ನವದೆಹಲಿ :ಮಧ್ಯಪ್ರದೇಶ ಮೂಲದ ಸೋಯಾ ಉತ್ಪನ್ನಗಳ ತಯಾರಿಕಾ ಸಂಸ್ಥೆ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ಸುಮಾರು 450 ಕೋಟಿ ರೂಪಾಯಿ ಕಪ್ಪುಹಣ ಪತ್ತೆ ಹಚ್ಚಿದೆ.
ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್ ಟ್ಯಾಕ್ಸ್ (ಸಿಬಿಡಿಟಿ) ಈ ಬಗ್ಗೆ ಮಾಹಿತಿ ನೀಡಿದೆ. ಇದಕ್ಕೆ ಸಂಬಂಧಪಟ್ಟಂತೆ ಫೆಬ್ರವರಿ 18ರಿಂದ 22ರವರೆಗೆ ಹಲವು ಸ್ಥಳಗಳಲ್ಲಿ ದಾಳಿ ನಡೆಸಿತ್ತು. ಮಧ್ಯಪ್ರದೇಶದ ಬೇತುಲ್, ಸತ್ನಾ, ಮಹಾರಾಷ್ಟ್ರದ ಮುಂಬೈ, ಸೋಲಾಪುರ ಮತ್ತು ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿಯೂ ದಾಳಿ ನಡೆಸಲಾಗಿತ್ತು.
ದಾಳಿ ವೇಳೆ ಲ್ಯಾಪ್ಟಾಪ್, ಹಾರ್ಡ್ ಡ್ರೈವ್ಗಳು, ಪೆನ್ ಡ್ರೈವ್ಗಳನ್ನು ವಶಕ್ಕೆ ಪಡೆಯಲಾಗಿದೆ. ಇವುಗಳನ್ನು ಪರಿಶೀಲಿಸಿದಾಗ ಸುಮಾರು ₹450 ಕೋಟಿ ಕಪ್ಪು ಹಣ ಇರುವುದು ಪತ್ತೆಯಾಗಿದೆ.