ಕರ್ನಾಟಕ

karnataka

ETV Bharat / bharat

ಕಂಠಪೂರ್ತಿ ಕುಡಿದು ಹೊಡಿತಾಳೆ, ಬಡಿತಾಳೆ ನನ್​ ಹೆಂಡ್ತಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಗಂಡ! - ಗಂಡನ ಮೇಲೆ ಹೆಂಡತಿ ಹಲ್ಲೆ

ಕುಡಿದು ಹೊಡೆಯುತ್ತಾಳೆಂದು ಆರೋಪಿಸಿ ಗಂಡನೋರ್ವ ಪೊಲೀಸ್​ ಠಾಣೆ ಮೆಟ್ಟಿಲೇರಿದ್ದು, ಕಟ್ಟಿಕೊಂಡ ಹೆಂಡತಿ ವಿರುದ್ಧ ಪ್ರಕರಣ ದಾಖಲು ಮಾಡಿದ್ದಾನೆ.

Husband accuses wife of drinking alcohol
Husband accuses wife of drinking alcohol

By

Published : Apr 19, 2021, 7:04 PM IST

ಬಿಲಾಸ್ಪುರ್​(ಛತ್ತೀಸ್​ಗಢ):ಕಂಠಪೂರ್ತಿ ಮದ್ಯ ಸೇವನೆ ಮಾಡಿ ಕೆಲ ಗಂಡದಿರು ಹೆಂಡತಿ ಮೇಲೆ ಹಲ್ಲೆ ಮಾಡುವ ಘಟನೆ ಮೇಲಿಂದ ಮೇಲೆ ನಾವು ಕೇಳಿರುತ್ತೇವೆ. ಆದರೆ ಇಲ್ಲೊಂದು ಘಟನೆ ಇದಕ್ಕೆ ವಿರುದ್ಧವಾಗಿದ್ದು, ಹೆಂಡತಿಯೋರ್ವಳು ಗಂಡನ ಮೇಲೆ ಹಲ್ಲೆ ನಡೆಸಿರುವ ಪ್ರಕರಣ ಬೆಳಕಿಗೆ ಬಂದಿದೆ.

ಹೆಂಡತಿ ವಿರುದ್ಧ ದೂರು ದಾಖಲು ಮಾಡಿದ ಗಂಡ

ಛತ್ತೀಸ್​ಗಢದ ಬಿಲಾಸ್ಪುರ್​​ದಲ್ಲಿ ಈ ಘಟನೆ ನಡೆದಿದ್ದು, ಗಂಡನೋರ್ವ ಪೊಲೀಸ್ ಠಾಣೆಯಲ್ಲಿ ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿದ್ದಾರೆ. ನನ್ನ ಹೆಂಡತಿಯಿಂದ ನನ್ನನ್ನು ಉಳಿಸಿ ಎಂದು ಮನವಿ ಮಾಡಿರುವ ಗಂಡ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ. ಕಳೆದ 15 ವರ್ಷಗಳ ಹಿಂದೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿರುವ ಜೋಡಿ ಖುಜುರಿ ಗ್ರಾಮದಲ್ಲಿ ವಾಸವಾಗಿದ್ದಾರೆ.

ಇದನ್ನೂ ಓದಿ: ಶ್ವಾಸಕೋಶ ಸೋಂಕು..175 ಕಿ.ಮೀ ಗ್ರೀನ್ ಕಾರಿಡಾರ್​ ಮೂಲಕ ಭೋಪಾಲ್​ನಿಂದ ಹೈದರಾಬಾದ್​ಗೆ ವೈದ್ಯನ ರವಾನೆ!

ಹೆಂಡತಿ ಮೊದಲಿನಿಂದಲೂ ಮದ್ಯ ವ್ಯಸನಿಯಾಗಿದ್ದು, ಕುಡಿದು ನನ್ನ ಹಾಗೂ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಿದ್ದಾಳೆಂದು ಆತ ದೂರು ನೀಡಿದ್ದಾನೆ. ಮದುವೆ ವೇಳೆ ಆಕೆ ಮದ್ಯವ್ಯಸನಿ ಎಂದು ನನಗೆ ಗೊತ್ತಿರಲಿಲ್ಲ. ಇದಾದ ಬಳಿಕ ಆಕೆ ಬಹಿರಂಗವಾಗಿ ಮದ್ಯಪಾನ ಸೇವನೆ ಮಾಡಲು ಪ್ರಾರಂಭಿಸಿದಳು. ಪ್ರತಿದಿನ ಅಲ್ಕೋಹಾಲ್​ ಸೇವನೆ ಮಾಡಿ ಮಕ್ಕಳ ಮೇಲೆ ಹಲ್ಲೆ ನಡೆಸುತ್ತಾಳೆ. ನನ್ನ ಮೇಲೂ ಹಲ್ಲೆ ನಡೆಸಿದ್ದಾಳೆ ಎಂದು ದೂರು ನೀಡಿದ್ದಾನೆ. ಕಳೆದ ಭಾನುವಾರ ಈ ವಿವಾದ ಹೆಚ್ಚಾದ ಬಳಿಕ ಆತ ಹಿರ್ರಿ ಪೊಲೀಸ್​ ಠಾಣೆಗೆ ತೆರಳಿ ದೂರು ದಾಖಲು ಮಾಡಿದ್ದಾನೆ. ಇದೀಗ ವಿಚಾರಣೆ ನಡೆಸುತ್ತಿರುವ ಪೊಲೀಸರು ಇಬ್ಬರನ್ನ ಠಾಣೆಗೆ ಕರೆಯಿಸಿಕೊಂಡಿದ್ದಾರೆ.

ABOUT THE AUTHOR

...view details