ಕರ್ನಾಟಕ

karnataka

By

Published : Dec 13, 2020, 4:49 PM IST

ETV Bharat / bharat

2023ರ ಟಿ-20 ಮಹಿಳಾ ವಿಶ್ವಕಪ್​: ಅರ್ಹತಾ ಮಾರ್ಗಸೂಚಿ ಪ್ರಕಟಿಸಿದ ಐಸಿಸಿ

2023ರ ಮಹಿಳಾ ಟಿ-20 ವಿಶ್ವಕಪ್​ಗೆ ಈಗಾಗಲೇ 8 ರಾಷ್ಟ್ರಗಳು ಆಯ್ಕೆಯಾಗಿದ್ದು, ಇನ್ನೆರಡು ತಂಡಗಳಿಗಾಗಿ ಅರ್ಹತಾ ಮಾನದಂಡವನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಘೋಷಿಸಿದೆ.

2023 Women's T20 WC
2023ರ ಟಿ-20 ಮಹಿಳಾ ವಿಶ್ವಕಪ್​

ದುಬೈ: 2023ರಲ್ಲಿ ದಕ್ಷಿಣ ಆಫ್ರಿಕಾದಲ್ಲಿ ನಡೆಯಲಿರುವ ಮಹಿಳಾ ಟಿ-20 ವಿಶ್ವಕಪ್​ಗೆ ವಿವಿಧ ರಾಷ್ಟ್ರಗಳು ಅರ್ಹತೆ ಪಡೆಯಲು ಬೇಕಿರುವ ಮಾನದಂಡಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಘೋಷಣೆ ಮಾಡಿದೆ.

10 ರಾಷ್ಟ್ರಗಳ ತಂಡಗಳು ವಿಶ್ವಕಪ್​ನಲ್ಲಿ ಭಾಗವಹಿಸಲಿದ್ದು, ಈಗಾಗಲೇ ವಿಶ್ವಕಪ್ ಆಯೋಜಿಸುವ ದಕ್ಷಿಣ ಆಫ್ರಿಕಾ ಮತ್ತು ನವೆಂಬರ್ 30, 2021ರಲ್ಲಿ ಬಿಡುಗಡೆಯಾದ ಪಟ್ಟಿಯ ಅನುಸಾರ ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಏಳು ಸ್ಥಾನದಲ್ಲಿರುವ ರಾಷ್ಟ್ರಗಳನ್ನು ವಿಶ್ವಕಪ್​ಗೆ ಆಯ್ಕೆ ಮಾಡಲಾಗಿದೆ.

ಆಸ್ಟ್ರೇಲಿಯಾ, ಇಂಗ್ಲೆಂಡ್, ಭಾರತ, ನ್ಯೂಜಿಲ್ಯಾಂಡ್, ದಕ್ಷಿಣ ಆಫ್ರಿಕಾ, ವೆಸ್ಟ್​ ಇಂಡೀಸ್, ಪಾಕಿಸ್ತಾನ ರಾಷ್ಟ್ರಗಳು ಐಸಿಸಿ ರ‍್ಯಾಂಕಿಂಗ್ ಪಟ್ಟಿಯಲ್ಲಿ ಮೊದಲ ಏಳು ಸ್ಥಾನಗಳಲ್ಲಿರುವ ಕಾರಣದಿಂದಾಗಿ ಅವುಗಳು ವಿಶ್ವಕಪ್​ಗೆ ಆಯ್ಕೆಯಾಗಿವೆ.

ಓದಿ:ಟಿ20 ಕ್ರಿಕೆಟ್​ನಲ್ಲಿ ರೋಹಿತ್ ಶರ್ಮಾ ದಾಖಲೆ ಸರಿಗಟ್ಟಿದ ವಿರಾಟ್ ಕೊಹ್ಲಿ

ಇನ್ನುಳಿದಿರುವ ಎರಡು ಸ್ಥಾನಗಳಿಗೆ ವಿವಿಧ ರಾಷ್ಟ್ರಗಳೊಂದಿಗೆ ಸ್ಪರ್ಧೆ ಏರ್ಪಡಲಿದೆ. ಭೂತಾನ್, ಬೋಟ್ಸ್ವಾನಾ, ಕ್ಯಾಮೆರೂನ್​, ಫ್ರಾನ್ಸ್, ಮಲಾವಿ, ಮ್ಯಾನ್ಮಾರ್, ಫಿಲಿಪ್ಪಿನ್ಸ್ ಹಾಗೂ ಟರ್ಕಿ ದೇಶಗಳು ಇದೇ ಮೊದಲ ಬಾರಿಗೆ ವಿಶ್ವಕಪ್​ನಲ್ಲಿ ಭಾಗವಹಿಸಲು ಪೈಪೋಟಿ ನಡೆಸಲಿವೆ.

2012ರಲ್ಲಿ ಭಾಗವಹಿಸಿ ವಾಪಸ್ಸಾಗಿದ್ದ ಅರ್ಜೆಂಟೀನಾ ಹಾಗೂ ಬ್ರೆಜಿಲ್ ದೇಶಗಳು ಮತ್ತೆ ಭಾಗವಹಿಸಲು ಉತ್ಸುಕತೆ ತೋರಿವೆ. 2021ರ ಆಗಸ್ಟ್​ನಿಂದ ಐದು ವಲಯಗಳಲ್ಲಿ ಅರ್ಹತಾ ಪಂದ್ಯಗಳು ನಡೆಯಲಿವೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಹೇಳಿದೆ.

ABOUT THE AUTHOR

...view details