ಕರ್ನಾಟಕ

karnataka

ETV Bharat / bharat

ಸಂಸತ್ತಿನಿಂದ 141 ಸಂಸದರ ಅಮಾನತು: ದೇಶಾದ್ಯಂತ 'ಇಂಡಿಯಾ' ಮೈತ್ರಿಕೂಟದ ಪ್ರತಿಭಟನೆ - ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ

INDIA alliance to hold nationwide protest on Dec 22: 2024ರ ಲೋಕಸಭಾ ಚುನಾವಣೆಗೆ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟ ಸಜ್ಜಾಗುತ್ತಿದೆ. ಇಂದು ದೆಹಲಿಯ ನಡೆದ ಒಕ್ಕೂಟದ ನಾಲ್ಕನೇ ಸಭೆ ನಡೆದಿದೆ. ಲೋಕಸಭೆ ಮತ್ತು ರಾಜ್ಯಸಭೆಯಿಂದ ಒಟ್ಟು 141 ಸಂಸದರನ್ನು ಅಮಾನತು ಖಂಡಿಸುವ ನಿರ್ಣಯ ಅಂಗೀಕರಿಸಿವೆ.

india-alliance-to-hold-nationwide-protest-against-suspension-of-mps
ಸಂಸತ್ತಿನಿಂದ 141 ಸಂಸದರ ಅಮಾನತು: ದೇಶಾದ್ಯಂತ 'ಇಂಡಿಯಾ' ಮೈತ್ರಿಕೂಟದ ಪ್ರತಿಭಟನೆ

By ETV Bharat Karnataka Team

Published : Dec 19, 2023, 9:49 PM IST

ನವದೆಹಲಿ: ಸಂಸತ್ತಿನ ಚಳಿಗಾಲದ ಅಧಿವೇಶನದಿಂದ 141 ಸಂಸದರನ್ನು ಅಮಾನತುಗೊಳಿಸಿರುವುದನ್ನು ವಿರೋಧಿಸಿ ಪ್ರತಿಪಕ್ಷಗಳ 'ಇಂಡಿಯಾ' ಮೈತ್ರಿಕೂಟವು ಡಿಸೆಂಬರ್ 22ರಂದು ದೇಶಾದ್ಯಂತ ಜಂಟಿ ಪ್ರತಿಭಟನೆ ನಡೆಸಲಿದೆ. ಈ ಮೂಲಕ ಆಡಳಿತಾರೂಢ ಬಿಜೆಪಿ ವಿರುದ್ಧ ಶಕ್ತಿ ಪ್ರದರ್ಶನದ ಸಲುವಾಗಿ ಈ ಹೋರಾಟಕ್ಕೆ ಮುಂದಾಗಿದೆ.

ಸಂಸತ್​ ಭವನದಲ್ಲಿ ಡಿಸೆಂಬರ್ 13ರಂದು ಉಂಟಾದ ಭದ್ರತಾ ಲೋಪದ ಬಗ್ಗೆ ಉಭಯ ಸದನಗಳ ಒಳಗೆ ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮಿತ್ ಶಾ ಹೇಳಿಕೆ ನೀಡಬೇಕು ಎಂದು ಪ್ರತಿಪಕ್ಷಗಳ ನಾಯಕರು ಒತ್ತಾಯಿಸಿ ಪ್ರತಿಭಟನೆ ಕೈಗೊಂಡಿದ್ದರು. ಆದ್ದರಿಂದ 'ಇಂಡಿಯಾ'ದ ವಿವಿಧ ಪಕ್ಷಗಳ ಸದಸ್ಯರನ್ನು ಲೋಕಸಭೆ ಹಾಗೂ ರಾಜ್ಯಸಭೆ ಸೇರಿ ಉಭಯ ಸದನಗಳಿಂದ ಸಂಸದರನ್ನು ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಅಮಾನತುಗೊಳಿಸಲಾಗಿದೆ.

ಮೊದಲ ಬಾರಿಗೆ ಡಿಸೆಂಬರ್ 14ರಂದು ಲೋಕಸಭೆಯ 13 ಸಂಸದರು ಮತ್ತು ರಾಜ್ಯಸಭೆಯ ಒಬ್ಬರು ಸೇರಿ 14 ಸದಸ್ಯರನ್ನು ಅಮಾನತು ಮಾಡಲಾಗಿತ್ತು. ಡಿ.18ರಂದು (ಸೋಮವಾರ) ಲೋಕಸಭೆಯಿಂದ 33, ರಾಜ್ಯಸಭೆಯಿಂದ 45 ಸಂಸದರು ಹಾಗೂ ಡಿ.19ರಂದು (ಮಂಗಳವಾರ) ಲೋಕಸಭೆಯ 49 ಸಂಸದರನ್ನು ದುರ್ನಡತೆ ಆರೋಪದ ಮೇಲೆ ಚಳಿಗಾಲದ ಅಧಿವೇಶನ ಮುಗಿಯವರೆಗೆ ಅಮಾನತಿನಲ್ಲಿ ಇರಿಸಲಾಗಿದೆ.

