ಕರ್ನಾಟಕ

karnataka

ETV Bharat / bharat

Video: ಆಸ್ಪತ್ರೆಯಿಂದ ಹೆಂಡ್ತಿಯ ಮೃತದೇಹ ಹೆಗಲ ಮೇಲೆ ಹೊತ್ತುಕೊಂಡು ಓಡಿ ಹೋದ ಗಂಡ!

ರಸ್ತೆ ಮಧ್ಯದಲ್ಲಿ, ಎಲ್ಲರೂ ನೋಡ-ನೋಡುತ್ತಿದ್ದಂತೆ ವ್ಯಕ್ತಿಯೊಬ್ಬ ತನ್ನ ಹೆಂಡ್ತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವ ಘಟನೆ ಬಿಹಾರದ ವೈಶಾಲಿ ಜಿಲ್ಲೆಯಲ್ಲಿ ನಡೆದಿದೆ.

husband absconding with wife dead body in Bihar, husband absconding with wife dead body in hospital, husband absconding with wife dead body video viral, Bihar crime news, ಹೆಂಡ್ತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಪರಾರಿಯಾದ ಗಂಡ, ಬಿಹಾರದಲ್ಲಿ ಹೆಂಡ್ತಿಯ ಮೃತದೇಹವನ್ನು ಹೊತ್ತುಕೊಂಡು ಪರಾರಿಯಾದ ಗಂಡ, ಆಸ್ಪತ್ರೆಯಿಂದ ಹೆಂಡ್ತಿಯ ಮೃತದೇಹವನ್ನು ಹೊತ್ತುಕೊಂಡು ಪರಾರಿಯಾದ ಗಂಡ, ಬಿಹಾರ ಅಪರಾಧ ಸುದ್ದಿ,
ಆಸ್ಪತ್ರೆಯಿಂದ ಹೆಂಡ್ತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿ ಹೋದ ಗಂಡ

By

Published : Jan 21, 2022, 2:19 PM IST

Updated : Jan 21, 2022, 2:28 PM IST

ವೈಶಾಲಿ(ಬಿಹಾರ) :ಹಾಜಿಪುರ್​ ಸದರ್​ ಆಸ್ಪತ್ರೆಯಲ್ಲಿ ವ್ಯಕ್ತಿಯೊಬ್ಬ ತನ್ನ ಪತ್ನಿ ಶವವನ್ನು ಭುಜದ ಮೇಲೆ ಹೊತ್ತು ಆಸ್ಪತ್ರೆಯ ಮುಖ್ಯ ಗೇಟ್‌ನಿಂದ ಹೊರ ಬರುತ್ತಿರುವ ದೃಶ್ಯ ಸಂಚಲನ ಮೂಡಿಸಿದೆ. ಸಾಮಾಜಿಕ ಜಾಲತಾಣದಲ್ಲಿ ಇದರ ವಿಡಿಯೋ ಸಖತ್​ ವೈರಲ್​ ಕೂಡಾ ಆಗ್ತಿದೆ.

ಆಸ್ಪತ್ರೆಯಿಂದ ಹೆಂಡ್ತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿ ಹೋದ ಗಂಡ

ಏನಿದು ಘಟನೆ:ಬಿದುಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಹೇಳಲಾಗುತ್ತಿದೆ. ಮೃತದೇಹದೊಂದಿಗೆ ಆಕೆಯ ಪತಿ ಆಸ್ಪತ್ರೆಗೆ ಬಂದಿದ್ದರು. ಬಳಿಕ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಅನುಮಾನಾಸ್ಪದ ಸಾವಿನ ಹಿನ್ನೆಲೆ ಈ ವಿಷಯವನ್ನು ಪೊಲೀಸರಿಗೆ ತಿಳಿಸಲು ಹೇಳಿದರು.

ಆಸ್ಪತ್ರೆಯಿಂದ ಹೆಂಡ್ತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿ ಹೋದ ಗಂಡ

ಓದಿ:ತಮಿಳುನಾಡು ಸರ್ಕಾರದ ಹೊಗೇನಕಲ್ ಯೋಜನೆಗೆ ಅವಕಾಶ ಕೊಡಲ್ಲ: ಸಚಿವ ಕಾರಜೋಳ

ಆದರೆ, ಆ ವ್ಯಕ್ತಿ ಪೊಲೀಸರಿಗೆ ಈ ವಿಷಯ ತಿಳಿಸಿದರೆ ಕೋರ್ಟ್​, ಜೈಲು ಅಲೆದಾಡಬೇಕಾಗುತ್ತೆ ಎಂದು ಯೋಚಿಸಿರಬೇಕು. ಹೀಗಾಗಿ ಆತ ತನ್ನ ಹೆಂಡ್ತಿಯ ಶವವನ್ನು ಭುಜದ ಮೇಲೆ ಹೊತ್ತು ಪರಾರಿಯಾಗಿದ್ದಾನೆ ಎಂಬ ಅನುಮಾನಗಳು ವ್ಯಕ್ತವಾಗಿವೆ. ತನ್ನ ಹೆಂಡ್ತಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಗಂಡ ಓಡಿ ಹೋಗುತ್ತಿದ್ದ ವೇಳೆ ಸ್ಥಳೀಯರು ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಹರಿ ಬಿಟ್ಟಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಸಖತ್​ ವೈರಲ್​ ಆಗ್ತಿದ್ದು, ಸಂಚಲನ ಮೂಡಿಸುತ್ತಿದೆ.

ಆಸ್ಪತ್ರೆಯಿಂದ ಹೆಂಡ್ತಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತುಕೊಂಡು ಓಡಿ ಹೋದ ಗಂಡ

ಆರೋಪಿ ಪರಾರಿಯಾಗುತ್ತಿದ್ದ ಸಮಯದಲ್ಲಿ ಆಸ್ಪತ್ರೆ ಭದ್ರತಾ ಸಿಬ್ಬಂದಿ ಏನು ಮಾಡುತ್ತಿದ್ದರು ಎಂಬುದು ಪ್ರಶ್ನೆ ಉದ್ಭವವಾಗುತ್ತಿದೆ. ಭದ್ರತಾ ಸಿಬ್ಬಂದಿ ಆತನನ್ನು ಏಕೆ ತಡೆಯಲಿಲ್ಲ? ಆಸ್ಪತ್ರೆಯ ಭದ್ರತಾ ಸಿಬ್ಬಂದಿ ಆತನನ್ನು ತಡೆಯಲು ಪ್ರಯತ್ನಿಸಲಿಲ್ಲವೇ? ಈ ಕುರಿತು ಆಸ್ಪತ್ರೆ ಆಡಳಿತ ಪ್ರಶ್ನಿಸಿದಾಗ, ಈ ಬಗ್ಗೆ ಸಮಿತಿ ರಚಿಸಿ ತನಿಖೆ ನಡೆಸಲಾಗುವುದು. ತನಿಖಾ ವರದಿ ಬಂದ ನಂತರ ತಪ್ಪಿತಸ್ಥ ನೌಕರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತೆ ಎಂದು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ.

ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

Last Updated : Jan 21, 2022, 2:28 PM IST

For All Latest Updates

ABOUT THE AUTHOR

...view details