ಕರ್ನಾಟಕ

karnataka

ETV Bharat / bharat

ಆ್ಯಂಟಿರೆಟ್ರೋವೈರಲ್​ ಔಷಧಿ ಕೊರತೆ: ಹೆಚ್​ಐವಿ ಸೋಂಕಿತರಿಂದ ಪ್ರತಿಭಟನೆ

ಅಗತ್ಯ ಔಷಧಗಳ ಕೊರತೆ ಉಂಟಾಗಿರುವ ಕಾರಣ ಹೆಚ್​ಐವಿ​ ಸೋಂಕಿತರು ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

hiv-patients-protest-against-naco
ಚ್​ಐವಿ ಸೋಂಕಿತರಿಂದ ಪ್ರತಿಭಟನೆ

By

Published : Jul 26, 2022, 11:24 AM IST

ನವದೆಹಲಿ:ಆ್ಯಂಟಿರೆಟ್ರೋವೈರಲ್ ಔಷಧಗಳ ಕೊರತೆಯಿದೆ ಎಂದು ಆರೋಪಿಸಿ ಹೆಚ್‌ಐವಿ ರೋಗಿಗಳು ದೆಹಲಿಯಲ್ಲಿರುವ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆಯ ಕಚೇರಿ ಎದುರು ಇಂದು ಪ್ರತಿಭಟನೆ ನಡೆಸುತ್ತಿದ್ದಾರೆ. ನಮಗೆ ಔಷಧಿ ಕೊಡಿ, ಔಷಧಿ ಕೊಡಿ ಹೇಳಿದ್ದನ್ನೇ ಮತ್ತೆ ಮತ್ತೆ ಹೇಳಬೇಡಿ, ನಾವು ನಮ್ಮ ಹಕ್ಕನ್ನು ಕೇಳುತ್ತಿದ್ದೇವೆ, ಭಿಕ್ಷೆ ಬೇಡುತ್ತಿಲ್ಲ ಎಂಬ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಮಾಧ್ಯಮಗಳ ಜೊತೆ ಮಾತನಾಡಿದ ಸೋಂಕಿತ ಪ್ರತಿಭಟನಾಕಾರರು, "ಎಚ್ಐವಿ ಸೋಂಕಿತರಿಗೆ ಅಗತ್ಯವಿರುವ ಔಷಧಿಗಳ ಕೊರತೆಯಿದೆ. ಔಷಧಿಗಳ ಲಭ್ಯತೆ ಇದೆ ಎಂದು ಅಧಿಕಾರಿಗಳು ಪದೇ ಪದೆ ಸುಳ್ಳು ಹೇಳುತ್ತಿದ್ದಾರೆ. ಅಗತ್ಯ ಮಾತ್ರೆಗಳು ಇಲ್ಲದಿದ್ದರೆ ಭಾರತವನ್ನು ಹೆಚ್ಐವಿ ಮುಕ್ತ ದೇಶ ಮಾಡುವುದು ಹೇಗೆ" ಎಂದು ಪ್ರಶ್ನಿಸಿದ್ದಾರೆ.

"ದೆಹಲಿ ಮತ್ತು ನೆರೆಯ ರಾಜ್ಯಗಳಲ್ಲಿ ಕಳೆದ 5 ತಿಂಗಳುಗಳಿಂದ ಹೆಚ್‌ಐವಿ ರೋಗಿಗಳಿಗೆ ಅಗತ್ಯವಿರುವ ನಿರ್ಣಾಯಕ ಜೀವರಕ್ಷಕ ಔಷಧಗಳು ಲಭ್ಯವಿಲ್ಲದ ಕಾರಣ ಪ್ರತಿಭಟನೆ ನಡೆಸುತ್ತಿದ್ದೇವೆ. ಅಧಿಕಾರಿಗಳಿಗೆ ಈ ಬಗ್ಗೆ ಹಲವು ಬಾರಿ ಪತ್ರ ಬರೆದರೂ ಪ್ರಯೋಜನವಾಗಿಲ್ಲ" ಎಂದು ಮತ್ತೊಬ್ಬ ಸೋಂಕಿತರು ಅಳಲು ತೋಡಿಕೊಂಡರು.

ಇದನ್ನೂಓದಿ:ಭದ್ರತೆ ಸ್ಥಾಪಿಸಲಾಗಿದೆ, ಭಾರತೀಯರೇ ಅಫ್ಘಾನಿಸ್ತಾನಕ್ಕೆ ವಾಪಸ್​ ಬನ್ನಿ: ತಾಲಿಬಾನ್​

ABOUT THE AUTHOR

...view details