ಕರ್ನಾಟಕ

karnataka

ETV Bharat / bharat

ಪತ್ನಿಗೆ ಬಂದ ಉಡುಗೊರೆಗಳು ಆಕೆಯ ಆಸ್ತಿ, ಅನುಮತಿಯಿಲ್ಲದೆ ಗಂಡ ಪಡೆಯುವಂತಿಲ್ಲ: ದೆಹಲಿ ಹೈಕೋರ್ಟ್​​

ವಿವಾಹದ ಸಂದರ್ಭದಲ್ಲಿ ಪತ್ನಿಗೆ ಉಡುಗೊರೆಯಾಗಿ ಬಂದ ಆಭರಣಗಳು ಆಕೆಯ ವೈಯಕ್ತಿಕ ಆಸ್ತಿ-ಪತಿಯು ಪೂರ್ವ ಮಾಹಿತಿ ಇಲ್ಲದೆ ಹೆಂಡತಿ ಚಿನ್ನಾಭರಣ ಪಡೆಯುವಂತಿಲ್ಲ- ದೆಹಲಿ ಹೈಕೋರ್ಟ್ ತೀರ್ಪು

husband-cannot-take-wife-personal-property-as-gift-without-permission
ದೆಹಲಿ ಹೈಕೋರ್ಟ್​​

By

Published : Dec 31, 2022, 6:49 PM IST

ನವದೆಹಲಿ:ಮದುವೆ ಸಂದರ್ಭದಲ್ಲಿ ವಧು ವರ ತುಂಬಾ ಖುಷಿಯಲ್ಲಿರುತ್ತಾರೆ. ಜೊತೆಗೆ ಅವರಿಗೆ ಶುಭಾಶಯಗಳನ್ನು ಕೋರಲು ಸ್ನೇಹಿತರು ಮತ್ತು ಬಂಧು ಬಳಗದವರು ದುಂಬಾಲು ಬೀಳುತ್ತಾರೆ. ಈ ಸಂದರ್ಭದಲ್ಲಿ ಬೆಲೆ ಬಾಳುವ ಉಡುಗೊರೆಗಳನ್ನು ಸಹ ನವ ದಂಪತಿಗೆ ಕೊಡುವುದು ಸಾಮಾನ್ಯ. ಆಗ ವಧುವಿನ ಕಡೆಯುವರು ಆಕೆಗೆ ಕೊಡುವ ಗಿಫ್ಟ್​​ಗಳು ಇನ್ಮುಂದೆ ಅವಳ ಆಸ್ತಿ ಆಗಿರುತ್ತವೆ. ಇದರ ಮೇಲೆ ಪತಿ ಕಣ್ಣಾಕುವಂತಿಲ್ಲ.

ಹೌದು, ವಿವಾಹದ ಸಂದರ್ಭದಲ್ಲಿ ಮಹಿಳೆಗೆ ನೀಡಿದ ಆಭರಣಗಳು ಆಕೆಗೆ ಸೇರುವ ಸೊತ್ತುಗಳಾಗಿರುತ್ತಿವೆ. ಅವಳ ಪೂರ್ವಾನುಮತಿ ಇಲ್ಲದೆ ಪತಿ ಅಥವಾ ಸಂಬಂಧಿಕರು ಅವುಗಳನ್ನು ತೆಗೆದುಕೊಳ್ಳಲು ಪ್ರಯತ್ನಿಸುವುದು ಅಪರಾಧ ಎಂದು ದೆಹಲಿ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ವ್ಯಕ್ತಿಯು ಮಹಿಳೆಯ ಗಂಡನಾಗಿದ್ದರೂ ಸಹ ಆಕೆಗೆ ಮಾಹಿತಿ ನೀಡದೆ ಆಭರಣ ಮತ್ತು ಗೃಹೋಪಯೋಗಿ ವಸ್ತು ತೆಗೆದುಕೊಂಡು ಹೋಗಲು ಕಾನೂನಿನಲ್ಲಿ ಅನುಮತಿ ಇಲ್ಲ ಎಂದಿರುವ ಹೈಕೋರ್ಟ್, ಚಿನ್ನಾಭರಣ ಕಳವು ಮಾಡಿದ ಪ್ರಕರಣದಲ್ಲಿ ಪತಿಯ ಬಂಧನಕ್ಕೆ ತಡೆ ನೀಡಲು ನಿರಾಕರಿಸಿದೆ. ಯಾವುದೇ ವ್ಯಕ್ತಿಗಳ ನಡುವೆ ಕಲಹವಿದ್ದರೆ ಕಾನೂನನ್ನು ಕೈಗೆ ತೆಗೆದುಕೊಳ್ಳುವಂತಿಲ್ಲ ಎಂದೂ ಸಹ ನ್ಯಾಯಾಲಯ ಎಚ್ಚರಿಸಿದೆ.

