ಹೈದರಾಬಾದ್: ರಾಹುಲ್ ಗಾಂಧಿಯವರು 'ಅದಾನಿ' ಎಂಬ ಹೆಸರಿನ ಸ್ಪೆಲಿಂಗ್ ಹೈಲೈಟ್ ಮಾಡಿ ಕಾಂಗ್ರೆಸ್‌ನ ಐವರು ಮಾಜಿ ನಾಯಕ ಗುಲಾಂ ನಬಿ ಆಜಾದ್, ಕೇಂದ್ರ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಮಾಜಿ ಸಿಎಂ ಕಿರಣ್ ಕುಮಾರ್ ರೆಡ್ಡಿ, ಸಿಎಂ ಹಿಮಂತ ಬಿಸ್ವಾ ಶರ್ಮಾ ಮತ್ತು ಅನಿಲ್ ಆಂಟನಿ ಅವರ ಹೆಸರನ್ನು ಸೃಜನಾತ್ಮಕವಾಗಿ ಉಲ್ಲೇಖಿ ಮಾಡಿದ ಗ್ರಾಫಿಕ್ ಅನ್ನು ಹಂಚಿಕೊಂಡಿದ್ದರು. ಜೊತೆಗೆ, ಗೌತಮ್ ಅದಾನಿ ಅವರ ಶೆಲ್ ಕಂಪನಿಗಳಲ್ಲಿರುವ 20 ಸಾವಿರ ಕೋಟಿ ರೂ. ಯಾರದ್ದು? ಎಂದು ಮತ್ತೊಮ್ಮೆ ಪ್ರಶ್ನಿಸಿ, ಸತ್ಯವನ್ನು ಮರೆಮಾಚಬೇಕು, ಅದಕ್ಕಾಗಿಯೇ ಅವರು ಪ್ರತಿದಿನ ದಾರಿ ತಪ್ಪಿಸುತ್ತಿರುತ್ತಾರೆ ಎಂದು ರಾಹುಲ್ ಟ್ವೀಟ್ ದಾಳಿ ನಡೆಸಿದ್ದಾರೆ.
ಇದೀಗ ರಾಹುಲ್ ಗಾಂಧಿ ಟ್ವೀಟ್ಗೆ ಬಿಜೆಪಿಗೆ ಸೇರಿದ ಮಾಜಿ ಕಾಂಗ್ರೆಸ್ ನಾಯಕರಾದ ಅನಿಲ್ ಕೆ ಆಂಟನಿ ಮತ್ತು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಶನಿವಾರ ಮಾಜಿ ಕಾಂಗ್ರೆಸ್ ಅಧ್ಯಕ್ಷರಿಗೆ ತಿರುಗೇಟು ನೀಡಿದ್ದಾರೆ. "ರಾಷ್ಟ್ರೀಯ ಪಕ್ಷವೊಂದರ ಮಾಜಿ ಅಧ್ಯಕ್ಷ ಮತ್ತು ಕಾಂಗ್ರೆಸ್ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದು ಕರೆಯಲ್ಪಡುವ ರಾಹುಲ್ ಗಾಂಧಿ ಅವರು ರಾಷ್ಟ್ರೀಯ ನಾಯಕನಂತೆ ನಡೆದುಕೊಳ್ಳುತ್ತಿಲ್ಲ. ಬದಲಾಗಿ ಆನ್‌ಲೈನ್ ಅಥವಾ ಸಾಮಾಜಿಕ ಮಾಧ್ಯಮಗಳ ಸೆಲ್ ಟ್ರೋಲ್‌ನಂತೆ ಮಾತನಾಡುವುದನ್ನು ನೋಡಿ ದುಃಖಕರವಾಗಿದೆ. ದೇಶ ಕಟ್ಟುವ ಕೆಲಸಕ್ಕಾಗಿ ದಶಕಗಳಿಂದ ಕೊಡುಗೆ ನೀಡಿದ ಈ ದಿಗ್ಗಜರ ಜೊತೆ ನನ್ನ ಹೆಸರು ಕೂಡ ಇರುವುದನ್ನು ನೋಡಿ ಸಂತಸವಾಯ್ತು. ನಾನು ಕುಟುಂಬದ ಬದಲು ದೇಶದ ಜನರಿಗಾಗಿ ಕೆಲಸ ಮಾಡಲು ಆದ್ಯತೆ ನೀಡಿದ್ದರಿಂದ ಕಾಂಗ್ರೆಸ್ ಪಕ್ಷ ತೊರೆಯಬೇಕಾಯಿತು" ಎಂದು ಅನಿಲ್ ಆಂಟನಿ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ :ನನ್ನ ನಾಯಕರ ಮೇಲಿನ ಬದ್ಧತೆ ಒಂದಿಂಚೂ ಸಹ ಕದಲುವುದಿಲ್ಲ: ನವಜೋತ್ ಸಿಂಗ್ ಸಿಧು