ಕರ್ನಾಟಕ

karnataka

ಭಾರತ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿರುವುದು ಅಸಾಮಾನ್ಯ ಸಾಧನೆ: ಪ್ರಧಾನಿ ಮೋದಿ ಬಣ್ಣನೆ

By

Published : Sep 8, 2022, 2:39 PM IST

ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಸಾಧನೆ ಮಾಡಿದೆ. ಸಾಧನೆಯು ಈ ಅಮೃತ ಕಾಲದಲ್ಲಿ ಇನ್ನಷ್ಟು ಶ್ರಮಿಸಲು ಮತ್ತು ದೊಡ್ಡ ಗುರಿಗಳನ್ನು ಸಾಧಿಸಲು ನಮಗೆ ಆತ್ಮವಿಶ್ವಾಸ ನೀಡಿದೆ ಎಂದು ಪ್ರಧಾನಿ ಹೇಳಿದರು.

ಭಾರತ 5ನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿರುವುದು ಅಸಾಮಾನ್ಯ ಸಾಧನೆ
India becoming worlds 5th largest economy

ಸೂರತ್: ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಬೆಳೆದಿರುವುದು ಸಾಮಾನ್ಯ ಸಾಧನೆಯಲ್ಲ. ನಾವು ಈ ಉತ್ಸಾಹವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಗುರುವಾರ ಹೇಳಿದ್ದಾರೆ. ಗುಜರಾತ್‌ನ ಸೂರತ್ ನಗರದ ಓಲ್ಪಾಡ್ ಪ್ರದೇಶದಲ್ಲಿ ಆಯೋಜಿಸಲಾದ ವೈದ್ಯಕೀಯ ಶಿಬಿರದಲ್ಲಿ ವಿವಿಧ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಉದ್ದೇಶಿಸಿ ಅವರು ಮಾತನಾಡಿದರು.

ಇತ್ತೀಚೆಗೆ ಭಾರತವು ವಿಶ್ವದ ಐದನೇ ಅತಿದೊಡ್ಡ ಆರ್ಥಿಕತೆಯಾಗಿ ಸಾಧನೆ ಮಾಡಿದೆ. ಸಾಧನೆಯು ಈ ಅಮೃತ ಕಾಲದಲ್ಲಿ ಇನ್ನಷ್ಟು ಶ್ರಮಿಸಲು ಮತ್ತು ದೊಡ್ಡ ಗುರಿಗಳನ್ನು ಸಾಧಿಸಲು ನಮಗೆ ಆತ್ಮವಿಶ್ವಾಸವನ್ನು ನೀಡಿದೆ. ಈ ಪ್ರಗತಿ ಸಾಮಾನ್ಯವಲ್ಲ. ಪ್ರತಿಯೊಬ್ಬ ಭಾರತೀಯನು ಇದರ ಬಗ್ಗೆ ಹೆಮ್ಮೆಪಡುತ್ತಾನೆ. ನಾವು ಈ ಉತ್ಸಾಹವನ್ನು ಉಳಿಸಿಕೊಳ್ಳಬೇಕಾಗಿದೆ ಎಂದು ಪ್ರಧಾನಿ ಹೇಳಿದರು.

ಕೇಂದ್ರದ ಪ್ರಧಾನ ಮಂತ್ರಿ ಆವಾಸ್ ಯೋಜನೆ ಉಲ್ಲೇಖಿಸಿದ ಮೋದಿ, ಕಳೆದ ಎಂಟು ವರ್ಷಗಳಲ್ಲಿ ಬಡವರಿಗಾಗಿ ದೇಶಾದ್ಯಂತ ಸರ್ಕಾರವು ಮೂರು ಕೋಟಿ ಮನೆಗಳನ್ನು ನಿರ್ಮಿಸಿದೆ. ಇವುಗಳಲ್ಲಿ ಸುಮಾರು 10 ಲಕ್ಷ ಮನೆಗಳನ್ನು ಗುಜರಾತ್ ಒಂದರಲ್ಲೇ ನಿರ್ಮಿಸಲಾಗಿದೆ ಎಂದರು.

ಇದನ್ನೂ ಓದಿ: 2025ರ ವೇಳೆಗೆ ಭಾರತದ ಡಿಜಿಟಲ್‌ ಆರ್ಥಿಕತೆ ಮೌಲ್ಯ $1 ಟ್ರಿಲಿಯನ್‌ ತಲುಪಲಿದೆ: ಪ್ರಧಾನಿ ಮೋದಿ

ABOUT THE AUTHOR

...view details