಧಿಗೆ ದೇಣಿಗೆ ನೀಡಿದ್ದವು. ಇದರಿಂದ ಪಾಕಿಸ್ತಾನ ಸಾರ್ಕ್ ಸದಸ್ಯ ರಾಷ್ಟ್ರಗಳಿಂದ ಬೇರ್ಪಟ್ಟ ಸ್ಥಿತಿಯನ್ನು ನಿರ್ಮಾಣ ಮಾಡಲಾಯಿತು.
ಕಾಶ್ಮೀರ ವಿಚಾರದ ವಿವಾದ ಸೃಷ್ಟಿಸಿದ ಹಿನ್ನೆಲೆಯಲ್ಲಿ ಭಾರತವೂ ಪಾಕ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಮತ್ತು ಚೀನಾದೊಂದಿಗಿನ ಸಂಬಂಧ ಹಾಗೂ ಗಡಿ ತಕರಾರಿನ ಕಾರಣದಿಂದ ಪಾಕ್ ನಡುವೆ ವೈಮನಸ್ಯ ಮುಂದುವರೆದಿದೆ. ಆದರೂ ಕೂಡಾ ಭಾರತ ಈ ಬಾರಿಯ ಸಾರ್ಕ್ ಸಭೆಗೆ ಪಾಕ್ ಅನ್ನು ಆಹ್ವಾನಿಸಿದೆ.