ಕರ್ನಾಟಕ

karnataka

ETV Bharat / bharat

ಹೋಮ್ ಥಿಯೇಟರ್ ಸ್ಫೋಟ.. ನವವಿವಾಹಿತ ಸಾವು - ಆರು ಜನರಿಗೆ ಗಾಯ - ರೆಂಗಾಖರ್ ಪೊಲೀಸ್ ಠಾಣೆ

ಮದುವೆಗೆ ಉಡುಗೊರೆಯಾಗಿ ನೀಡಿದ್ದ ಹೋಮ್ ಥಿಯೇಟರ್ ಸ್ಫೋಟಗೊಂಡು ಸ್ಥಳದಲ್ಲೇ ನವವಿವಾಹಿತ ಮೃತಪಟ್ಟು, ಆರು ಜನ ತೀವ್ರವಾಗಿ ಗಾಯಗೊಂಡಿರುವ ಘಟನೆ ಛತ್ತೀಸ್​ಗಢದ ಕವರ್ಧಾದಲ್ಲಿ ಭಾನುವಾರ ನಡೆದಿದೆ.

ಹೋಮ್ ಥಿಯೇಟರ್ ಸ್ಪೋಟ
ಹೋಮ್ ಥಿಯೇಟರ್ ಸ್ಪೋಟ

By

Published : Apr 3, 2023, 5:49 PM IST

ಕವರ್ಧಾ (ಛತ್ತೀಸ್‌ಗಢ):ಛತ್ತೀಸ್‌ಗಢದ ಕವರ್ಧಾದಲ್ಲಿ ಭಾನುವಾರ ನಡೆದ ಹೋಮ್ ಥಿಯೇಟರ್ ಸ್ಫೋಟದಲ್ಲಿ ನವವಿವಾಹಿತರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೇ, ಘಟನೆಯಲ್ಲಿ ಆರು ಮಂದಿ ಗಾಯಗೊಂಡಿದ್ದಾರೆ ಎಂಬುದಾಗಿ ತಿಳಿದು ಬಂದಿದೆ. ಕವರ್ಧಾ ಜಿಲ್ಲೆಯ ರೆಂಗಾಖರ್ ಪೊಲೀಸ್ ಠಾಣೆ ವ್ಯಾಪ್ತಿಯ ಚಮರಿ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಹೇಮೇಂದ್ರ ಮೆರವಿ ಎಂದು ಗುರುತಿಸಲಾಗಿದೆ.

