ಕರ್ನಾಟಕ

karnataka

ಕೊರೊನಿಲ್ ಪ್ರಚಾರ​: ಕೇಂದ್ರ ಆರೋಗ್ಯ ಸಚಿವರ ವಿರುದ್ಧವೇ ತಿರುಗಿಬಿದ್ದ ಐಎಂಎ

By

Published : Feb 24, 2021, 6:49 AM IST

ಸಚಿವ ಹರ್ಷವರ್ಧನ್​ ಅವರು ಪತಂಜಲಿಯ ಕೊರೊನಿಲ್ ಟ್ಯಾಬ್ಲೆಟ್ ಅನ್ನು ಅನುಮೋದಿಸಿದ್ದಕ್ಕಾಗಿ ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಘಟಕವು ಸಚಿವರ ವಿರುದ್ಧ ತಿರುಗಿಬಿದ್ದಿದೆ.

Harsh Vardhan
ಸಚಿವ ಹರ್ಷವರ್ಧನ್​

ನವದೆಹಲಿ: ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್​ ಅವರು ಪತಂಜಲಿಯ ಕೊರೊನಿಲ್ ಟ್ಯಾಬ್ಲೆಟ್ ಅನ್ನು ಅನುಮೋದಿಸಿದ್ದಕ್ಕಾಗಿ ತೀವ್ರ ಟೀಕೆಗೆ ಗುರಿಯಾಗಿದ್ದಲ್ಲದೆ, ಭಾರತೀಯ ವೈದ್ಯಕೀಯ ಸಂಘದ (ಐಎಂಎ) ರಾಜ್ಯ ಘಟಕವು ಸಚಿವರ ವಿರುದ್ಧ ಗರಂ ಆಗಿದೆ.

ಸಚಿವ ಹರ್ಷವರ್ಧನ್​ ಸಮ್ಮುಖದಲ್ಲಿ ಕೋವಿಡ್-19ಕ್ಕೆ ಸಿದ್ಧಪಡಿಸಿದ ಮೊದಲ ಪುರಾವೆ ಆಧಾರಿತ ಔಷಧಿ ಕೊರೊನಿಲ್ ಎಂದು ಪತಂಜಲಿಯ ಮುಖ್ಯಸ್ಥ ಯೋಗಗುರು ರಾಮ್​​ದೇವ್​ ಹೇಳಿಕೊಂಡಿದ್ದರು. ಈ ಮಾತು ಇದೀಗ ಭಾರತೀಯ ವೈದ್ಯಕೀಯ ಸಂಸ್ಥೆಯ ಟೀಕೆಗೆ ಗುರಿಯಾಗಿದೆ. ಆರೋಗ್ಯ ಸಚಿವರು ಕಟ್ಟುಕಥೆಯನ್ನು ಹೇಗೆ ಉತ್ತೇಜಿಸುತ್ತಾರೆ ಎಂದು ಐಎಂಎ ಪ್ರಶ್ನಿಸಿದೆ.

ಇದನ್ನು ಓದಿ: 'ನ್ಯುಮೋಸಿಲ್' ಲಸಿಕೆ ಬಿಡುಗಡೆಗೊಳಿದ ಸಚಿವ ಡಾ.ಹರ್ಷವರ್ಧನ್

ಐಎಂಎಯ ರಾಜ್ಯ ಶಾಖೆಯಾದ ದೆಹಲಿ ಮೆಡಿಕಲ್ ಅಸೋಸಿಯೇಷನ್ ​​(ಡಿಎಂಎ) ತನ್ನ ರಾಷ್ಟ್ರೀಯ ಕಾರ್ಯನಿರ್ವಾಹಕ ಸಂಸ್ಥೆಯು ಹರ್ಷವರ್ಧನ್ ಅವರು ಸುಳ್ಳು ಸುದ್ದಿ ಮತ್ತು ಅಗ್ಗದ ಪ್ರಚಾರವನ್ನು ಮಾಡಿದ್ದಾರೆ ಎಂದು ಆರೋಪಿಸಿದೆ.

"ದೇಶದ ಆರೋಗ್ಯ ಸಚಿವರು ಮತ್ತು ಆಧುನಿಕ ವೈದ್ಯರಾಗಿರುವುದರಿಂದ, ದೇಶದ ಮುಂದೆ ಅವೈಜ್ಞಾನಿಕ ಉತ್ಪನ್ನವನ್ನು ಉತ್ತೇಜಿಸುವುದು ಎಷ್ಟು ಸರಿ? ಸುಳ್ಳು, ಕಟ್ಟುಕಥೆ ಮತ್ತು ಅವೈಜ್ಞಾನಿಕ ಉತ್ಪನ್ನವನ್ನು ಬಿಡುಗಡೆ ಮಾಡುವುದು ಎಷ್ಟು ಸಮರ್ಥನೆ? ಕೊರೊನಿಲ್ ತುಂಬಾ ಪರಿಣಾಮಕಾರಿಯಾಗಿದ್ದರೆ, ಕೊರೊನಾ ವ್ಯಾಕ್ಸಿನೇಷನ್ ಮೇಲೆ ಕೇಂದ್ರ ಸರ್ಕಾರ ಏಕೆ ರೂ. 35,000 ಕೋಟಿ ಖರ್ಚು ಮಾಡಿದೆ? " ಎಂದು ಐಎಂಎ ಪತ್ರದಲ್ಲಿ ಸಚಿವ ಹರ್ಷವರ್ಧನ್ ಅವರನ್ನು ಪ್ರಶ್ನಿಸಿದೆ.

ABOUT THE AUTHOR

...view details