ಕರ್ನಾಟಕ

karnataka

ETV Bharat / bharat

ಕಟ್ಕೊಂಡ ಹೆಂಡ್ತಿಯನ್ನೇ ಇನ್ನೊಬ್ಬನಿಗೆ ಧಾರೆ ಎರೆದ ಪತಿರಾಯ.. ಇದೊಂಥರಾ ವಿಲಕ್ಷಣ! - ಇಬ್ಬರನ್ನೂ ಒಂದಾಗಿಸಿದ ಪತಿರಾಯ

ವಿಶೇಷವೆಂದರೆ ಈ ವಿವಾಹಕ್ಕೆ ಇಬ್ಬರ ಕಡೆಯಿಂದಲೂ ಸಮ್ಮತಿ ಇದ್ದು, ಸಂತೋಷದಿಂದಲೇ ಆತನ ಕೈಹಿಡಿಯುತ್ತಿರುವುದಾಗಿ ಪತ್ನಿ ಹೇಳಿದ್ದಾಳೆ. ಆದರೆ, ಪತಿ ವಿರುದ್ಧ ಕಿರುಕುಳ ಆರೋಪ ಮಾಡಿರುವ ಪತ್ನಿ, ನನಗೆ ನಿತ್ಯ ಕಿರುಕುಳ ನೀಡುತ್ತಿದ್ದ. ಹೀಗಾಗಿ, ಬೇರೆಯಾಗುತ್ತಿದ್ದೇನೆ ಎಂದಿದ್ದಾಳೆ..

ಮದುವೆಯಾಗಿ ಮಗುವಿದ್ದರೂ ಹಿಂದೆ ಬಿದ್ದ ಪ್ರಿಯಕರ
ಮದುವೆಯಾಗಿ ಮಗುವಿದ್ದರೂ ಹಿಂದೆ ಬಿದ್ದ ಪ್ರಿಯಕರ

By

Published : May 28, 2021, 8:14 PM IST

Updated : May 29, 2021, 4:56 AM IST

ಸರಣ್(ಬಿಹಾರ) : ವಿವಾಹ ಮಹೋತ್ಸವ ಸ್ವರ್ಗದಲ್ಲೇ ನಿಶ್ಚಯವಾಗಲಿದೆ ಅನ್ನೋದು ನಂಬಿಕೆ. ಆದ್ರೆ, ಇಲ್ಲೊಂದು ಜೋಡಿ ವಿವಾಹ ಮಾತ್ರ ಪತಿಯ ಸಮ್ಮುಖದಲ್ಲೇ ನಡೆದಿದೆ.

ಪತ್ನಿಯನ್ನ ಆಕೆಯ ಪ್ರಿಯಕರನ ಜೊತೆ ಪತಿಯೇ ವಿವಾಹ ಮಾಡಿಸಿರುವ ಪ್ರಸಂಗ ನಡೆದಿದೆ. ಬಿಹಾರದ ಸರಣ್ ಜಿಲ್ಲೆಯ ಛಾಪ್ರಾ ಗ್ರಾಮದಲ್ಲಿ ಈ ಪ್ರಸಂಗ ನಡೆದಿದೆ.ಈ ಜೋಡಿಯ ವಿವಾಹದ ವಿಡಿಯೋ ಈಗ ವೈರಲ್ ಆಗುತ್ತಿದೆ. ವಿವಾಹವಾಗಿ ಒಂದು ಮಗು ಪಡೆದಿದ್ದ ಜೋಡಿಯು ಈಗ ಬೇರೆಯಾಗುವ ನಿರ್ಧಾರ ಮಾಡಿದ್ದಾರೆ.

ಪತ್ನಿಯನ್ನ ಆಕೆಯ ಪ್ರಿಯಕರನ ಜೊತೆ ವಿವಾಹ ಮಾಡಿಸಿದ ಪತಿ

ವಿವಾಹವಾದ 6 ತಿಂಗಳಿನಿಂದ ಪತ್ನಿ ಬೇರೆ ಯುವಕನ್ನು ಪ್ರೀತಿಸುತ್ತಿದ್ದಳು. ಆತನು ಸಹ ವಿವಾಹವಾಗಿರುವುದು ತಿಳಿದಿದ್ದರೂ ಗೃಹಿಣಿಯ ಹಿಂದೆ ಬಿದ್ದಿದ್ದ. ಇದನ್ನು ಕಂಡ ಪತಿ ಅವರಿಬ್ಬರಿಗೂ ವಿವಾಹ ಮಾಡಿಸಿದ್ದಾನೆ.

ವಿಶೇಷವೆಂದರೆ ಈ ವಿವಾಹಕ್ಕೆ ಇಬ್ಬರ ಕಡೆಯಿಂದಲೂ ಸಮ್ಮತಿ ಇದ್ದು, ಸಂತೋಷದಿಂದಲೇ ಆತನ ಕೈಹಿಡಿಯುತ್ತಿರುವುದಾಗಿ ಪತ್ನಿ ಹೇಳಿದ್ದಾಳೆ. ಆದರೆ, ಪತಿ ವಿರುದ್ಧ ಕಿರುಕುಳ ಆರೋಪ ಮಾಡಿರುವ ಪತ್ನಿ, ನನಗೆ ನಿತ್ಯ ಕಿರುಕುಳ ನೀಡುತ್ತಿದ್ದ.

ಹೀಗಾಗಿ, ಬೇರೆಯಾಗುತ್ತಿದ್ದೇನೆ ಎಂದಿದ್ದಾಳೆ. ಈ ನಡುವೆ ಮಗುವನ್ನು ತಾನೇ ನೋಡಿಕೊಳ್ಳುವುದಾಗಿ ಪತಿ ಹೇಳಿದ್ದು, ನಾನು ಸಹ ಬೇರೊಂದು ಮಹಿಳೆಯ ಕೈಹಿಡಿಯುವುದಾಗಿಯೂ ಹೇಳಿದ್ದಾನೆ.

Last Updated : May 29, 2021, 4:56 AM IST

ABOUT THE AUTHOR

...view details