ಮುಂಬೈ (ಮಹಾರಾಷ್ಟ್ರ):ಮುಂಬೈ ಸಂಚಾರ ಪೊಲೀಸ್ ನಿಯಂತ್ರಣ ಕೊಠಡಿಗೆ ಗುರುವಾರ ಕರೆ ಮಾಡಿದ ಅಪರಿಚಿತ ವ್ಯಕ್ತಿಯೊಬ್ಬರು, 26/11 ರೀತಿಯ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮುಂಬೈ ಪೊಲೀಸರ ಪ್ರಕಾರ, ಮುಂಬೈ ಪೊಲೀಸ್ ಕಂಟ್ರೋಲ್ ರೂಂಗೆ ನಿನ್ನೆ ಬೆದರಿಕೆ ಕರೆ ಬಂದಿದೆ. ಅದರಲ್ಲಿ ಕರೆ ಮಾಡಿದವರು ಪಾಕಿಸ್ತಾನಿ ಪ್ರಜೆ ಸೀಮಾ ಹೈದರ್ ಪಾಕಿಸ್ತಾನಕ್ಕೆ ಹಿಂತಿರುಗದಿದ್ದರೆ, 26/11 ಭಯೋತ್ಪಾದಕ ದಾಳಿಗೆ ಸಿದ್ಧರಾಗುವುದಾಗಿ ಪೊಲೀಸರಿಗೆ ಬೆದರಿಕೆ ಹಾಕಿದ್ದಾರೆ. ಮುಂಬೈ ಪೊಲೀಸರು ಮತ್ತು ಕ್ರೈಂ ಬ್ರಾಂಚ್ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು.
ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿದ ಸೀಮಾ ಹೈದರ್:ಈ ತಿಂಗಳ ಆರಂಭದಲ್ಲಿ ನೋಯ್ಡಾ ಪೊಲೀಸರು ಸೀಮಾ ಅವರನ್ನು ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ಗ್ರೇಟರ್ ನೋಯ್ಡಾದಲ್ಲಿ ತಂಗಿದ್ದಕ್ಕಾಗಿ ಬಂಧಿಸಿದ್ದರು. ಈ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ನಂತರ ಆಕೆಗೆ ಕೋರ್ಟ್ ಜಾಮೀನು ಮಂಜೂರು ಮಾಡಿದ ನಂತರ ಆಕೆ, ಹಿಂದೂ ಧರ್ಮಕ್ಕೆ ಮತಾಂತರಗೊಂಡಳು. ಜೊತೆಗೆ ತನ್ನ ಉಪನಾಮವನ್ನೂ ಕೈಬಿಟ್ಟಳು.
ಸೀಮಾ ಹೈದರ್ ಪಾಕಿಸ್ತಾನಿ ಪ್ರಜೆಯಾಗಿದ್ದು, ತನ್ನ ನಾಲ್ಕು ಮಕ್ಕಳೊಂದಿಗೆ ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸಿ ತನ್ನ ಸಂಗಾತಿಯೊಂದಿಗೆ ಇರಲು ಬಂದಿದ್ದಾರೆ. ಆಕೆಯ ಪ್ರಿಯಕರ ಸಚಿನ್‌ನನ್ನು ಭೇಟಿಯಾಗುವ ಮೊದಲೇ ಮದುವೆಯಾಗಿದ್ದ ಸೀಮಾ, ತನ್ನ ಮಾಜಿ ಪತಿಗೆ ಇನ್ನು ಮುಂದೆ ತನ್ನ ಅಗತ್ಯವಿಲ್ಲ ಎಂದು ಹೇಳಿದರು. ಆತನಿಗೆ ಈ ಮೊದಲು ನನ್ನ ಅಗತ್ಯವಿರಲಿಲ್ಲ. ಈಗ ಅವರ ಅಗತ್ಯವೂ ನನಗೆ ಇಲ್ಲ ಎಂದು ಭಾರತಕ್ಕೆ ಬಂದ ಸೀಮಾ ಹೇಳಿದರು.
"ನಾನು ನೇಪಾಳದ ಮೂಲಕ ಇಲ್ಲಿಗೆ ಬಂದಿದ್ದೇನೆ. ನಾನು ಭಾರತದಲ್ಲಿ ಉಳಿಯಲು ವೀಸಾಗೆ ಅರ್ಜಿ ಸಲ್ಲಿಸಿದ್ದೆ. ಆದರೆ, ಅದು ಸಿಗಲಿಲ್ಲ. ಅವರು ನನ್ನ ವೀಸಾ ಕೋರಿಕೆಯನ್ನು ನೀಡಲು ಹಲವಾರು ದಾಖಲೆಗಳನ್ನು ಕೇಳಿದ್ದರು. ಅದಕ್ಕೆ ತುಂಬಾ ಸಮಯ ಬೇಕಾಗುತ್ತಿತ್ತು. ನಾನು ವೀಸಾ ಪಡೆದು ಇಲ್ಲಿಗೆ ಬರಬೇಕಾದರೆ, ಎರಡೂವರೆ ಮೂರು ತಿಂಗಳುಗಳು ಸಮಯ ಬೇಕಾಗುತ್ತಿತ್ತು. ಇದಕ್ಕಾಗಿಯೇ ನಾನು ನೇಪಾಳದ ಮೂಲಕ ಭಾರತಕ್ಕೆ ಬಂದಿದ್ದೇನೆ. ನಾನು ಇಲ್ಲಿ ಸಚಿನ್ ಜೊತೆ ಇರಲು ಬಯಸುತ್ತೇನೆ. ನಾನು ಇಲ್ಲಿಯೇ ಇರುತ್ತೇನೆ. ಅವರು ನನ್ನನ್ನು ಇಲ್ಲಿ ಕೊಂದ್ರೂ ಪರವಾಗಿಲ್ಲ. ನಾನು ನನ್ನ ಕೊನೆಯ ಉಸಿರನ್ನು ಇಲ್ಲೇ ಬಿಡುತ್ತೇನೆ" ಎಂದು ಪಾಕ್ ಪ್ರಜೆ ಸೀಮಾ ತಿಳಿಸಿದರು.
ಇದನ್ನೂ ಓದಿ:ಗ್ರೇಟರ್ ನೋಯ್ಡಾದ ಗ್ಯಾಲಕ್ಸಿ ಪ್ಲಾಜಾದಲ್ಲಿ ಅಗ್ನಿ ಅವಘಡ: ಕಟ್ಟಡದ ಮೂರನೇ ಅಂತಸ್ತಿನಿಂದ ಜಿಗಿದ ಇಬ್ಬರು ಸೇಫ್