ಕರ್ನಾಟಕ

karnataka

ETV Bharat / bharat

ಮದುವೆ ಸಮಾರಂಭದ ವೇಳೆ ಕುಸಿದು ಬಿದ್ದ ಮನೆಯ ಬಾಲ್ಕನಿ: 20ಕ್ಕೂ ಅಧಿಕ ಮಂದಿಗೆ ಗಾಯ- VIDEO

ಔರಂಗಾಬಾದ್‌ನ ನೌಗಢ್ ಪಂಚಾಯತ್‌ನ ಹರಿಬರಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮದ ವೇಳೆ ಮನೆಯ ಬಾಲ್ಕನಿ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದೆ.

house visor collapsed during marriage ceremony
ಮದುವೆ ಸಮಾರಂಭದ ವೇಳೆ ಕುಸಿದು ಬಿದ್ದ ಮನೆಯ ಬಾಲ್ಕನಿ

By

Published : Jun 15, 2022, 8:45 AM IST

ಔರಂಗಾಬಾದ್ (ಬಿಹಾರ):ವಿವಾಹ ಕಾರ್ಯಕ್ರಮದ ವೇಳೆ ಮನೆಯ ಬಾಲ್ಕನಿ ಕುಸಿದು ಬಿದ್ದಿರುವ ಘಟನೆ ಔರಂಗಾಬಾದ್‌ನ ಸದರ್ ಬ್ಲಾಕ್‌ನ ಮುಫಾಸಿಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ(ಜೂ.13) ರಾತ್ರಿ ನಡೆದಿದೆ. ಅವಘಡದಲ್ಲಿ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಮದುವೆ ಸಮಾರಂಭದ ವೇಳೆ ಕುಸಿದು ಬಿದ್ದ ಮನೆಯ ಬಾಲ್ಕನಿ

ಜೂ.13ರ ರಾತ್ರಿ ಕ್ಷೇತ್ರದ ನೌಗಢ ಪಂಚಾಯಿತಿಯ ಹರಿಬರಿ ಗ್ರಾಮದಲ್ಲಿ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವೇಳೆ ಏಕಾಏಕಿ ಮನೆಯ ಬಾಲ್ಕನಿ ಕುಸಿದು ಬಿದ್ದಿದೆ. ಗ್ರಾಮಸ್ಥರು, ಎಲ್ಲ ಗಾಯಾಳುಗಳನ್ನು ಚಿಕಿತ್ಸೆಗಾಗಿ ಸದರ್ ಆಸ್ಪತ್ರೆಗೆ ಕರೆದೊಯ್ದರು. ಗಾಯಾಳುಗಳ ಸ್ಥಿತಿ ಚಿಂತಾಜನಕವಾಗಿರುವ ಹಿನ್ನೆಲೆ ಹೆಚ್ಚಿನ ಚಿಕಿತ್ಸೆಗಾಗಿ ಮಗಧ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.

ಗಾಯಗೊಂಡವರಲ್ಲಿ ಹೆಚ್ಚಿನವರು ಮಹಿಳೆಯರು: ಮದುವೆ ಕಾರ್ಯಕ್ರಮದ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಮತ್ತು ಹುಡುಗಿಯರು ಬಾಲ್ಕನಿಯಲ್ಲಿ ನಿಂತಿದ್ದರು. ಇದರಿಂದಾಗಿ ಗಾಯಗೊಂಡವರಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಿದೆ.

ಇದನ್ನೂ ಓದಿ:101 ಗಂಟೆಗಳ ಕಾಲ ಯಮನ ವಿರುದ್ಧ ಹೋರಾಡಿ ಗೆದ್ದ ಬಾಲಕ.. ಬೋರ್​ವೆಲ್​ನಲ್ಲಿ ಬಿದ್ದಿದ್ದ ರಾಹುಲ್ ಜೀವಂತ! ​

For All Latest Updates

ABOUT THE AUTHOR

...view details