ಹೋಮ್ ಥಿಯೇಟರ್ ಸ್ಪೋಟದಿಂದ ಏಳು ಜನರಿಗೆ ಗಾಯ: ಮೂಲಗಳ ಪ್ರಕಾರ ಹೋಮ್ ಥಿಯೇಟರ್ ಸ್ಪೋಟ ಪ್ರಕರಣದ ಎರಡು ದಿನಗಳ ಮೊದಲು ಹೇಮೇಂದ್ರ ವಿವಾಹವಾಗಿದ್ದಾರೆ. ಅವರ ಮದುವೆಗೆ ಹೋಮ್ ಥಿಯೇಟರ್ ಉಡುಗೊರೆಯಾಗಿ ಕೊಡಲಾಗಿತ್ತು. ಅವರು ಉಡುಗೊರೆ ತೆರೆದು ಅದನ್ನು ವಿದ್ಯುತ್ ಪ್ಲಗ್‌ಗೆ ಜೋಡಿಸಿದಾಗ, ಹೋಮ್ ಥಿಯೇಟರ್ ಸ್ಫೋಟಗೊಂಡಿದೆ. ಇದರಿಂದಾಗಿ ಹೇಮೇಂದ್ರ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಅಲ್ಲದೇ, ಬೆಂಕಿಯ ರಭಸಕ್ಕೆ ಆರು ಜನರು ತೀವ್ರವಾಗಿ ಗಾಯಗೊಂಡಿದ್ದಾರೆ. ನಂತರ ಸ್ಥಳೀಯರು ಘಟನೆಯ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಗಾಯಗೊಂಡವರಿಗೆ ಚಿಕಿತ್ಸೆ:ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಘಟನೆ ಕುರಿತು ತನಿಖೆ ಆರಂಭಿಸಿದ್ದಾರೆ. ಘಟನೆಯ ಬಗ್ಗೆ ಜಿಲ್ಲೆಯ ಸಹಾಯಕ ಪೊಲೀಸ್ ಅಧೀಕ್ಷಕ (ಎಎಸ್‌ಪಿ) ಮನೀಶಾ ಠಾಕೂರ್ ರಾವುಟೆ ಮಾತನಾಡಿ, 'ರೆಂಗಾಖರ್ ಪೊಲೀಸ್ ಠಾಣೆ ವ್ಯಾಪ್ತಿಯ ಚಾಮರಿ ಗ್ರಾಮದಲ್ಲಿ ಹೋಮ್ ಥಿಯೇಟರ್ ಸ್ಫೋಟದಲ್ಲಿ ಇಬ್ಬರು ಸಾವನ್ನಪ್ಪಿದ್ದಾರೆ. ಅಲ್ಲದೇ ಘಟನೆಯಲ್ಲಿ ಆರು ಜನರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಅಲ್ಲಿ ಅವರಿಗೆ ಚಿಕಿತ್ಸೆಯೂ ಮುಂದುವರೆದಿದೆ. ಈ ಸ್ಫೋಟಕ್ಕೆ ನಿಖರವಾದ ಕಾರಣ ಇನ್ನೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪ್ರಯೋಗದ ವೇಳೆ ಸ್ಪೋಟ :ಮತ್ತೊಂದು ಕಡೆ ನವದೆಹಲಿಯ ಪ್ರಯೋಗಾಲಯದಲ್ಲಿ ನಡೆಸಲಾಗುತ್ತಿದ್ದ ಪ್ರಯೋಗದ ವೇಳೆ ಸ್ಫೋಟ ಸಂಭವಿಸಿ ಇಬ್ಬರು ವಿದ್ಯಾರ್ಥಿಗಳು ಹಾಗೂ ಶಿಕ್ಷಕಿ ಗಾಯಗೊಂಡಿದ್ದರು. ಶಿಕ್ಷಕರನ್ನು ಏಮ್ಸ್ ಟ್ರಾಮಾ ಸೆಂಟರ್‌ಗೆ ದಾಖಲಿಸಲಾಗಿದ್ದು, ಕಾಲೇಜಿನಲ್ಲಿ ಪ್ರಥಮ ಚಿಕಿತ್ಸೆ ನೀಡಿದ ಬಳಿಕ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಲಾಗಿದೆ. ಸ್ಫೋಟ ಸಂಭವಿಸಿದಾಗ ಶಿಕ್ಷಕರು ಸಾವಯವ ರಸಾಯನಶಾಸ್ತ್ರ ತರಗತಿಯಲ್ಲಿ ಬಟ್ಟಿ ಇಳಿಸುವ ವಿಧಾನವನ್ನು ಪ್ರದರ್ಶಿಸುತ್ತಿದ್ದರು ಎಂಬುದಾಗಿ ತಿಳಿದು ಬಂದಿದೆ.

ಸಿಲಿಂಡರ್​​ ಸ್ಪೋಟ 9 ಜನರಿಗೆ ಗಾಯ: ಗ್ರೇಟರ್ ನೋಯ್ಡಾದ ಜೆವಾರ್‌ನಲ್ಲಿ ನಿರ್ಮಾಣ ಹಂತದಲ್ಲಿರುವ ನೋಯ್ಡಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗ್ಯಾಸ್​ ಸಿಲಿಂಡರ್​ ಸ್ಪೋಟಗೊಂಡು 9 ಜನ ಕಾರ್ಮಿಕರು ಗಾಯಗೊಂಡಿರುವ ಘಟನೆ (ಜನವರಿ 19-2023) ಸಂಭವಿಸಿತ್ತು.

ನಿಲ್ದಾಣದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಸಿಲಿಂಡರ್​ ಸ್ಪೋಟಗೊಂಡಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದು, ಅದರಲ್ಲಿ ಇಬ್ಬರ ಸ್ಥಿತಿ ಚಿಂತಾಜನಕವಾಗಿತ್ತು. ಇನ್ನು ಗಾಯಾಳುಗಳನ್ನು ಕೂಡಲೇ ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸ್​ ಅಧಿಕಾರಿಗಳು ದೌಡಾಯಿಸಿ ಘಟನೆಯ ಬಗ್ಗೆ ಮಾಹಿತಿ ಕಲೆ ಹಾಕಿದ್ದರು. ಘಟನೆಗೆ ಮೂಲ ಕಾರಣ ತಿಳಿದು ಬಂದಿರಲಿಲ್ಲ. ಇನ್ನು ಘಟನೆ ಬಗ್ಗೆ ಕಾಮಗಾರಿಯ ಗುತ್ತಿಗೆಯನ್ನು ಪಡೆದಿರುವ ಖಾಸಗಿ ಕಂಪನಿಯ ಅಧಿಕಾರಿಗಳು ಯಾವುದೇ ಹೇಳಿಕೆಯನ್ನು ನೀಡಿರಲಿಲ್ಲ.

ಇದನ್ನೂ ಓದಿ :ಗ್ರೇಟರ್​ ನೋಯ್ಡಾದಲ್ಲಿ ಸಿಲಿಂಡರ್​​ ಸ್ಪೋಟ: 9 ಜನರಿಗೆ ಗಾಯ

ABOUT THE AUTHOR

...view details