ಇದನ್ನೂ ಓದಿ:'ಇಂಡಿಯಾ' ಮೈತ್ರಿಕೂಟದ ಪ್ರಧಾನಿ ಅಭ್ಯರ್ಥಿಯಾಗಿ ಖರ್ಗೆ ಹೆಸರು ಪ್ರಸ್ತಾಪಿಸಿದ ಮಮತಾ, ಕೇಜ್ರಿವಾಲ್

ದೆಹಲಿಯಲ್ಲಿ ಇಂದು 'ಇಂಡಿಯಾ' ಮೈತ್ರಿಕೂಟದ ನಾಲ್ಕನೇ ಸಭೆ ನಡೆದಿದೆ. ಸುಮಾರು 28 ಪಕ್ಷಗಳು ಸೇರಿಸಿಕೊಂಡು 2024ರ ಲೋಕಸಭೆ ಚುನಾವಣೆಯ ಕಾರ್ಯತಂತ್ರವನ್ನು ಸುಮಾರು ಮೂರು ಗಂಟೆಗಳ ಕಾಲ ಚರ್ಚಿಸಿವೆ. ಬಿಜೆಪಿಯನ್ನು ಸಾಮೂಹಿಕವಾಗಿ ಎದುರಿಸುವ ನಿಟ್ಟಿನಲ್ಲಿ ಸರ್ವಾನುಮತದ ನಿರ್ಧಾರವನ್ನು ತೆಗೆದುಕೊಂಡಿವೆ. ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸಂಸದರ ಅಮಾನತುಗೊಳಿಸಿರುವುದು ಪ್ರಜಾಸತ್ತಾತ್ಮಕ ನಡೆಯಲ್ಲ ಎಂದು ಹೇಳಿದ್ದಾರೆ

''ನಮ್ಮ ಮೈತ್ರಿಕೂಟವನ್ನು ಮುಂದಕ್ಕೆ ಕೊಂಡೊಯ್ಯಬೇಕು ಎಂದು ಎಲ್ಲ ಪಕ್ಷಗಳು ಒಮ್ಮತದಿಂದ ಹೇಳಿವೆ. 141 ಸಂಸದರನ್ನು ಅಮಾನತುಗೊಳಿಸಿರುವುದನ್ನು 'ಇಂಡಿಯಾ' ಒಕ್ಕೂಟ ಖಂಡಿಸುವ ನಿರ್ಣಯ ಅಂಗೀಕರಿಸಿದೆ. ದೇಶದಲ್ಲಿ ಪ್ರಜಾಪ್ರಭುತ್ವ ಉಳಿಸಲು ನಾವು ಒಟ್ಟಾಗಿ ಹೋರಾಡಬೇಕಾಗಿದೆ. ಪ್ರಧಾನಿ ಅಥವಾ ಗೃಹ ಸಚಿವರ ಹೇಳಿಕೆಗೆ ಪ್ರತಿಪಕ್ಷಗಳು ಪಟ್ಟು ಹಿಡಿದಿರುವ ಬೇಡಿಕೆ ಸರಿ ಇದೆ'' ರಾಜ್ಯಸಭಾ ವಿರೋಧ ಪಕ್ಷದ ನಾಯಕರಾದ ತಿಳಿಸಿದ್ದಾರೆ.

''ಪ್ರಧಾನಿ ಅವರು ಸಂಸತ್ತಿನ ಅಧಿವೇಶನ ನಡೆಯುತ್ತಿರುವಾಗ ಕಟ್ಟಡಗಳ ಉದ್ಘಾಟಿಸುತ್ತಾರೆ. ತಮ್ಮ ಸಂಸದೀಯ ಕ್ಷೇತ್ರಕ್ಕೆ (ವಾರಾಣಸಿ) ಭೇಟಿ ನೀಡುತ್ತಾರೆ. ಆದರೆ, ಉಭಯ ಸದನಗಳ ಒಳಗೆ ಸಂಸತ್ತಿನ ಭದ್ರತಾ ಲೋಪದ ಬಗ್ಗೆ ಹೇಳಿಕೆ ನೀಡುವುದಿಲ್ಲ. ಪ್ರತಿಪಕ್ಷಗಳು ಬೇಡಿಕೆ ಮುಂದಿಟ್ಟಾಗ ಅವರನ್ನು ಅಮಾನತು ಮಾಡಲಾಗುತ್ತದೆ. ಇದರ ವಿರುದ್ಧ ಒಟ್ಟಾಗಿ ಹೋರಾಡುತ್ತೇವೆ. ಪ್ರಧಾನಿ ಮತ್ತು ಗೃಹ ಸಚಿವರು ತಾವು ಮಾತ್ರ ಆಡಳಿತಕ್ಕೆ ಅರ್ಹರು ಎಂದು ಭಾವಿಸುತ್ತಾರೆ. ಅವರದ್ದು ತಪ್ಪು ಎಂಬುದನ್ನು ತೋರಿಸುತ್ತೇವೆ'' ಎಂದು ಖರ್ಗೆ ಗುಡುಗಿದ್ದಾರೆ.