ಪತಿಯು ಹೆಂಡತಿಯನ್ನು ತನ್ನ ಮನೆಯಿಂದ ಓಡಿಸಲು ಅಥವಾ ಪತ್ನಿಗೆ ಬಂದ ವಸ್ತುಗಳನ್ನು ಮನೆಯಿಂದ ಕದ್ದು ತೆಗೆದುಕೊಂಡು ಹೋಗುವಂತಿಲ್ಲ. ಅಲ್ಲದೆ, ಈ ಪ್ರಕರಣದ ತನಿಖೆಯು ಆರಂಭಿಕ ಹಂತದಲ್ಲಿದೆ. ಆರೋಪಿಯು ತನಿಖೆಗೆ ಒಳಪಟ್ಟಿಲ್ಲ ಹಾಗೂ ಚಿನ್ನಾಭರಣಗಳನ್ನು ಇನ್ನೂ ವಶಪಡಿಸಿಕೊಂಡಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಹೀಗಾಗಿ ಆರೋಪಿಯು ವಿರುದ್ಧ ಸುಳ್ಳು ಆರೋಪ ಹೊರಿಸಲಾಗಿದೆ ಎಂದೂ ಹೇಳಲಾಗುವುದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆರೋಪಿಗೆ ಬಂಧನ ಪೂರ್ವ ಜಾಮೀನು ಮಂಜೂರು ಮಾಡಲು ಸಾಧ್ಯವೆಂದು ಅರ್ಜಿ ವಜಾಗೊಳಿಸಲಾಗಿದೆ ಎಂದು ಕೋರ್ಟ್​ ತಿಳಿಸಿದೆ. ಪ್ರಕರಣದಲ್ಲಿ ಬಂಧನಕ್ಕೆ ತಡೆಯಾಜ್ಞೆ ನೀಡುವಂತೆ ಪತಿ ಅರ್ಜಿ ಸಲ್ಲಿಸಿದ್ದರು.

ಪ್ರಕರಣದ ಹಿನ್ನೆಲೆ:ದೆಹಲಿಯ ರೋಹಿಣಿ ಪ್ರದೇಶದ ಕೆಎನ್ ಕಾಟ್ಜು ಮಾರ್ಗ್ ಪೊಲೀಸ್ ಠಾಣೆಯಲ್ಲಿ ಪತಿ ವಿರುದ್ಧ ಪತ್ನಿಯು ಕಳ್ಳತನದ ಮಾಡಿರುವ ಬಗ್ಗೆ ದೂರು ನೀಡಿದ್ದರು. ತಾನು ತವರು ಮನೆಗೆ ಹೋದಾಗ ಪತಿಯು ಮನೆಯಲ್ಲಿದ್ದ ಚಿನ್ನಾಭರಣ, ನಗದು ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದರು.

ಆದರೆ, ಆರೋಪ ಹೊರಿಸಿರುವ ಪತ್ನಿಯು ತನ್ನಗಿಷ್ಟ ಬಂದಂತೆ ತವರು ಮನೆಗೆ ತೆರಳಿದ್ದಳು. ಈ ನಡುವೆ ಬಾಡಿಗೆ ಮನೆ ಬದಲಾಯಿಸಬೇಕಾದ ಕಾರಣಕ್ಕೆ ಅಲ್ಲಿದ್ದ ವಸ್ತುಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗಿದೆ. ಆದರೆ ಪತಿ-ಪತ್ನಿಯರ ನಡುವೆ ವೈವಾಹಿಕ ಕಲಹ ನಡೆಯುತ್ತಿದ್ದು, ಈ ಕಾರಣಕ್ಕೆ ಪತಿ ವಿರುದ್ಧ ದೂರು ನೀಡಲಾಗಿದೆ ಎಂದು ಆರೋಪಿ ಪರ ವಕೀಲರು ವಾದಿಸಿದ್ದಾರೆ.

ABOUT THE AUTHOR

...view details