ಭಿಲೈ: ಕೇವಲ 50ರೂ.ಗಾಗಿ ಪತ್ನಿಯನ್ನು ಕೊಲೆ ಮಾಡಿದ ಬಳಿಕ ಪತಿ ತನ್ನ ಮಣಿಕಟ್ಟು ಕತ್ತರಿಸಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಭಿಲೈನಲ್ಲಿ ನಡೆದಿದೆ.
ಸಿಎಸ್ಪಿ ವಿಶ್ವಾಸ್ ಚಂದ್ರಕರ್ ಅನಿತಾ ಪಟೇಲ್ ಕೊಲೆಯಾದವರು. ರಾಜ್‌ಕುಮಾರ್ ಪಟೇಲ್ (40) ಆತ್ಮಹತ್ಯೆಗೆ ಯತ್ನಿಸಿದ ಪತಿ. ಮಾಹಿತಿಯ ಪ್ರಕಾರ ಈ ದಂಪತಿಗಳು ಪಾಟನ್ನ ಕಸೈ ಗ್ರಾಮದ ನಿವಾಸಿಗಳು. ಕಳೆದ ಕೆಲವು ವರ್ಷಗಳಿಂದ ಅವರು ಭಿಲೈಗೆ ಬಂದು ಬಾಡಿಗೆ ಮನೆಯಲ್ಲಿದ್ದು, ಕೂಲಿ ಮಾಡಿ ಜೀವನ ಸಾಗಿಸುತ್ತಿದರು.
ಕಳೆದ ಕೆಲವು ದಿನಗಳಿಂದ ರಾಜ್‌ಕುಮಾರ್ ಕೆಲಸಕ್ಕೆ ಹೋಗುತ್ತಿರಲಿಲ್ಲ. ಅಲ್ಲದೇ ಆಗಾಗ್ಗೆ ಕುಡಿಯುತ್ತಿದ್ದ ಆತನ ಮಾನಸಿಕ ಸ್ಥಿತಿ ಸರಿಯಿರಲಿಲ್ಲ. ಕೆಲವು ದಿನಗಳಿಂದ ಆತ ಭಯದಿಂದ ಬದುಕುತ್ತಿದ್ದ. ನಿನ್ನೆ ರಾಜ್‌ಕುಮಾರ್ ತನ್ನ ಹೆಂಡತಿಗೆ 50 ರೂ. ನೀಡುವಂತೆ ಬೇಡಿಕೆ ಇಟ್ಟಿದ್ದಾನೆ. ಪತ್ನಿ ಹಣ ನೀಡಲು ನಿರಾಕರಿಸಿದ್ದಾಳೆ. ನಂತರ ಇಬ್ಬರ ನಡುವೆ ಗಲಾಟೆ ಉಂಟಾಗಿದ್ದು, ರಾಜ್‌ಕುಮಾರ್ ರಾಡ್ನಿಂದ ಪತ್ನಿ ಅನಿತಾ ತಲೆಗೆ ಹೊಡೆದಿದ್ದಾನೆ. ಇದರಿಂದ ಆಕೆ ಸ್ಥಳದಲ್ಲೇ ಮೃತಪಟ್ಟಿದ್ದಾಳೆ.
ಬಳಿಕ ಆರೋಪಿ ತನ್ನ ಕೈ ಕತ್ತರಿಸಿಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಆರೋಪಿಯನ್ನು ಸುಪೇಲಾದ ಲಾಲ್ ಬಹದ್ದೂರ್ ಶಾಸ್ತ್ರಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.