ನವದೆಹಲಿ:ಭಾರತದಲ್ಲಿ ಕಳೆದ 24 ಗಂಟೆಯಲ್ಲಿ ಹೊಸದಾಗಿ 1,96,427 ಮಂದಿಗೆ ಕೋವಿಡ್ ದೃಢಪಟ್ಟು. 3,26,850 ಮಂದಿ ಗುಣಮುಖರಾಗುವ ಮೂಲಕ ಕೋವಿಡ್ ಪಾಸಿಟಿವಿಟಿ ರೇಟ್ ಶೇ.9.54ಕ್ಕೆ ಇಳಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.
ಮೇ 10ರಂದು ದೇಶದಲ್ಲಿ ಕೊರೊನಾ ಸಕ್ರಿಯ ಪ್ರಕರಣಗಳ ಸಂಖ್ಯೆ ಇಳಿಕೆಯಾಗಿದ್ದು, ಕಳೆದ 24 ಗಂಟೆಯಲ್ಲಿ 1,33,934ಕ್ಕೆ ಇಳಿಕೆ ಕಂಡಿದೆ. ಈಗ ದೇಶದಲ್ಲಿ ಶೇ 9.60ರಷ್ಟು ಪಾಸಿಟಿವ್ ಕೇಸ್ಗಳಿವೆ ಎಂದು ಸಚಿವಾಲಯ ತಿಳಿಸಿದೆ.
ದೇಶಾದ್ಯಂತ ಹೊಸ ಪ್ರಕರಣಗಳಿಗಿಂತ ಗುಣಮುಖರಾಗುತ್ತಿರುವ ಸೋಂಕಿತರ ಸಂಖ್ಯೆ ಸತತ 12ನೇ ದಿನವೂ ಏರಿಕೆಯಾಗುತ್ತಿದೆ. ಈ ಮೂಲಕ ರಾಷ್ಟ್ರದಲ್ಲಿ ಸೋಂಕಿತರ ಚೇತರಿಕೆ ಪ್ರಮಾಣವು 89.26ಕ್ಕೆ ಏರಿಕೆಯಾಗಿ ಸುಧಾರಣೆ ಹಾದಿ ಹಿಡಿದಿದೆ.
ದೇಶದಲ್ಲಿ ಕಳೆದ 24 ಗಂಟೆಯಲ್ಲಿ ಒಟ್ಟು 20,58,112 ಮಂದಿಗೆ ಪರೀಕ್ಷೆ ನಡೆಸಲಾಗಿದ್ದು, ಒಟ್ಟು 33,25,94,176 ಪರೀಕ್ಷೆಗಳನ್ನು ಈವರೆಗೆ ಮಾಡಲಾಗಿದೆ. ಅಲ್ಲದೆ ಈವರೆಗೆ 19,85,38,999 ಮಂದಿಗೆ ಲಸಿಕೆ ನೀಡಲಾಗಿದೆ. ಇದರಲ್ಲಿ 97,79,304 ವೈದ್ಯಕೀಯ ಸಿಬ್ಬಂದಿ ಮೊದಲ ಡೋಸ್ ಪಡೆದಿದ್ದರೆ, 67,15,723 ಮಂದಿ ವೈದ್ಯಕೀಯ ಸಿಬ್ಬಂದಿ ಎರಡನೇ ಡೋಸ್ ಪಡೆದವರಾಗಿದ್ದಾರೆ ಎಂದು ಇಲಾಖೆ ತಿಳಿಸಿದೆ.
ಓದಿ:ಚಿತಾಗಾರದ ಬೆಲೆ ಏರಿಕೆಗೆ ಬ್ರೇಕ್.. 1 ರೂಪಾಯಿಗೆ ಸಂಪ್ರದಾಯ ಬದ್ಧ ಶವಸಂಸ್ಕಾರ