ಶೀಘ್ರವೇ ಸೀಟು ಹಂಚಿಕೆ ಪೂರ್ಣ:ಇದೇ ವೇಳೆ, 'ಇಂಡಿಯಾ' ಮೈತ್ರಿಕೂಟವು 2024ರ ಲೋಕಸಭೆ ಚುನಾವಣೆಗೆ ಸೀಟು ಹಂಚಿಕೆ ಪ್ರತಿಕ್ರಿಯೆಯನ್ನೂ ಶೀಘ್ರವಾಗಿ ಪೂರ್ಣಗೊಳಿಸಲು ನಿರ್ಧರಿಸಿದೆ. ಇದರ ಕಸರತ್ತು ಎರಡು ಹಂತಗಳಲ್ಲಿ ಕಸರತ್ತು ನಡೆಸಲಿದೆ. ಮೊದಲು ಸೀಟು ಹಂಚಿಕೆ ಕುರಿತು ರಾಜ್ಯ ಮಟ್ಟದಲ್ಲಿ ಚರ್ಚಿಸಲಾಗುತ್ತದೆ. ನಂತರ ಯಾವುದೇ ಸಮಸ್ಯೆಗಳಿದ್ದರೆ, ಅವುಗಳನ್ನು ಒಕ್ಕೂಟದ ಮಟ್ಟದಲ್ಲಿ ಪರಿಹರಿಸಲಾಗುವುದು ಎಂದೂ ಕಾಂಗ್ರೆಸ್​ ಅಧ್ಯಕ್ಷ ಖರ್ಗೆ ಮಾಹಿತಿ ನೀಡಿದ್ದಾರೆ.

ಸಮಾಜವಾದಿ, ಆಮ್​ ಆದ್ಮಿ ಪಕ್ಷದಂತಹ ಮಿತ್ರಪಕ್ಷಗಳೊಂದಿಗೆ ಸೀಟು ಹಂಚಿಕೆ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುತ್ತದೆ ಎಂದು ಖರ್ಗೆ ತಿಳಿಸಿದ್ದು, ಉತ್ತರ ಪ್ರದೇಶ, ಪಂಜಾಬ್, ದೆಹಲಿ ಮತ್ತು ಗುಜರಾತ್‌ನಲ್ಲಿ ಏನೇ ಸಮಸ್ಯೆಗಳಿದ್ದರೂ ಬಗೆಹರಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಜೊತೆಗೆ, ಪ್ರತಿಪಕ್ಷಗಳ ಸಂದೇಶವನ್ನು ಪ್ರಚಾರ ಮತ್ತು ಜನರ ಸಮಸ್ಯೆಗಳನ್ನು ಮುಂದಿಟ್ಟುಕೊಂಡು ದೇಶಾದ್ಯಂತ ಸುಮಾರು 8 ರಿಂದ 10 ಸಮಾವೇಶಗಳನ್ನು ನಡೆಸಲಾಗುವುದು. 2024ರ ಲೋಕಸಭೆ ಚುನಾವಣೆಯಲ್ಲಿ ನಾವು ಹೋರಾಡುತ್ತೇವೆ ಮತ್ತು ಗೆಲ್ಲುತ್ತೇವೆ. ಬಹುಮತ ಪಡೆಯುವುದು 'ಇಂಡಿಯಾ' ಮೈತ್ರಿಕೂಟದ ಆದ್ಯತೆಯೇ ಹೊರತು, ಪ್ರಧಾನಿ ಅಭ್ಯರ್ಥಿ ಯಾರು ಎಂಬುದು ಅಲ್ಲ ಎಂದು ಕಾಂಗ್ರೆಸ್ ಅಧ್ಯಕ್ಷ ಪ್ರತಿಪಾದಿಸಿದ್ದಾರೆ.

ಇದನ್ನೂ ಓದಿ:I.N.D.I.A ಸೀಟು ಹಂಚಿಕೆ; ಇಬ್ಬರು ಮಾಜಿ ಸಿಎಂಗಳಿಗೆ ಮಹತ್ವದ ಜವಾಬ್ದಾರಿ ವಹಿಸಿದ ಕಾಂಗ್ರೆಸ್

ABOUT THE AUTHOR

...view details