ಕರ್ನಾಟಕ

karnataka

ETV Bharat / bharat

ಕೇಂದ್ರದಲ್ಲಿ ನಾವು ಸರ್ಕಾರ ರಚಿಸಿದರೆ ಹಿಂದುಳಿದ ಎಲ್ಲಾ ರಾಜ್ಯಗಳಿಗೆ ವಿಶೇಷ ಸ್ಥಾನಮಾನ: ಸಿಎಂ ನಿತೀಶ್ ಕುಮಾರ್

ಮುಖ್ಯಮಂತ್ರಿ ನಿತೀಶ್ ಕುಮಾರ್ ಬಿಹಾರದ ಎಲ್ಲ ಗ್ರಾಮಗಳಲ್ಲಿ ಮುಖ್ಯಮಂತ್ರಿ ಗ್ರಾಮೀಣ ಸೋಲಾರ್ ಬೀದಿ ದೀಪ ಯೋಜನೆಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಅವರು ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಮತ್ತೆ ಪ್ರತಿಪಾದಿಸಿದ್ದಾರೆ.

if-government-at-center-backward-states-will-be-given-special-status-says-nitish-kumar
ಕೇಂದ್ರದಲ್ಲಿ ನಾವು ಸರ್ಕಾರ ರಚಿಸಿದರೆ ಹಿಂದುಳಿದ ಎಲ್ಲಾ ರಾಜ್ಯಗಳಿಗೆ ವಿಶೇಷ ಸ್ಥಾನಮಾನ: ಸಿಎಂ ನಿತೀಶ್ ಕುಮಾರ್

By

Published : Sep 15, 2022, 11:00 PM IST

ಪಾಟ್ನಾ (ಬಿಹಾರ) : ಬಿಹಾರಕ್ಕೆ ವಿಶೇಷ ಸ್ಥಾನಮಾನದ ಬೇಡಿಕೆಯನ್ನು ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಮತ್ತೊಮ್ಮೆ ಪ್ರತಿಪಾದಿಸಿದ್ದಾರೆ. ಇದು ಬಿಹಾರದ ಅಭಿವೃದ್ಧಿಯ ವಿಷಯ ಎಂದು ಅವರು ಬಣ್ಣಿಸಿದ್ದಾರೆ. ಕೇಂದ್ರದಲ್ಲಿ ನಮ್ಮ ಸರ್ಕಾರ ರಚನೆಯಾದರೆ ಹಿಂದುಳಿದ ಎಲ್ಲಾ ರಾಜ್ಯಗಳಿಗೂ ವಿಶೇಷ ಸ್ಥಾನಮಾನ ನೀಡುತ್ತೇವೆ ಎಂದು ನಿತೀಶ್ ಕುಮಾರ್ ಹೇಳಿದ್ದಾರೆ.

ಕೇಂದ್ರದಲ್ಲಿ ನಾವು ಸರ್ಕಾರ ರಚಿಸಿದರೆ ಹಿಂದುಳಿದ ಎಲ್ಲಾ ರಾಜ್ಯಗಳಿಗೆ ವಿಶೇಷ ಸ್ಥಾನಮಾನ

"ನಾನು ಹಿಂದಿನಿಂದಲೂ ವಿಶೇಷ ಸ್ಥಾನಮಾನಕ್ಕಾಗಿ ಒತ್ತಾಯಿಸುತ್ತಿದ್ದೇನೆ ಇಡೀ ಸರ್ಕಾರದ ಪರವಾಗಿ ಅದನ್ನು ಮುಂದುವರಿಸುತ್ತೇನೆ. ನಾನು ಪ್ರತಿ ಸಭೆಯಲ್ಲೂ ಇದನ್ನೇ ಮಾತನಾಡಿದ್ದೇನೆ.ನಮಗೆ ಸರ್ಕಾರ ರಚಿಸಲು ಅವಕಾಶ ಸಿಕ್ಕರೆ, ಖಂಡಿತವಾಗಿಯೂ ಬಿಹಾರದ ಜೊತೆಗೆ ಇತರ ಹಿಂದುಳಿದ ರಾಜ್ಯಗಳಿಗೂ ವಿಶೇಷ ಸ್ಥಾನಮಾನ ನೀಡಲಾಗುವುದು ಎಂದು ಮುಖ್ಯಮಂತ್ರಿ ನಿತೀಶ್ ಕುಮಾರ್ ಹೇಳಿದ್ದಾರೆ.

ಇದನ್ನೂ ಓದಿ :ಕಳ್ಳನನ್ನು ರೈಲಿನ ಕಿಟಕಿ ಹೊರಗಿಂದ 15 ಕಿಮೀ ನೇತಾಡಿಸಿದ ಪ್ರಯಾಣಿಕರು.. ಖದೀಮನಿಗೆ ಸಖತ್​ ಪಾಠ! ವಿಡಿಯೋ

ABOUT THE AUTHOR

...view details